ಕಾಲೇಜು ಆರಂಭದ ಮೊದಲ ದಿನವೇ ವಿದ್ಯಾರ್ಥಿಗಳಿಂದ ಪ್ರತಿಭಟನೆ.. ಏಕೆ?
ದಾವಣಗೆರೆಯ ಬಾಡಾ ಕ್ರಾಸ್ ಬಳಿಯ ಜೈನ್ ಕಾಲೇಜಿನ ಆಡಳಿತ ಮಂಡಳಿ ಕೆಲ ಶಿಕ್ಷಕರನ್ನು ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ನಿರ್ಧಾರ ವಿರೋಧಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ.
ದಾವಣಗೆರೆ: 10 ತಿಂಗಳ ಬಳಿಕ ಇಂದು ರಾಜ್ಯಾದ್ಯಂತ ಶಾಲಾ-ಕಾಲೇಜು ರೀ ಓಪನ್ ಆಗಿವೆ. ವಿದ್ಯಾರ್ಥಿಗಳು ಸಂತೋಷದಿಂದ ಕಾಲೇಜಿನತ್ತ ಮುಖ ಮಾಡಿದ್ದಾರೆ. ಆದರೆ ಬೆಣ್ಣೆ ನಗರಿ ದಾವಣಗೆರೆಯ ಕಾಲೇಜೊಂದರಲ್ಲಿ ಬೇರೆಯೇ ಚಿತ್ರಣ ಕಂಡು ಬಂದಿದೆ.
ಕಾಲೇಜು ಆರಂಭದ ಮೊದಲ ದಿನವೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದಾವಣಗೆರೆಯ ಬಾಡಾ ಕ್ರಾಸ್ ಬಳಿಯ ಜೈನ್ ಕಾಲೇಜಿನ ಆಡಳಿತ ಮಂಡಳಿ ಕೆಲ ಶಿಕ್ಷಕರನ್ನು ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ನಿರ್ಧಾರ ವಿರೋಧಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ.
ಹಾಗೂ ತೆಗೆದು ಹಾಕಿರುವ ಶಿಕ್ಷಕರನ್ನು ಸೇವೆಗೆ ಮತ್ತೆ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಆದ್ರೆ ವಿದ್ಯಾರ್ಥಿಗಳ ಹೋರಾಟಕ್ಕೆ ಕಾಲೇಜು ಆಡಳಿತ ಮಂಡಳಿ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಟ್ಟಿನಲ್ಲಿ ಕಾಲೇಜು ಆರಂಭದ ಮೊದಲ ದಿನವೇ ವಿಘ್ನ, ಗೊಂದಲ ಶುರುವಾಗಿದೆ. ವಿದ್ಯಾರ್ಥಿಗಳು ಒಂದು ಬೇಡಿಕೆ ಇಟ್ಟಿದ್ದು ಕಾಲೇಜು ಕ್ಯಾರೆ ಅಂತಿಲ್ಲ. ಮುಂದೆ ಇದು ಯಾವ ಹಂತಕ್ಕೆ ಬರುತ್ತೆ ಎಂದು ಕಾದು ನೋಡಬೇಕಿದೆ.
ಕೊಠಡಿಗಳು ಪಂಚಾಯತ್ ಚುನಾವಣೆಗೆ ಬಳಕೆ: ಕಾಲೇಜು ಆವರಣದಲ್ಲೇ ಪಾಠ ಕಲಿತ ವಿದ್ಯಾರ್ಥಿಗಳು!