ಒಕ್ಕಲಿಗ ನಿಗಮಕ್ಕೆ 1,000 ಕೋಟಿ ರೂ. ಅನುದಾನ ಮೀಸಲಿಡಬೇಕು -ಸರ್ಕಾರದ ಮುಂದೆ 4 ಬೇಡಿಕೆಗಳನ್ನಿಟ್ಟ ಸಮುದಾಯ

ಒಕ್ಕಲಿಗರಿಗೆ ಮೀಸಲಾತಿ ಮತ್ತು ಪ್ರಾಧಿಕಾರ ರಚನೆ ಸಂಬಂಧ ಇಂದು ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ‌ ಸಭೆ ನಡೆಸಲಾಯಿತು.ಡಿಸಿಎಂ ಅಶ್ವತ್ಥ್​ ನಾರಾಯಣ್​ಗೆ ನಿರ್ಮಲಾನಂದನಾಥಶ್ರೀಗಳು ಮನವಿ ಸಲ್ಲಿಸಿದರು. ಒಕ್ಕಲಿಗ ಸಮುದಾಯ ನೀಡಿದ್ದ ಮನವಿಯನ್ನು ಶ್ರೀಗಳು ಸಲ್ಲಿಸಿದರು.

ಒಕ್ಕಲಿಗ ನಿಗಮಕ್ಕೆ 1,000 ಕೋಟಿ ರೂ. ಅನುದಾನ ಮೀಸಲಿಡಬೇಕು -ಸರ್ಕಾರದ ಮುಂದೆ 4 ಬೇಡಿಕೆಗಳನ್ನಿಟ್ಟ ಸಮುದಾಯ
ಡಿಸಿಎಂ ಅಶ್ವತ್ಥ್​ ನಾರಾಯಣ್​ಗೆ ಮನವಿ ಸಲ್ಲಿಸಿದ ನಿರ್ಮಲಾನಂದನಾಥಶ್ರೀಗಳು
Follow us
|

Updated on: Feb 22, 2021 | 10:14 PM

ಬೆಂಗಳೂರು: ಒಕ್ಕಲಿಗರಿಗೆ ಮೀಸಲಾತಿ ಮತ್ತು ಪ್ರಾಧಿಕಾರ ರಚನೆ ಸಂಬಂಧ ಇಂದು ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ‌ ಸಭೆ ನಡೆಸಲಾಯಿತು. ಸಭೆಯಲ್ಲಿ ಡಿಸಿಎಂ ಅಶ್ವತ್ಥ್​ ನಾರಾಯಣ, ಸಚಿವ ಅಶೋಕ್ ಬಿಡಿಎ ಅಧ್ಯಕ್ಷ ವಿಶ್ವನಾಥ್, ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಸತೀಶ್ ರೆಡ್ಡಿ, MLC ಪುಟ್ಟಣ್ಣ, ನಂಜಾವದೂತಶ್ರೀ ಸೇರಿದಂತೆ ಸಮುದಾಯದ ಹಲವು ಮುಖಂಡರು ಭಾಗಿಯಾಗಿದ್ದರು. ಈ ವೇಳೆ, ಡಿಸಿಎಂ ಅಶ್ವತ್ಥ್​ ನಾರಾಯಣ್​ಗೆ ನಿರ್ಮಲಾನಂದನಾಥಶ್ರೀಗಳು ಮನವಿ ಸಲ್ಲಿಸಿದರು. ಒಕ್ಕಲಿಗ ಸಮುದಾಯ ನೀಡಿದ್ದ ಮನವಿಯನ್ನು ಶ್ರೀಗಳು ಸಲ್ಲಿಸಿದರು.

ಸಭೆ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ಸಮುದಾಯದವರು ಪ್ರಮುಖವಾಗಿ 4 ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಅವುಗಳು ಯಾವುದೆಂದರೆ ಒಕ್ಕಲಿಗ ನಿಗಮ ಆಗಬೇಕು, ಇದಕ್ಕೆ 1 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು. ಸದ್ಯ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ 3Aಗೆ ಶೇ.4ರಷ್ಟಿದೆ. ಅದರಲ್ಲಿ ಬೇರೆ ಜಾತಿಯವರನ್ನ ಸೇರಿಸಲಾಗಿದೆ. ಹಾಗಾಗಿ, ಸಮುದಾಯಕ್ಕೆ ಮೀಸಲಾತಿ ಪರ್ಸೆಂಟೇಜ್​ ಹೆಚ್ಚಿಸಬೇಕು ಎಂದು ಅಶೋಕ್​ ಹೇಳಿದರು.

ಇದಲ್ಲದೆ, ಯಾವುದೇ ಕಾರಣಕ್ಕೂ ಜಾತಿ ಗಣತಿಯನ್ನ ಒಪ್ಪಬಾರದು. ಕಾಂತರಾಜು ಜಾತಿ ಗಣತಿ ಒಪ್ಪಬಾರದು ಎಂದು ಮನವಿ ಮಾಡಲಾಗಿದೆ. ಜೊತೆಗೆ, ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಗಮನಹರಿಸಬೇಕು ಎಂದು ಅಶೋಕ್​ ಹೇಳಿದರು.

ನಿಗಮ ಸ್ಥಾಪನೆ ಬಗ್ಗೆ ಕೂಡಲೇ ಗಮನಹರಿಸಲು ಸಮುದಾಯದವರು ಮತ್ತು ಶ್ರೀಗಳು ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪರ ಗಮನಕ್ಕೆ ತರುವಂತೆ ತಿಳಿಸಿದ್ದಾರೆ. ನಿಗಮ ಸ್ಥಾಪನೆ ಬಗ್ಗೆ ನಾಳೆ ಸಿಎಂ ಬಿಎಸ್​​ವೈ ಬಳಿ ಪ್ರಸ್ತಾಪ ಮಾಡುತ್ತೇವೆ ಎಂದು ಸಭೆ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

BNG VOKKALIGA REQUEST LETTER 1

ಒಕ್ಕಲಿಗರಿಗೆ ಮೀಸಲಾತಿ ಮತ್ತು ಪ್ರಾಧಿಕಾರ ರಚನೆ ಸಂಬಂಧ ನಡೆದ ಸಭೆ

ಇದನ್ನೂ ಓದಿ:‘ಲಿಂಗಾಯತ, ಕುರುಬ, ವಾಲ್ಮೀಕಿ ಸಮುದಾಯಗಳು ಮೀಸಲಾತಿಗಾಗಿ ಬೊಬ್ಬೆ ಹಾಕ್ತಿದೆ.. ನಿಮ್ಗೂ ಕೊಡೋಣಪ್ಪ ಅನ್ನೋಕೆ ಅದೇನು ಕಡ್ಲೇಕಾಯಿನಾ?’

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್