ಬೆಂಗಳೂರಿನಲ್ಲಿ ಸಚಿವ ಜಾರ್ಜ್ ಆಪ್ತರ ಮೇಲೆ ಐಟಿ ದಾಳಿ, 3 ದಿನದಿಂದ ನಡೆಯುತ್ತಿರುವ ಶೋಧ ಕಾರ್ಯ

ಕಾಂಗ್ರೆಸ್ ನಾಯಕರ ಆರೋಪಗಳ ನಡುವೆಯೇ ಕರ್ನಾಟಕದಲ್ಲಿ ಆದಾಯ ತೆರಿಗೆ (ಐಟಿ) ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಇಂಧನ ಸಚಿವ ಕೆಜೆ ಜಾರ್ಜ್ ಆಪ್ತರ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸಿದೆ. ಜಾರ್ಜ್ ಅವರ ಇಬ್ಬರು ಆಪ್ತರ ಮೇಲೆ ದಾಳಿಯಾಗಿದ್ದು, ಕಳೆದ 3 ದಿನಗಳಿಂದ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಜಾರ್ಜ್ ಆಪ್ತರ ಮೇಲೆ ಐಟಿ ದಾಳಿ, 3 ದಿನದಿಂದ ನಡೆಯುತ್ತಿರುವ ಶೋಧ ಕಾರ್ಯ
Kj George
Edited By:

Updated on: Jul 30, 2025 | 6:29 PM

ಬೆಂಗಳೂರು, (ಜುಲೈ 30) : ಇಂಧನ ಸಚಿವ ಕೆಜೆ ಜಾರ್ಜ್ (Energy minister KJ George) ಆಪ್ತರ ಒಡೆತನದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ (IT Raids) ನಡೆಸಿದೆ. ಜಾರ್ಜ್ ಆಪ್ತ ಜಿತೇಂದ್ರ ವಿರ್ವಾನಿ, ಜಿತು ವಿರ್ವಾನಿ ಒಡೆತನದ ಎಂಬೆಸಿ ಗ್ರೂಪ್ ಹಾಗೂ ಮತ್ತೊರ್ವ ಆಪ್ತರಾದ ಎಲೆಕ್ಟ್ರಿಕ್ ಗುತ್ತಿಗೆದಾರರಾಗಿರುವ ಕೊಠಾರಿ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 3 ದಿನಗಳಿಂದ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಜಾರ್ಜ್ ಆಪ್ತ ಜಿತೇಂದ್ರ ವಿರ್ವಾನಿ ಮತ್ತು ಎಲೆಕ್ಟ್ರಿಕ್ ಗುತ್ತಿಗೆದಾರರಾಗಿರುವ ಕೊಠಾರಿ ಕಚೇರಿಗಳ ಮೇಲೆ ದಾಳಿಯಾಗಿದ್ದು, ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೂರು ದಿನದಿಂದ ಶೋಧ ನಡೆಸುತ್ತಿದ್ದಾರೆ ಅಂದ್ರೆ, ಲೆಕ್ಕಪತ್ರದಲ್ಲಿ ಏನೋ ವ್ಯತ್ಯಾಸಗಳು ಕಂಡುಬಂದಿರುವ ಸಾಧ್ಯತೆಗಳಿದ್ದು, ಅಂತಿಮವಾಗಿ ಏನೆಲ್ಲಾ ಆಗಲಿದೆ ಎನ್ನುವುದು ತಿಳಿದುಬರಬೇಕಿದೆ.

Published On - 6:22 pm, Wed, 30 July 25