ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸ್ರಲ್ಲಿ ತಾಯ್ನಾಡಿಗೆ ದ್ರೋಹ, ಅಮೂಲ್ಯ, ಆರ್ದ್ರಾಳ ಹಿಂದಿದೆಯಾ ಕಾಣದ ಕೈ?

ಬೆಂಗಳೂರು: ಭಾರತದಲ್ಲಿ ಕೆಲವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ, ಸ್ವೇಚ್ಛಾಚಾರಕ್ಕೂ ವ್ಯತ್ಯಾಸವೇ ಗೊತ್ತಿಲ್ಲ ಅಂತಾ ಕಾಣ್ತಿದೆ. ಯಾಕಂದ್ರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದ ನಡೆದಿರೋ ಘಟನೆಗಳನ್ನ ನೋಡ್ತಿದ್ರೆ. ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರ ಮೇಳೈಸ್ತಿದೆ. ಇದನ್ನ ನೋಡ್ತಿದ್ರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿವೆಯಾ ಅನ್ನೋ ಅನುಮಾನ ಶುರುವಾಗಿದೆ. ಜನವರಿ 09, 2020 – ಮೈಸೂರಿನಲ್ಲಿ ಫ್ರೀ ಕಾಶ್ಮೀರ ಫಲಕ ಫೆಬ್ರವರಿ 20, 2020 – ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಘೋಷಣೆ ಫೆಬ್ರವರಿ 21, 2020 – ಬೆಂಗಳೂರಿನ […]

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸ್ರಲ್ಲಿ ತಾಯ್ನಾಡಿಗೆ ದ್ರೋಹ, ಅಮೂಲ್ಯ, ಆರ್ದ್ರಾಳ ಹಿಂದಿದೆಯಾ ಕಾಣದ ಕೈ?
Follow us
ಸಾಧು ಶ್ರೀನಾಥ್​
|

Updated on:Feb 22, 2020 | 7:11 AM

ಬೆಂಗಳೂರು: ಭಾರತದಲ್ಲಿ ಕೆಲವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ, ಸ್ವೇಚ್ಛಾಚಾರಕ್ಕೂ ವ್ಯತ್ಯಾಸವೇ ಗೊತ್ತಿಲ್ಲ ಅಂತಾ ಕಾಣ್ತಿದೆ. ಯಾಕಂದ್ರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದ ನಡೆದಿರೋ ಘಟನೆಗಳನ್ನ ನೋಡ್ತಿದ್ರೆ. ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರ ಮೇಳೈಸ್ತಿದೆ. ಇದನ್ನ ನೋಡ್ತಿದ್ರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿವೆಯಾ ಅನ್ನೋ ಅನುಮಾನ ಶುರುವಾಗಿದೆ.

ಜನವರಿ 09, 2020 – ಮೈಸೂರಿನಲ್ಲಿ ಫ್ರೀ ಕಾಶ್ಮೀರ ಫಲಕ ಫೆಬ್ರವರಿ 20, 2020 – ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಘೋಷಣೆ ಫೆಬ್ರವರಿ 21, 2020 – ಬೆಂಗಳೂರಿನ ಟೌನ್​ಹಾಲ್ ಬಳಿ ಫ್ರೀ ಕಾಶ್ಮೀರ ಫಲಕ

ಅಂದು ಮೈಸೂರು.. ಮೊನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್.. ನಿನ್ನೆ ಟೌನ್​ಹಾಲ್.. ಎಲ್ಲೆಡೆ ನಡೆಯುತ್ತಿದ್ದ ಪ್ರತಿಭಟನೆಗಳು ಬೇರೆ ಬೇರೆಯದ್ದಾದ್ರೂ. ಅಲ್ಲಿ ಕೆಲವರು ಬಂದಿದ್ದು ಮಾತ್ರ ಒಂದೇ ಉದ್ದೇಶ ಈಡೇರಿಸಿಕೊಳ್ಳೋಕಾ ಅನ್ನೋ ಪ್ರಶ್ನೆ ಈಗ ಎಲ್ಲರನ್ನ ಕಾಡಲು ಶುರುವಾಗಿದೆ. ಯಾಕಂದ್ರೆ.. ಯಾವ ರಾಜ್ಯವನ್ನ ಸರ್ವಜನಾಂಗದ ಶಾಂತಿಯ ತೋಟ ಅಂತಾ ಕರೀತಾರೋ. ಯಾವ ರಾಜ್ಯವನ್ನ ಶಾಂತಿಯ ನೆಲೆವೀಡು ಅಂತಾ ಕರೀತಾರೋ. ಯಾವ ರಾಜ್ಯದಲ್ಲಿ ಬುದ್ಧ.. ಬಸವ.. ಸರ್ವಜ್ಞ.. ಶಿಶುನಾಳ ಷರೀಫರನ್ನ ಒಂದೇ ಅಂತಾ ತಿಳಿತಾರೋ.

