ಬೆಂಗಳೂರು: ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇದರಿಂದ ಪ್ರಾಣಿ ಪಕ್ಷಿಗಳು ಆಹಾರವಿಲ್ಲದೆ ಕಂಗಾಲಾಗಿವೆ. ಪ್ರವಾಸಿ ತಾಣಗಳಲ್ಲಿರುವ ಪ್ರಾಣಿ- ಪಕ್ಷಿಗಳಿಗೆ ಪ್ರವಾಸಿಗರು ಆಹಾರ, ನೀರನ್ನು ಹೊತ್ತೊಯ್ಯುತ್ತಿದ್ದರು. ಆದರೆ ಲಾಕ್ಡೌನ್ನಿಂದ ಪ್ರವಾಸ ಸ್ಥಳಕ್ಕೆ ಪ್ರವೇಶ ನಿರ್ಬಂಧವಾಗಿರುವ ಕಾರಣ ಪ್ರಾಣಿ-ಪಕ್ಷಿಗಳಿಗೆ ಆಹಾರ ಸಿಗುತ್ತಿಲ್ಲ. ಈ ನಡುವೆ ಎರಡು ಸಂಸ್ಥೆಗಳು ಪ್ರಾಣಿಗಳಿಗೆ ಉಣಬಡಿಸಲು ಇದೀಗ ಮುಂದಾಗಿವೆ.
ಜೈನ್ ಅನಿಮಲ್ ಕೇರ್ ಹಾಗೂ ಎಸ್ಡಿವೈಜೆಎಮ್ ಸಂಸ್ಥೆ ನಗರದಾದ್ಯಂತ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುತ್ತಿವೆ. ಈ ಸಂಸ್ಥೆಗಳು ನಾಯಿ, ಬೆಕ್ಕು, ಹಸು, ಗಿಣಿ, ಕೋತಿ, ಕಾಗೆ, ಪಾರಿವಾಳಗಳಿಗೆ ಕೆಜಿ ಗಟ್ಟಲೆ ಆಹಾರ ಪೂರೈಸುತ್ತಿವೆ. 20 ಕ್ಕೂ ಹೆಚ್ಚು ಜನರು ನಗರದಾದ್ಯಂತ ಮೂಕ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದು, ಪ್ರಾಣಿಗಳಿಗೆ ಆಹಾರ ಪೂರೈಸಲು ಪೊಲೀಸ್ ಇಲಾಖೆ ಕೂಡಾ ಸಾಥ್ ನೀಡಿದೆ.
ಲಾಕ್ಡೌನ್ನಿಂದ ಜನರಿಗೆ ಆಹಾರ ಸಿಗುವುದು ಕಷ್ಟ. ಇಂತಹ ಸಮಯದಲ್ಲಿ ಈ ಎರಡು ಸಂಸ್ಥೆಗಳು ಪ್ರಾಣಿ ಪಕ್ಷಿಗಳಿಗೆ ಆಹಾರ ಪೂರೈಸುತ್ತಿರುವ ಮೂಲಕ ಪುಣ್ಯದ ಕೆಲಸಕ್ಕೆ ಮುಂದಾಗಿವೆ. ಸಂಸ್ಥೆಗಳು ಬೆಳಿಗ್ಗೆ ಹಾಗೂ ಸಂಜೆ ಎರಡೂ ಸಮಯದಲ್ಲಿ ಆಹಾರ ಪೂರೈಕೆ ಮಾಡುತ್ತಿವೆ. ನಾಯಿ, ಬೆಕ್ಕು, ಕೋತಿಗಳಿಗೆ 350 ಲೀಟರ್ ಹಾಲು, ಹಸುಗಳಿಗೆ 100 ಕೆಜಿ ಗೋಧಿ ಚಪಾತಿ ಹಾಗು ಇಂಡಿ, ಪಾರಿವಾಳಕ್ಕೆ 50ಕೆಜಿ ಗೋಧಿ, ಸಜ್ಜೆ, ಕಡ್ಲೇ, ಜೋಳ ಮತ್ತು ಕಾಗೆ ಹಾಗೂ ಗಿಣಿಗೆ 15 ಕೆಜಿ ಕಾರಚೋಚೋ, ಬಟಾಣಿಯನ್ನು ಪೂರೈಕೆ ಮಾಡುತ್ತಿವೆ. ಪ್ರತಿದಿನ ಪ್ರಾಣಿ-ಪಕ್ಷಿಗಳಿಗೆ 500 ಕೆಜಿಗೂ ಹೆಚ್ಚು ಆಹಾರವನ್ನು ಸಂಸ್ಥೆಗಳು ನೀಡುತ್ತಿವೆ.
ಹಸಿದವರಿಗೆ ತಿಂಡಿ ನೀಡಿದ ಪೊಲೀಸರು
ಚಾಮಾರಾಜಪೇಟೆ ಸುತ್ತ ಮುತ್ತ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವವರಿಗೆ ಚಾಮಾರಾಜಪೇಟೆ ಪೊಲೀಸರು ತಿಂಡಿ ನೀಡಿದ್ದಾರೆ. ಚಾಮಾರಾಜಪೇಟೆ ಠಾಣೆಯಿಂದ ಸಿಸಿಬಿ ಕಚೇರಿ ಬಲಕಿವರೆಗೆ ರಸ್ತೆಬದಿ ಇರುವವರಿಗೆ ತಿಂಡಿಯನ್ನು ಪೊಲೀಸರು ನೀಡಿದರು. ಲಾಕ್ಡೌನ್ ಅನ್ನು ಕಠಿಣವಾಗಿ ಜಾರಿಗೊಳಿಸುವ ಜೊತೆಗೆ ಪೊಲೀಸರು ಹಸಿದವರಿಗೆ ತಿಂಡಿ ನೀಡಿದ್ದಾರೆ.
ಇದನ್ನೂ ಓದಿ
ಕೊಡಗಿನಲ್ಲಿ ನೀರಿಗಾಗಿ ಹಾಹಾಕಾರ; ಗ್ರಾಮ ಪಂಚಾಯತಿ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ
(Jain Animal Care and SDYJM are feeding the animals during the lockdown at bengaluru)