AMC ಅಕ್ರಮ ಗಣಿಗಾರಿಕೆ ಕೇಸ್: ಮಾಜಿ ಸಚಿವ ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ರಿಲೀಫ್
ಮಾಜಿ ಸಚಿವ ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ AMC ಅಕ್ರಮ ಗಣಿಗಾರಿಕೆ ಕೇಸ್ನಲ್ಲಿ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ CBI ವಿಶೇಷ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಜನಾರ್ದನರೆಡ್ಡಿ ವಿರುದ್ಧದ AMC ಅಕ್ರಮ ಗಣಿಗಾರಿಕೆ ಕೇಸ್ ಪ್ರಕರಣದಿಂದ ಜಿ.ಲಕ್ಷ್ಮೀ ಅರುಣಾ ಹೆಸರನ್ನು ವಿಶೇಷ ಕೋರ್ಟ್ ಕೈಬಿಟ್ಟಿತ್ತು.

ಬೆಂಗಳೂರು: ಮಾಜಿ ಸಚಿವ ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ AMC ಅಕ್ರಮ ಗಣಿಗಾರಿಕೆ ಕೇಸ್ನಲ್ಲಿ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ CBI ವಿಶೇಷ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಜನಾರ್ದನರೆಡ್ಡಿ ವಿರುದ್ಧದ AMC ಅಕ್ರಮ ಗಣಿಗಾರಿಕೆ ಕೇಸ್ ಪ್ರಕರಣದಿಂದ ಜಿ.ಲಕ್ಷ್ಮೀ ಅರುಣಾ ಹೆಸರನ್ನು ವಿಶೇಷ ಕೋರ್ಟ್ ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿತ್ತು. ಇದೀಗ, ಅರ್ಜಿಯನ್ನು ವಜಾಗೊಳಿಸಲಾಗಿದೆ.
ಜಿ.ಲಕ್ಷ್ಮೀ ಅರುಣಾ AMC ಯ ದಾಖಲೆಗೆ ಸಹಿ ಹಾಕಿದ್ದಾರೆ. ಪತಿ ಗಾಲಿ ಜನಾರ್ದನ ರೆಡ್ಡಿ ಹೇಳಿದ ದಾಖಲೆಗೆ ಸಹಿ ಹಾಕಿದ್ದಕ್ಕೆ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿ ಎನ್ನಲು ಆಗಲ್ಲ. ಹೀಗಾಗಿ, ಪ್ರಕರಣದಿಂದ ಲಕ್ಷ್ಮೀ ಅರುಣಾ ಹೆಸರು ಕೈಬಿಟ್ಟಿದ್ದು ಸರಿಯಿದೆ ಎಂದು ನ್ಯಾ.ಕೆ.ಸೋಮಶೇಖರ್‌ರವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ.
ಕರ್ನಾಟಕ ಹೈಕೋರ್ಟ್‌ಗೆ ನಾಲ್ವರು ನ್ಯಾಯಮೂರ್ತಿಗಳ ನೇಮಕ ಇತ್ತ, ಕರ್ನಾಟಕ ಹೈಕೋರ್ಟ್‌ಗೆ ನಾಲ್ವರು ನೂತನ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ. ಜಡ್ಜ್ಗಳನ್ನ ನೇಮಕಗೊಳಿಸಿ ರಾಷ್ಟ್ರಪತಿ ಕೋವಿಂದ್ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳ ವಿವರ ಹೀಗಿದೆ. 1.ನ್ಯಾಯಮೂರ್ತಿ ಸಿಂಗಪುರಂ ರಾಘವಾಚಾರ್ ಕೃಷ್ಣಕುಮಾರ್ 2.ನ್ಯಾಯಮೂರ್ತಿ ಅಶೋಕ್ ಸುಭಾಷ್ಚಂದ್ರ ಕಿಣಗಿ 3.ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ 4.ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್
ಇದನ್ನೂ ಓದಿ:ಬೆಳ್ಳಂದೂರಿನ ಅಪಾರ್ಟ್ಮೆಂಟ್ನಲ್ಲಿ 10 ಜನರಿಗೆ ಕೊರೊನಾ ದೃಢ