ಅಂತಾ ರಾಜ್ಯ ಕರ್ನಾಟಕದಲ್ಲಿ ಬೆಂಕಿ ಹಚ್ಚಿ ಅದ್ರಲ್ಲಿ ಚಳಿ ಕಾಯಿಸಿಕೊಳ್ಳೋಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾಯ್ತಿದ್ದಾರಾ ಅನ್ನೋ ಪ್ರಶ್ನೆ ಧಿಗ್ಗನೆ ಎದುರಾಗುವಂತೆ ಮಾಡಿದೆ. ಇದಕ್ಕೆ ಕಾರಣ ಅಂದ್ರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಕೆಲವರು ಮಾಡ್ತಿರೋ ಸ್ವೇಚ್ಛಾಚಾರದ ಕೃತ್ಯಗಳಿಂದ. ಸಮಾಜದಲ್ಲಿ ಶಾಂತಿ ಕದಡುವ ವಾತಾವರಣ ನಿರ್ಮಾಣ ಆಗ್ತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ಅಣಕಿಸುತ್ತಿದೆ ಕೆಲವರ ಸ್ವೇಚ್ಛಾಚಾರ! ಭಾರತದಲ್ಲಿ ನೆಲೆಸಿರುವ ಎಲ್ಲ ಪ್ರಜೆಗಳಿಗೆ ಭಾರತದ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋ ಹಕ್ಕು ನೀಡಿದೆ. ಇದರ ಪ್ರಕಾರ ಸರ್ಕಾರದ ನೀತಿಗಳು, ಜನಪ್ರತಿನಿಧಿಗಳು, ಆಡಳಿತ ವರ್ಗ ಜನ ವಿರೋಧಿ ನೀತಿಗಳನ್ನು ಜನರ ಮೇಲೆ ಹೇರಿದಾಗ ಅದನ್ನ ವಿರೋಧಿಸಲು ಎಲ್ಲರಿಗೂ ಹಕ್ಕಿದೆ. ಆದ್ರೆ.. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರ ಮಾಡೋಕೆ ಯಾರಿಗೂ ಹಕ್ಕಿಲ್ಲ.

ಆದ್ರೆ, ದುರಂತ ಅಂದ್ರೆ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಕೆಲವರು ಸ್ವೇಚ್ಛಾಚಾರ ಮಾಡ್ತಿದ್ದಾರೆ. ಈ ಮೂಲಕ ಪ್ರತಿಭಟನೆಗಳನ್ನ ಯಾಕಾದ್ರೂ ಮಾಡ್ತಾರೋ ಅಂತಾ ಜನ ತಲೆ ತಲೆ ಚಚ್ಚಿಕೊಳ್ಳುವಂತೆ ಮಾಡಿ. ಪ್ರತಿಭಟನೆ ಅಂದ್ರೆ ಗಲಭೆ ಅನ್ನೋ ಮಟ್ಟಕ್ಕೆ ಇಳಿಸ್ತಿದ್ದಾರೆ.

ಇದೆಲ್ಲಕ್ಕಿಂತಾ ಮುಖ್ಯವಾಗಿ ಈ ಪ್ರತಿಭಟನೆಗಳಲ್ಲಿ ಭಾಗವಹಿಸ್ತಿರೋ ಕೆಲವು ತಲೆಮಾಸಿದ ಯುವತಿಯರು. ಅರೆಬೆಂದ ಚಿಂತಕಿಯರು. ಚಿಲ್ಟು ಹೋರಾಟಗಾರ್ತಿಯರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡ್ತಿವೆಯಾ ಅನ್ನೋ ಗಂಭೀರ ಪ್ರಶ್ನೆ ಎದುರಾಗುವಂತೆ ಮಾಡಿದೆ.

ಯಾಕಂದ್ರೆ, ಇಲ್ಲೆಲ್ಲಾ ದೇಶದ್ರೋಹದ ಹೇಳಿಕೆಗಳನ್ನ. ದೇಶದ್ರೋಹಿ ಭಿತ್ತಿಪತ್ರಗಳನ್ನ ಹಿಡಿದಿರೋರೆಲ್ಲಾ. 20ರ ಆಸುಪಾಸಿನವರೇ. ಅದ್ರಲ್ಲೂ ಯುವತಿಯರು. ಇವರು ಹಿಡಿದಿರೋದು ಫ್ರೀ ಕಾಶ್ಮೀರ ಭಿತ್ತಿಪತ್ರಗಳು. ಬಾಯಿ ಬಿಟ್ರೆ ಬರೋದು ಪಾಕ್​ ಪರ ಘೋಷಣೆಗಳು. ಇದೆಲ್ಲವನ್ನ ನೋಡ್ತಿದ್ರೆ, ರಾಜ್ಯದಲ್ಲಿ ನೆಲೆಸಿರೋ ಶಾಂತಿಯನ್ನ ಕದಡಲು ಯಾರಾದ್ರೂ ಪ್ಲ್ಯಾನ್ ಮಾಡಿದ್ದಾರಾ ಅನ್ನೋ ಅನುಮಾನ ಬಲವಾಗ್ತಿದೆ.

