ಅತ್ಯಂತ ಕ್ರಾಂತಿಕಾರಿಯಾದ ಕಾನೂನನ್ನು ದಿಟ್ಟವಾಗಿ ತಂದವರು ದೇವರಾಜ ಅರಸು: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಭೂ ಸುಧಾರಣ ಕಾನೂನು ಜಾರಿಗೆ ಬಂತು. ಅತ್ಯಂತ ಕ್ರಾಂತಿಕಾರಿಯಾದ ಕಾನೂನನ್ನು ದಿಟ್ಟವಾಗಿ ತಂದವರು ದೇವರಾಜ ಅರಸು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ದಿ.ದೇವರಾಜ ಅರಸರನ್ನು ನೆನಪಿಸಿಕೊಂಡಿದ್ದಾರೆ.
ಬೆಂಗಳೂರು: ಇಂದು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ್ ಅರಸುರ 106ರ ಜನ್ಮದಿನಾಚರಣೆ. ಈ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಂಟು ವರ್ಷಗಳ ಕಾಲ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಮುಡಿಪಾಗಿಟ್ಟವರು ದೇವರಾಜ ಅರಸು. ಸಾಮಾಜಿಕ ನ್ಯಾಯವನ್ನು ಕೊಟ್ಟವರು ಯಾರೂ ಅಂದ್ರೆ ಅದು ದೇವರಾಜ ಅರಸು. ಭೂ ಸುಧಾರಣ ಕಾನೂನು ಜಾರಿಗೆ ಬಂತು. ಅತ್ಯಂತ ಕ್ರಾಂತಿಕಾರಿಯಾದ ಕಾನೂನನ್ನು ದಿಟ್ಟವಾಗಿ ತಂದವರು ದೇವರಾಜ ಅರಸು ಎಂದು ದಿ.ದೇವರಾಜ ಅರಸರನ್ನು ನೆನಪಿಸಿಕೊಂಡಿದ್ದಾರೆ.
ದೇವರಾಜ ಅರಸುರವರ 106ನೇ ಜನ್ಮದಿನ ಹಿನ್ನೆಲೆಯಲ್ಲಿ ದೇವರಾಜ ಅರಸು ಭಾವಚಿತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪನಮನ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗಗಳ ಏಳಿಗೆ, ಸ್ವಾಭಿಮಾನ ಬದುಕಿಗಾಗಿ ಬದ್ಧತೆಯಿಂದ ಕೆಲಸ ಮಾಡಬೇಕಾಗಿರುವ ದಿನವಾಗಿದೆ. ಅರಸುರವರ ಕ್ರಾಂತಿಕಾರಿ ಭೂಸುಧಾರಣೆ ನಮಗೆ ಆದರ್ಶ. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಇದನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಅರಸುರವರ ಹೆಜ್ಜೆ ಗುರುತುಗಳು ನಮಗೆ ಇಂದಿಗೂ ಆದರ್ಶ ಎಂದು ಹೇಳಿವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ದೇವರಾಜ ಅರಸುರವರ ಸಾಧನೆಯನ್ನು ನೆನಪಿಸಿಕೊಂಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆಯುತ್ತಿದ್ದು 2019-20ನೇ ಸಾಲಿನಲ್ಲಿ ಬಸವಪ್ರಭು ಲಕನಗೌಡ ಪಾಟೀಲ್, 2020-21ನೇ ಸಾಲಿನಲ್ಲಿ ಸುಶೀಲಮ್ಮಗೆ ದೇವರಾಜ ಅರಸು ಪ್ರಶಸ್ತಿ, 2021-22ನೇ ಸಾಲಿನಲ್ಲಿ ಭಾಸ್ಕರ್ ದಾಸ್ ಎಕ್ಕಾರ್‌ಗೆ ಪ್ರಶಸ್ತಿ ನೀಡಲಾಗಿದೆ.
ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸುರ ಮರ್ಸಿಡಿಸ್-ಬೆನ್ಜ್ 48 ವರ್ಷ ಕಳೆದರೂ ಮಾಜಿ ಸಿಎಂ ದಿವಂಗತ ದೇವರಾಜ ಅರಸು ಬಳಸುತ್ತಿದ್ದ ಮರ್ಸಿಡಿಸ್-ಬೆನ್ಜ್ ಲಕ ಲಕ ಹೊಳೆಯುತ್ತಿದೆ. ಇಂದು ದೇವರಾಜ ಅರಸುರ 106ನೇ ಜನ್ಮ ದಿನದ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದೆ. ದೇವರಾಜ ಅರಸು 1972ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಇದರಿಂದ ಸಂತೋಷಗೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿದೇಶದಿಂದ ತರಿಸಿ ಸರ್ಕಾರಕ್ಕೆ ಕೊಡುಗೆಯಾಗಿ ಮರ್ಸಿಡಿಸ್-ಬೆನ್ಜ್ ನೀಡಿದ್ದರು.
ದೇವರಾಜ ಅರಸು ಸಿಎಂ ಆಗಿದ್ದ ಅವಧಿಯಲ್ಲಿ ಪ್ರತಿನಿತ್ಯ ಈ ಕಾರನ್ನು ಬಳಸುತ್ತಿದ್ದರು. 10 ವರ್ಷಗಳ ಕಾಲ ಮರ್ಸಿಡಿಸ್-ಬೆನ್ಜ್ ಜೊತೆಗೆ ಅರಸು ಓಡಾಡಿದ್ದಾರೆ. ಬಳಿಕ ಹರಾಜು ಪ್ರಕ್ರಿಯೆಯಲ್ಲಿ ಅರಸು ಕಾರನ್ನು ಖರೀದಿಸಿ ಅರಸು ಆಪ್ತ ಜಿ.ಎಂ. ಬಾಬು ಅರಸುರ ನೆನಪಿನ ಕಾಣಿಕೆಯಾಗಿ ಕಾಪಾಡುತ್ತಿದ್ದಾರೆ. ವಿಧಾನಸೌಧದ ದೇವರಾಜ ಅರಸು ಪ್ರತಿಮೆ ಮುಂದೆ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರತಿವರ್ಷ ಅರಸು ಜನ್ಮದಿನದಂದು ಅರಸು ಕಾರು ವಿಧಾನಸೌಧಕ್ಕೆ ಎಂಟ್ರಿ ಕೊಡುತ್ತೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದೇ ಕಾರಿನಲ್ಲಿ ವಿಧಾನಸೌಧ ಸುತ್ತು ಹಾಕಿದ್ದರು.
ಇದನ್ನೂ ಓದಿ: ನಾಳೆ ಸುಮಂಗಲಿ ಸೇವಾಶ್ರಮದ ಸುಶೀಲಮ್ಮ ಸೇರಿ ಮೂವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ
Published On - 11:27 am, Fri, 20 August 21