ಮಾರ್ಗಸೂಚಿ ಪಾಲಿಸದ ಶಾಲೆಗಳಿಗೆ ನೋಟಿಸ್​: ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್

| Updated By: ಸಾಧು ಶ್ರೀನಾಥ್​

Updated on: Jan 01, 2021 | 3:42 PM

ಹಾಸನ ಡಿಡಿಪಿಐ, ಚಿಕ್ಕಬಳ್ಳಾಪುರ ಡಿಡಿಪಿಐಗೆ ಮಾರ್ಗಸೂಚಿ ಪಾಲಿಸದೇ ಇರುವ ಬಗ್ಗೆ ನೋಟೀಸ್ ಕೊಟ್ಟು ಉತ್ತರ ಪಡೆಯುತ್ತೇವೆ. ಅಲ್ಲದೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳಲ್ಲಿ ಕೆಲ ಕಂಡಕ್ಟರ್​ಗಳು ವಿದ್ಯಾರ್ಥಿಗಳಿಗೆ ಪಾಸ್​ನಲ್ಲಿ ಸಂಚಾರಕ್ಕೆ ಅವಕಾಶ ಕೊಟ್ಟಿಲ್ಲ.

ಮಾರ್ಗಸೂಚಿ ಪಾಲಿಸದ ಶಾಲೆಗಳಿಗೆ ನೋಟಿಸ್​: ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್
ಸಚಿವ ಸುರೇಶ್​ ಕುಮಾರ್​
Follow us on

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಶಾಲಾ ಕಾಲೇಜು ಆರಂಭವಾಗಿವೆ. ರಾಜ್ಯದಲ್ಲಿ 3 ಸಾವಿರ ಪಿಯು ಕಾಲೇಜುಗಳಿವೆ. ಹಾಗೂ 60 ಸಾವಿರ ಹೈಸ್ಕೂಲ್ ಇವೆ. ರಾಜ್ಯದಲ್ಲಿ ಕೆಲವೆಡೆ ಶಾಲಾ ಕಾಲೇಜು ಆರಂಭದ ಮಾರ್ಗಸೂಚಿ ಪಾಲಿಸಿಲ್ಲ. ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಅಂತವರಿಗೆ ನೋಟಿಸ್ ನೀಡಲಾಗುವುದು ಎಂದು ದೊಮ್ಮಸಂದ್ರದಲ್ಲಿ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಹಾಸನ ಡಿಡಿಪಿಐ, ಚಿಕ್ಕಬಳ್ಳಾಪುರ ಡಿಡಿಪಿಐಗೆ ಮಾರ್ಗಸೂಚಿ ಪಾಲಿಸದೇ ಇರುವ ಬಗ್ಗೆ ನೋಟಿಸ್ ಕೊಟ್ಟು ಉತ್ತರ ಪಡೆಯುತ್ತೇವೆ. ಅಲ್ಲದೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳಲ್ಲಿ ಕೆಲ ಕಂಡಕ್ಟರ್​ಗಳು ವಿದ್ಯಾರ್ಥಿಗಳಿಗೆ ಪಾಸ್​ನಲ್ಲಿ ಸಂಚಾರಕ್ಕೆ ಅವಕಾಶ ಕೊಟ್ಟಿಲ್ಲ. ಹೀಗಾಗಿ ಬಿಎಂಟಿಸಿ ಎಂಡಿ ಇಂದು ಸಂಜೆ ಮತ್ತೆ ಕಂಡಕ್ಟರ್​ಗಳಿಗೆ ಸೂಚನೆ ಕೊಡ್ತಾರೆ. ರಾಜ್ಯದಾದ್ಯಂತ ಇಂದು ಆಗಿರುವ ಲೋಪ ಸರಿಪಡಿಸಿಕೊಳ್ಳುತ್ತೇವೆ. ಜೊತೆಗೆ ರಾಜ್ಯದಾದ್ಯಂತ ಆಗಿರುವ ಲೋಪದ ಮಾಹಿತಿ, ವರದಿ ಪಡೆಯುತ್ತೇವೆ ಎಂದು ಸುರೇಶ್​ ಕುಮಾರ್​ ತಿಳಿಸಿದ್ದಾರೆ.

ಶಾಲಾ- ಕಾಲೇಜು ಆರಂಭ: ನಗರದ ನಾನಾ ಶಾಲೆಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವರ ಅನುಭವ ಹೀಗಿತ್ತು..