ಗುರುವಾರ ಬೆಂಗಳೂರಿನ ಹೃದಯ ಭಾಗ ಫ್ರೀಡಂಪಾರ್ಕ್​ನಲ್ಲಿ ಅಮೂಲ್ಯ ಅನ್ನೋ ವಿಚಾರವ್ಯಾಧಿ ಪಾಕ್ ಪರ ಘೋಷಣೆ ಕೂಗಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದ್ಲು. ಆ ಐನಾತಿ ಮಾಡಿದ ಕೆಲಸ ಮರೆಯೋ ಮುನ್ನವೇ. ನಿನ್ನೆ ಆರ್ದ್ರಾ ಅನ್ನೋ ಸುಪನಾತಿ ಟೌನ್​ಹಾಲ್ ಎದುರು ಹಿಂದೂ ಜಾಗರಣ ವೇದಿಕೆ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಅನ್ನೋ ಭಿತ್ತಿ ಫಲಕ ಹಿಡಿದು. ಅಮೂಲ್ಯ ಮಾತ್ರ ಯಾಕೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯೋದು. ನಾನು ಬರ್ತೀನಿ ಅಂತಾ ಹಠಕ್ಕೆ ಬಿದ್ದು ಸೆಂಟ್ರಲ್ ಜೈಲು ಪಾಲಾಗಿದ್ದಾಳೆ. ನಿನ್ನೆ ಮಧ್ಯಾಹ್ನ ಎಸ್​ಜೆ ಪಾರ್ಕ್ ಪೊಲೀಸರು ಆರ್ದ್ರಾ ಅನ್ನೋ ಐಲು ಗಿರಾಕಿಯನ್ನ ವಶಕ್ಕೆ ಪಡೆದಿದ್ರು. ಇಂತಾ ಐಲು ಗಿರಾಕಿಗೂ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಟೌನ್​ಹಾಲ್ ಬಳಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸ್ತಿದ್ದ ವೇಳೆ ಫ್ರೀ ಕಾಶ್ಮೀರ್ ಭಿತ್ತಿಪತ್ರ ಪ್ರದರ್ಶಿಸಿದೋಳಿಗೆ. ಕಾಶ್ಮೀರದ ಅಸಲಿ ಪರಿಸ್ಥಿತಿ ಹೇಗಿದೆ ಅನ್ನೋದಾದ್ರೂ ಗೊತ್ತಾ ಅನ್ನೋ ಪ್ರಶ್ನೆ ಕೂಡ ಏಳುತ್ತೆ. ಯಾಕಂದ್ರೆ, ಕಾಶ್ಮೀರದಲ್ಲಿ ಎಲ್ಲವೂ ನೆಟ್ಟಗೆ ಇದ್ದಿದ್ರೆ ಅಲ್ಲಿನ ಯುವಕರು ಭಾರತೀಯ ಸೇನೆಯ ಮೇಲೆ ಕಂಡ ಕಂಡಲ್ಲಿ ಕಲ್ಲೆಸೆಯುತ್ತಿರಲಿಲ್ಲ. ಕಲ್ಲೆಸೆದು ಯೋಧರನ್ನ ಇಕ್ಕಟ್ಟಿಗೆ ಸಿಲುಕಿಸ್ತಿರಲಿಲ್ಲ ಅನ್ನೋ ಅಂಶ ಮರೆತು ಹೋಗಿದ್ಯಾ ಅಂತಲೂ ಕೇಳಬೇಕಿದೆ.

ಇದರ ಜೊತೆಗೆ ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರಲು ನೆತ್ತರು ಸುರಿಸಿದ.. ಸುರಿಸುತ್ತಿರುವ.. ಸುರಿಸಲು ಸಿದ್ಧವಾಗಿರೋ ನಮ್ಮ ಹೆಮ್ಮೆಯ ಸೈನಿಕರ ತ್ಯಾಗ-ಬಲಿದಾನಗಳಿಗೆ ಬೆಲೆಯೇ ಇಲ್ವಾ ಅನ್ನೋ ಪ್ರಶ್ನೆಯನ್ನು ಕೇಳಬೇಕಿದೆ. ಇಂತೋರಿಗೆ ನಮ್ಮ ನಾಳೆಗಳಿಗಾಗಿ ತಮ್ಮ ಇಂದಿನ ದಿನಗಳನ್ನ ಬಲಿಕೊಡ್ತಿರೋ ಸೈನಿಕರ ತ್ಯಾಗ ಅರ್ಥವಾಗಿದ್ದಿದ್ರೆ ಹೀಗೆ ಫ್ರೀ ಕಾಶ್ಮೀರ.. ಪಾಕ್ ಪರ ಘೋಷಣೆ ಕೂಗಿ.. ಬಾಯಿಗೆ ಬಂದಿದ್ದನ್ನ ಬಡಬಡಿಸ್ತಿರಲಿಲ್ಲ ಅನ್ನೋದು ಮಾತ್ರ ಅಕ್ಷರಶಃ ಸತ್ಯ.

Published On - 7:08 am, Sat, 22 February 20