AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ED Raid: ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೂ ಇಡಿ ದಾಳಿ

ಬೆಳ್ಳಂ ಬೆಳಿಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರಿನ ಶಿವಾಜಿನಗರದ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ED Raid: ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೂ ಇಡಿ ದಾಳಿ
ಮಾಜಿ ಸಚಿವ ರೋಷನ್ ​ಬೇಗ್
TV9 Web
| Updated By: sandhya thejappa|

Updated on:Aug 05, 2021 | 11:26 AM

Share

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed Khan) ಮನೆ ಮೇಲೆ ಇಂದು (ಆಗಸ್ಟ್​ 5) ಐಟಿ ಅಧಿಕಾರಿಗಳು (IT) ದಾಳಿ ನಡೆಸಿದಂತೆ ಮಾಜಿ ಸಚಿವ ರೋಷನ್ ಬೇಗ್ (Roshan Baig) ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶಾಕ್ ನೀಡಿದ್ದಾರೆ. ಬೆಳ್ಳಂ ಬೆಳಿಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರಿನ ಶಿವಾಜಿನಗರದ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ವಿದೇಶಿ ವ್ಯವಹಾರಗಳು ಕಂಡು ಬಂದ ಹಿನ್ನೆಲೆ, ರೋಷನ್ ಬೇಗ್‌ಗೆ ಸಂಬಂಧಿಸಿದ 6 ಕಡೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಡಿ ಅಧಿಕಾರಿಗಳು ಸಿಆರ್‌ಪಿಎಫ್ ಭದ್ರತೆ ನೇತೃತ್ವದಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದಾರೆ. ಇತ್ತೀಚೆಗೆ ಐಎಎಂ ಕೇಸ್​ನಲ್ಲಿ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ಆದೇಶಿಸಿತ್ತು.

ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್​.ರೋಷನ್ ಬೇಗ್ ಆಸ್ತಿ ಜಪ್ತಿಗೆ ಹೈಕೊರ್ಟ್​ ಆದೇಶ ನೀಡಿತ್ತು. ಅದರಂತೆ ಇಂದು ಸರ್ಕಾರ ರೋಷನ್ ಬೇಗ್ ಆಸ್ತಿಯನ್ನು ಜಪ್ತಿಮಾಡಿದೆ. ರೋಷನ್ ಬೇಗ್​ಗೆ ಸೇರಿದ ಸ್ಥಿರಾಸ್ತಿ, ಬ್ಯಾಂಕ್ ಅಕೌಂಟ್​ನ ಜಪ್ತಿ ಮಾಡಲಾಗಿದೆ.

ಐಎಂಎಯಿಂದ ಸರ್ಕಾರಿ ಶಾಲೆಗೆ 10 ಕೋಟಿ ದೇಣಿಗೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ದೇಣಿಗೆ ನೀಡಿರುವುದರಿಂದ ಹಿಂದಿರುಗಿಸಲು ಸಾಧ್ಯವಿಲ್ಲ ಅಂತ ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ವಾದ ಮಂಡಿಸಿದ್ದಾರೆ. ಸಿಬಿಐ ಆರೋಪ ಪಟ್ಟಿ ದಾಖಲಿಸಿದ್ದರಿಂದ ಇಡಿ ತನಿಖೆ ನಡೆಸುತ್ತಿದೆ. ಅಕ್ರಮ ಹಣ ಪ್ರಸರಣದ ಬಗ್ಗೆ ಇಡಿ ತಂಡ ತನಿಖೆ ನಡೆಸುತ್ತಿದೆ.

ದಾಳಿಯ ವೇಳೆ ರೋಷನ್ ಬೇಗ್ ಮನೆಯಲ್ಲೇ ಇದ್ದಾರೆ. ಇಡಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ. ಅಧಿಕಾರಿಗಳು ಎಲ್ಲಾ ಲಾಕರ್​ಗಳನ್ನು ಓಪನ್ ಮಾಡಿಸಿ, ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ.

ರೋಷನ್ ಬೇಗ್ ಪುತ್ರಿಯ ಮನೆ ಮೇಲೂ ED ದಾಳಿ ಬೆಂಗಳೂರಿನ ಭೂಪಸಂದ್ರದಲ್ಲಿರುವ ರೋಷನ್ ಬೇಗ್ ಪುತ್ರಿಯ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ವರು ಅಧಿಕಾರಿಗಳ ತಂಡದಿಂದ ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ

IT Raid: ಶಾಸಕ ಜಮೀರ್ ಅಹಮ್ಮದ್ ಭವ್ಯ ಬಂಗಲೆ ಮೇಲೆ ಐಟಿ ದಾಳಿ; ಶಾಸಕ ಜಮೀರ್ ಆಸ್ತಿಪಾಸ್ತಿ ಎಷ್ಟಿದೆ? ವಿವರ ಇಲ್ಲಿದೆ

ಶಾಸಕ ಜಮೀರ್ ಅಹ್ಮದ್ ಮನೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ಐಟಿ ದಾಳಿ

(Former minister Roshan baigs house has been attacked by ED officials)

Published On - 9:28 am, Thu, 5 August 21