ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪಿ, ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ನಿನ್ನೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. 8 ವಾರ ಕಾಲ ಬಳ್ಳಾರಿಯಲ್ಲಿ ತಂಗಬಹುದು ಎಂದೂ ಕೋರ್ಟ್ ಹೇಳಿದೆ. ಈ ಮಧ್ಯೆ, ಜನಾರ್ದನ ರೆಡ್ಡಿ ಇಂದು ಅಥವಾ ನಾಳೆ ಬಳ್ಳಾರಿಗೆ ಭೇಟಿ ನೀಡಬಹುದು ಎನ್ನಲಾಗಿದೆ. ಆದರೆ ಜನಾರ್ದನ ರೆಡ್ಡಿ ಯಾವಾಗ ಬಳ್ಳಾರಿಗೆ ಬರುವುದು ಎಂದು ಕೇಳಿದರೆ ಅವರ ಬಳ್ಳಾರಿ ಸಹೋದರ ಶಾಸಕ ಸೋಮಶೇಖರ ರೆಡ್ಡಿ ಅವರು ಹೇಳುವುದೇ ಬೇರೆ.
10 ವರ್ಷದ ನಂತರ ಬಳ್ಳಾರಿಗೆ ಜನಾ ರೆಡ್ಡಿ ಭೇಟಿ:
ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡುವ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಶಾಸಕ ಸೋಮಶೇಖರ ರೆಡ್ಡಿ ತಮ್ಮ ಕುಂಟುಬದ ಸ್ವಾಮೀಜಿಗಳು ಸೂಚಿಸಿದ ದಿನ ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುತ್ತಾರೆ. ಬೆಂಗಳೂರಿನಲ್ಲೇ ವರಮಹಾಲಕ್ಷ್ಮಿ ಹಬ್ಬ ಆಚರಿಸುತ್ತಾರೆ. ಈಗ 8 ವಾರಗಳ ಕಾಲ ಬಳ್ಳಾರಿಯಲ್ಲಿರಲು ಅವಕಾಶ ದೊರೆತಿದೆ. ಈ 8 ವಾರದ ಕಾಲ ಕೇವಲ ಅಬ್ಸರ್ವೇಷನ್ ಅವಧಿಯಾಗಿದೆ. ಅದಾದ ಮೇಲೂ ಮುಂದಿನ ದಿನಗಳಲ್ಲಿಯೂ ಬಳ್ಳಾರಿಯಲ್ಲೇ ಇರುತ್ತಾರೆ. ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುವುದರಿಂದ ಪ್ಲಸ್ ಆಗುತ್ತೆ. ಅವರ ಶಕ್ತಿ ಏನು ಎನ್ನೋದು ನನಗೆ ಗೊತ್ತು, ಅವರ ಆಲೋಚನೆಗಳು ಒಳ್ಳೇದು. ಬಳ್ಳಾರಿಯನ್ನು ಅಭಿವೃದ್ಧಿ ಮಾಡಲು ಪ್ರಯತ್ನ ಮಾಡ್ತೇವೆ ಎಂದು ಬಳ್ಳಾರಿಯ ತಮ್ಮ ನಿವಾಸದಲ್ಲಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿ ಎಸ್‌ಪಿ ಸೈದುಲ್ಲ ಅಡಾವತ್ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕಾರ್ಯ್ರಮದಲ್ಲಿ ಬ್ಯುಸಿ
ಈ ಮಧ್ಯೆ, ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಅನುಮತಿ ನೀಡಿದ್ದು, ಸುಪ್ರೀಂ ಕೋರ್ಟ್ನ ಅನುಮತಿ ಪತ್ರ ಪ್ರತಿ ಸಿಕ್ಕ ಕೂಡಲೇ ಬಳ್ಳಾರಿಗೆ ಭೇಟಿ ನೀಡಲಿದ್ದಾರೆ. ಮೊದಲು ಅನುಮತಿ ಪ್ರತಿ ಬಳ್ಳಾರಿ ಎಸ್‌ಪಿ ಸೈದುಲ್ಲ ಅಡಾವತ್ ಗೆ ತಲುಪಬೇಕು. ಎಸ್‌ಪಿಗೆ ಮಾಹಿತಿ ನೀಡಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಬೇಕು. ಎಸ್‌ಪಿಗೆ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಷರತ್ತು ಸೂಚಿಸಿದೆ.
ಸದ್ಯ ಬಳ್ಳಾರಿ ಎಸ್‌ಪಿಗೆ ಯಾವುದೇ ಪ್ರತಿ ಸಿಕ್ಕಿಲ್ಲ. ಆದರೆ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ವಿಶ್ವವಿಖ್ಯಾತ ಹಂಪಿಗೆ ಇಂದು ಕುಟುಂಬ ಸಮೇತರಾಗಿ ಭೇಟಿ ನೀಡಲಿದ್ದಾರೆ. ಹಂಪಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ಹಿನ್ನೆಲೆ ಬಳ್ಳಾರಿ ಜಿಲ್ಲಾಡಳಿತದಿಂದ ಸಕಲ ಭದ್ರತೆ ಕಲ್ಪಿಸಲಾಗಿದೆ. ಹಾಗಾಗಿ ಬಳ್ಳಾರಿ ಎಸ್‌ಪಿ ಸೈದುಲ್ಲ ಅಡಾವತ್ ಆ ಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದಾರೆ.
AMC ಅಕ್ರಮ ಗಣಿಗಾರಿಕೆ ಕೇಸ್: ಮಾಜಿ ಸಚಿವ ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ರಿಲೀಫ್
(Janardhana reddy to visit bellary on auspicious day only says mla somashekar reddy)
Published On - 10:56 am, Fri, 20 August 21