‘542 ಸದಸ್ಯರ ಮುಂದೆ ಸಚಿವರ ಪರಿಚಯ ಮಾಡಲು ಕಾಂಗ್ರೆಸ್ ಬಿಡಲಿಲ್ಲ; ದೇಶದ 135 ಕೋಟಿ ಜನರ ಮುಂದೆ ನಾವು ಹೋಗುತ್ತೇವೆ’
ಇಡೀ ದೇಶಾದ್ಯಂತ ಜನಾಶೀರ್ವಾದ ಯಾತ್ರೆ ನಡೀತಾ ಇದೆ. ಹೊಸದಾಗಿ ನನ್ನಂತೆ ಸಚಿವರಾಗಿರೋ ಎಲ್ಲಾ ಸಚಿವರು ದೇಶದಲ್ಲಿ ಯಾತ್ರೆ ಮಾಡ್ತಾ ಇದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಹಾಸನ: ನೂತನ ಸಚಿವರನ್ನು ಪ್ರಧಾನ ಮಂತ್ರಿ ಲೋಕಸಭೆಗೆ ಪರಿಚಯಿಸುವ ಕ್ರಮ ಇತ್ತು. ಹೊಸ ಸಚಿವರನ್ನು ಪರಿಚಯಿಸುವ ಕಾರ್ಯಕ್ಕೆ ನೆಹರು ಸರ್ಕಾರದ ನಂತರ ಇಷ್ಟು ವರ್ಷಗಳ ಪರಂಪರೆಯಿತ್ತು. ಎಲ್ಲಾ ಕಾಲದಿಂದ ಅದು ನಡೆದಕೊಂಡು ಬಂದಿತ್ತು. ಪಕ್ಷಾತೀತವಾಗಿ ಎಲ್ಲರೂ ಅದನ್ನು ಸ್ವಾಗತ ಮಾಡ್ತಾ ಇದ್ರು. ನಾನು ದೇಶದ ಕೃಷಿ ಸಚಿವೆಯಾಗಿದೆ ಆಯ್ಕೆಯಾಗಿದ್ದೇನೆ. ಮಂತ್ರಿಯಾದ ಮೇಲೆ ನಮಗೆ ಪಕ್ಷ ಇಲ್ಲ, ನಾವು ಎಲ್ಲರ ಕೆಲಸ ಮಾಡಬೇಕು. ಆದರೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿರೋಧಪಕ್ಷದವರು ಪರಿಚಯ ಮಾಡಿಕೊಳ್ಳಲು ಅಡ್ಡಿ ಮಾಡಿದ್ರು. ಕಾಂಗ್ರೆಸ್ ನಮಗೆ ಪರಿಚಮ ಮಾಡಿಕೊಳ್ಳಲು ಬಿಡಲಿಲ್ಲ. ದೇಶಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಇದು ಒಂದು ಕಪ್ಪು ಚುಕ್ಕೆ ಎಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಹಳ್ಳಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಈ ಕಾರಣದಿಂದ ನಮ್ಮ ಪಕ್ಷ ತೀರ್ಮಾನ ಮಾಡಿದೆ. ಲೋಕಸಭೆಯಲ್ಲಿ 542 ಸದಸ್ಯರ ಮುಂದೆ ಸಚಿವರನ್ನು ಪರಿಚಯ ಮಾಡಿಸಿಕೊಳ್ಳಲು ಬಿಡಲಿಲ್ಲ. ದೇಶದ 135 ಕೋಟಿ ಜನರ ಮುಂದೆ ನಾವು ಅವರನ್ನು ಕರೆದುಕೊಂಡು ಹೋಗ್ತೇವೆಂದು ತೀರ್ಮಾನ ಮಾಡಿತು. ಈಗ ಇಡೀ ದೇಶಾದ್ಯಂತ ಜನಾಶೀರ್ವಾದ ಯಾತ್ರೆ ನಡೀತಾ ಇದೆ. ಹೊಸದಾಗಿ ನನ್ನಂತೆ ಸಚಿವರಾಗಿರೋ ಎಲ್ಲಾ ಸಚಿವರು ದೇಶದಲ್ಲಿ ಯಾತ್ರೆ ಮಾಡ್ತಾ ಇದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇದೇ ವೇಳೆ, ರಾಜ್ಯ ಸರ್ಕಾರ ಅವಧಿ ಪೂರ್ಣಗೊಳಿಸಲ್ಲ ಎಂಬ ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಕೈಗೆ ಸಿಗದ ದ್ರಾಕ್ಷಿ ಯಾವಾಗಲೂ ಹುಳಿಯಾಗೇ ಇರುತ್ತದೆ. ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದರೆಂದು ಗೊತ್ತಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕಹಿ ಘಟನೆಗಳು ನಡೆದಿವೆ. ಮತ್ತು ಈಗ ನರೇಂದ್ರ ಮೋದಿ ಯೋಜನೆಗಳಿಗೆ ಹೆಸರು ಬದಲಾಯಿಸಿದರು. ಕೇಂದ್ರದ ಯೋಜನೆಗಳಿಗೆ ಇವರ ಹೆಸರು ಇಟ್ಟುಕೊಂಡಿದ್ದರು. ಕೇಂದ್ರ ಸರ್ಕಾರದ ದುಡ್ಡು, ಹೆಸರು ಮಾತ್ರ ಇವರದ್ದು ಆಗಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಕೇಂದ್ರ ಸರ್ಕಾರದ ಜನಾಶೀರ್ವಾದ ಯಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ. ನಗರದ ಹೆಚ್.ಎಂ.ಟಿ. ಕಲ್ಯಾಣ ಮಂಟಪದಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ.
ಇತ್ತ ತುಮಕೂರಿನಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆ ನಡೆದಿದೆ. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ನೇತೃತ್ವದಲ್ಲಿ ಯಾತ್ರೆ ನಡೆದಿದೆ. ತುಮಕೂರಿನ ಟೌನ್ ಹಾಲ್ ವೃತ್ತದಿಂದ ವಿನಾಯಕ ಸಮುದಾಯ ಭವನದವರೆಗೂ ಯಾತ್ರೆ ನಡೆಸಲಾಗಿದೆ. ಕೇಂದ್ರ ಸಚಿವ ನಾರಾಯಣ ಸ್ವಾಮಿ, ಕರ್ನಾಟಕ ಸಚಿವರಾದ ಬಿ.ಸಿ ನಾಗೇಶ್ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಬಾಗಿ ಆಗಿದ್ದಾರೆ.
ಇದನ್ನೂ ಓದಿ: ಜನರ ಆಶೀರ್ವಾದ ಕೇಳಲು ಹೊರಡುತ್ತಿದ್ದಾರೆ ಕೇಂದ್ರ ಸಚಿವರು; ಆಗಸ್ಟ್ 16ರಿಂದ ಪ್ರಾರಂಭ ಬಿಜೆಪಿ ಜನಾಶೀರ್ವಾದ ಯಾತ್ರೆ
ಇಂದಿನಿಂದ ಬಿಜೆಪಿ ‘ಜನಾಶೀರ್ವಾದ ಯಾತ್ರೆ’ ಆರಂಭ; ಕೆಲ ಮಾಹಿತಿ ಇಲ್ಲಿದೆ ನೋಡಿ
Published On - 5:24 pm, Tue, 17 August 21