ಎಣ್ಣೆ ತಯಾರಿಸುವಲ್ಲಿ ಸ್ವಾವಲಂಬಿ ಆಗಬೇಕು; ಸಿರಿಧಾನ್ಯ ಬೆಳೆಯುವ ಕೆಲಸ ಮಾಡಬೇಕು: ಶೋಭಾ ಕರಂದ್ಲಾಜೆ
Shobha Karandlaje: ಮುಂದಿನ ದಿನಗಳಲ್ಲಿ ರೈತರ ಬದುಕು ಮತ್ತಷ್ಟು ಉತ್ತಮಪಡಿಸುವ ಕೆಲಸ ಮಾಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಸೇರಿ ಈ ಕೆಲಸ ಮಾಡಬೇಕಿದೆ
ಬೆಂಗಳೂರು: ಎಣ್ಣೆ ಪದಾರ್ಥಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ವಿದೇಶದಿಂದ ಪಾಮ್ ಆಯಿಲ್ ತಂದು, ಇಲ್ಲಿನ ಸೂರ್ಯಕಾಂತಿ ಹಾಗೂ ಇತರೆ ಎಣ್ಣೆಗೆ ಬೆರೆಸಲಾಗ್ತಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ನಾವು ಕೆಲವೇ ದಿನಗಳಲ್ಲಿ ಎಣ್ಣೆ ತಯಾರಿಸುವಲ್ಲಿ ಸ್ವಾವಲಂಬಿ ಆಗಬೇಕಿದೆ. ಈ ಮೂಲಕ ಹೊರ ದೇಶದಿಂದ ಬರುವ ಎಣ್ಣೆಗೆ ಬ್ರೇಕ್ ಹಾಕಬೇಕಿದೆ. ಇದಕ್ಕಾಗಿ ಸಿರಿ ಧಾನ್ಯ ಬೆಳೆಯುವ ಕೆಲಸವನ್ನೂ ಮಾಡಬೇಕಿದೆ. ಜೊತೆಗೆ, ಅದನ್ನು ರಫ್ತು ಮಾಡುವ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ (ಆಗಸ್ಟ್ 20) ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ರೈತರ ಬದುಕು ಮತ್ತಷ್ಟು ಉತ್ತಮಪಡಿಸುವ ಕೆಲಸ ಮಾಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಸೇರಿ ಈ ಕೆಲಸ ಮಾಡಬೇಕಿದೆ. ಸರ್ಕಾರ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಈ ಬಾರಿ ಉತ್ತಮ ಮಳೆಯೂ ಆಗಿದೆ. ಬರುವ ದಿನಗಳಲ್ಲಿ ರಫ್ತಿಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಈ ಬಗ್ಗೆ, ಸಚಿವ ಮುರುಗೇಶ್ ನಿರಾಣಿ ಜೊತೆ ಮಾತನಾಡಿದ್ದೇನೆ. ನಮ್ಮ ರಾಜ್ಯ ರಫ್ತು ವಿಚಾರದಲ್ಲಿ ಹಿಂದುಳಿದಿದೆ. ಐಟಿ-ಬಿಟಿಗೆ ಮಾತ್ರ ಹೆಚ್ಚು ಒತ್ತು ನೀಡಲಾಗ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕೃಷಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದೇನೆ. ಮುರುಗೇಶ್ ನಿರಾಣಿ ಕೂಡ ಒಪ್ಪಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ನಮ್ಮ ರಾಜ್ಯದ ಹಲವು ರೈತರು ತೆಂಗು ಬೆಳೆಯುತ್ತಾರೆ. ಈ ಮೊದಲು ತೆಂಗು ಅಭಿವೃದ್ಧಿ ಮಂಡಳಿಗೆ ಯಾರ್ಯಾರೋ ಅಧ್ಯಕ್ಷರಾಗುತ್ತಿದ್ರು. ಇನ್ನು ಮುಂದೆ ತೆಂಗು ಬೆಳೆಯುವ ರೈತನೇ ಅಧ್ಯಕ್ಷ ಆಗಬೇಕು. ಅಂತಹ ತಿದ್ದುಪಡಿಯನ್ನು ತರಲಾಗಿದೆ. ಟ್ರ್ಯಾಕ್ಟರ್, ಟಿಲ್ಲರ್‌ಗೆ ಎಂಆರ್‌ಪಿ ಹಾಕಲು ಸೂಚಿಸಲಾಗಿದೆ. ಎಂಆರ್‌ಪಿ ಹಾಕದವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಸಣ್ಣ, ದೊಡ್ಡ ರೈತರನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಜೆಪಿ ನನಗೆ ಸಾಕಷ್ಟು ಅವಕಾಶ ನೀಡಿದೆ ರಾಜ್ಯದಲ್ಲಿ ನಾಲ್ವರು ಸಚಿವರು ಬೇರೆಬೇರೆ ಕಡೆ ಓಡಾಡಿದ್ದೇವೆ. ಜನರು ಕುಣಿದು, ಹಾರ ಹಾಕಿ ನಮ್ಮನ್ನು ಸ್ವಾಗತಿಸಿದ್ದಾರೆ ಎಂದು ಬಿಜೆಪಿ ಜನಾಶೀರ್ವಾದ ಯಾತ್ರೆಯ ಬಗ್ಗೆ ಅವರು ಮಾತನಾಡಿದ್ದಾರೆ. ಈ ಬಾರಿ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಶೇಷವಾಗಿದೆ. 11 ಮಹಿಳೆಯರು, ಹಿಂದುಳಿದ ವರ್ಗಕ್ಕೆ ಅವಕಾಶ ನೀಡಿದ್ದಾರೆ. ಪ್ರದೇಶಾನುಸಾರ ಸಚಿವ ಸ್ಥಾನ ಹಂಚಿಕೆ ಆಗಿದೆ. ಇದರಿಂದ ವಿಪಕ್ಷದವರಿಗೆ ಆತಂಕ ಆಗಿದೆ. ಹೀಗಾಗಿ ಸಂಸತ್ ಅಧಿವೇಶನ ನಡೆಯಲು ಕಾಂಗ್ರೆಸ್ ಬಿಟ್ಟಿಲ್ಲ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ನನಗೆ ಸಾಕಷ್ಟು ಅವಕಾಶ ನೀಡಿದೆ. ವಿಧಾನಪರಿಷತ್ ಸದಸ್ಯೆ, ವಿಧಾನಸಭಾ ಸದಸ್ಯೆ, ಈಗ ಕೇಂದ್ರ ಸಚಿವೆಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ರಾಜ್ಯದಲ್ಲಿ ಸಚಿವೆಯಾಗಿಯೂ ನಾನು ಕೆಲಸ ಮಾಡಿದ್ದೇನೆ. ಕೃಷಿ ಇಲಾಖೆಯಂತಹ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶೋಭಾ ಕರಂದ್ಲಾಜೆ ಪಕ್ಷದ ಜೊತೆಗಿನ ತಮ್ಮ ಪಯಣವನ್ನು ನೆನಪಿಸಿಕೊಂಡಿದ್ದಾರೆ.
ಭಯೋತ್ಪಾದನೆ ಎಲ್ಲಿದೆ ಅನ್ನೋದಕ್ಕೆ ಅಫ್ಘಾನ್ ಉದಾಹರಣೆ ಅಫ್ಘಾನಿಸ್ತಾನವನ್ನುಬ ತಾಲಿಬಾನ್ ವಶಪಡಿಸಿಕೊಂಡ ಬಳಿಕ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದನೆ ಎಲ್ಲಿದೆ ಅನ್ನೋದಕ್ಕೆ ಆಫ್ಘನ್ ಉದಾಹರಣೆ ಆಗಿದೆ. ಯಾವುದೋ ಕಾಲದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿತ್ತು ಎಂದು ಕೇಳಿದ್ದೆವು. ಆದರೆ ಈಗ ನಾವೂ ಅದನ್ನು ನೋಡುತ್ತಿದ್ದೇವೆ. ಕೇಂದ್ರ ಆಫ್ಘನ್‌ನಲ್ಲಿ ಸಿಲುಕಿರುವವರ ರಕ್ಷಣೆ ಮಾಡುತ್ತಿದೆ. ಭಾರತೀಯರ ರಕ್ಷಣೆಗೆ ವಿದೇಶಾಂಗ ಇಲಾಖೆ ಕೆಲಸ ಮಾಡ್ತಿದೆ ಎಂದು ಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ದಿನದ 18 ಗಂಟೆ ಕೆಲಸ ಮಾಡುತ್ತಾರೆ; ಒಂದು ಸೂಟ್ಕೇಸ್ ಬಟ್ಟೆ ಮಾತ್ರ ಅವರ ಆಸ್ತಿ: ಶೋಭಾ ಕರಂದ್ಲಾಜೆ
‘542 ಸದಸ್ಯರ ಮುಂದೆ ಸಚಿವರ ಪರಿಚಯ ಮಾಡಲು ಕಾಂಗ್ರೆಸ್ ಬಿಡಲಿಲ್ಲ; ದೇಶದ 135 ಕೋಟಿ ಜನರ ಮುಂದೆ ನಾವು ಹೋಗುತ್ತೇವೆ’
Published On - 12:41 pm, Fri, 20 August 21