ಬೆಳ್ಳಂದೂರಿನ ಅಪಾರ್ಟ್​ಮೆಂಟ್​ನಲ್ಲಿ 10 ಜನರಿಗೆ ಕೊರೊನಾ ದೃಢ

ಬೆಳ್ಳಂದೂರಿನ ಅಪಾರ್ಟ್​ಮೆಂಟ್​ನಲ್ಲಿ 10 ಜನರಿಗೆ ಕೊರೊನಾ ದೃಢ
ಕೊವಿಡ್​ ಪರೀಕ್ಷೆ (ಪ್ರಾತಿನಿಧಿಕ ಚಿತ್ರ)

ನಗರದ ಬೆಳ್ಳಂದೂರಿನ ಅಂಬಲಿಪುರದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ 10 ಜನರಿಗೆ ಕೊರೊನಾ ದೃಢವಾಗಿದೆ ಎಂದು ಟಿವಿ9ಗೆ BBMP ಆಯುಕ್ತ ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ.

KUSHAL V

|

Feb 22, 2021 | 8:31 PM

ಬೆಂಗಳೂರು: ನಗರದ ಬೆಳ್ಳಂದೂರಿನ ಅಂಬಲಿಪುರದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ 10 ಜನರಿಗೆ ಕೊರೊನಾ ದೃಢವಾಗಿದೆ ಎಂದು ಟಿವಿ9ಗೆ BBMP ಆಯುಕ್ತ ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ. ಅಂದ ಹಾಗೆ, ಅಪಾರ್ಟ್​ಮೆಂಟ್​ನ 9 ಬ್ಲಾಕ್​ಗಳಲ್ಲಿ 1,500 ಫ್ಲ್ಯಾಟ್​ಗಳಿದೆ. 9 ಬ್ಲಾಕ್​ಗಳ ಪೈಕಿ 6 ಬ್ಲಾಕ್​ಗಳಲ್ಲಿ ಇರೋರಿಗೆ ಕೊರೊನಾ ಪತ್ತೆಯಾಗಿದೆ ಎಂದು ಮಂಜುನಾಥ್​ ಪ್ರಸಾದ್​ ಮಾಹಿತಿ ಕೊಟ್ಟಿದ್ದಾರೆ.

ಸದ್ಯ, 500 ಜನರಿಗೆ RT PCR ಟೆಸ್ಟ್ ಮಾಡಿದ್ದು, ನಾಳೆ ವರದಿ ಲಭ್ಯವಾಗಲಿದೆ. ಅಪಾರ್ಟ್​ಮೆಂಟ್​ನಲ್ಲಿ 9 ಮೊಬೈಲ್ ತಂಡಗಳ ನಿಯೋಜನೆ ಮಾಡಲಾಗಿದೆ. 6 ಬ್ಲಾಕ್​ಗಳಲ್ಲಿ 10 ಜನರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ 6 ಬ್ಲಾಕ್​ಗಳನ್ನು ಕಂಟೇನ್​ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ ಎಂದು ಮಂಜುನಾಥ್​ ಪ್ರಸಾದ್​ ಮಾಹಿತಿ ಕೊಟ್ಟಿದ್ದಾರೆ.

ರಾಜ್ಯದಲ್ಲಿಂದು ಹೊಸದಾಗಿ 317 ಜನರಿಗೆ ಕೊರೊನಾ ದೃಢವಾಗಿದೆ. ಇದೀಗ, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,48,466ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,299 ಜನರು ಕೊನೆಯುಸಿರೆಳೆದಿದ್ದಾರೆ. ಸೋಂಕಿತರ ಪೈಕಿ 9,30,087 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 6,061 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ದೊರೆತಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 181 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 4,03,943ಕ್ಕೇರಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 4,454 ಜನರ ಸಾವನ್ನಪ್ಪಿದ್ದಾರೆ. 4,03,943 ಸೋಂಕಿತರ ಪೈಕಿ 3,95,104 ಜನರು ಗುಣಮುಖರಾಗಿದ್ದಾರೆ. 4,384 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.

ಇನ್ನು, ಇತರೆ ಜಿಲ್ಲೆಗಳಲ್ಲಿ ಪತ್ತೆಯಾದ ಕೇಸ್​ಗಳನ್ನು ನೋಡೋದಾದರೆ ಮೈಸೂರಲ್ಲಿ 29, ತುಮಕೂರಲ್ಲಿ 17, ಉಡುಪಿಯಲ್ಲಿ 14, ದಕ್ಷಿಣ ಕನ್ನಡದಲ್ಲಿ 10, ಚಿತ್ರದುರ್ಗದಲ್ಲಿ 9 ಪ್ರಕರಣಗಳು ಪತ್ತೆಯಾಗಿದೆ. ಧಾರವಾಡದಲ್ಲಿ 7, ಚಿಕ್ಕಬಳ್ಳಾಪುರದಲ್ಲಿ 7, ವಿಜಯಪುರದಲ್ಲಿ 5 ಕೇಸ್​, ಶಿವಮೊಗ್ಗದಲ್ಲಿ 5, ಬೀದರ್​ನಲ್ಲಿ 4, ಬಳ್ಳಾರಿಯಲ್ಲಿ 4, ಕಲಬುರಗಿಯಲ್ಲಿ 4 ಕೇಸ್​ಗಳು ವರದಿಯಾಗಿದೆ. ಇನ್ನು, ಹಾಸನದಲ್ಲಿ 4, ಕೋಲಾರದಲ್ಲಿ 4, ಮಂಡ್ಯದಲ್ಲಿ 4, ಕೊಡಗಿನಲ್ಲಿ 3 ಪ್ರಕರಣಗಳು, ದಾವಣಗೆರೆಯಲ್ಲಿ 2, ಬಾಗಲಕೋಟೆಯಲ್ಲಿ 1, ಚಿಕ್ಕಮಗಳೂರಿನಲ್ಲಿ 1 ಕೇಸ್ ವರದಿಯಾಗಿದೆ.ಜೊತೆಗೆ,  ಹಾವೇರಿಯಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Sanitiser: ಕೊರೊನಾ ಆತಂಕ ನಿವಾರಣೆಗೂ ಮೊದಲೇ ಪಾತಾಳಕ್ಕಿಳಿದ ಸ್ಯಾನಿಟೈಸರ್​​ ವ್ಯಾಪಾರ, ಮಾಸ್ಕ್​ ಮಾರಾಟವೂ ಕುಸಿತ

Follow us on

Related Stories

Most Read Stories

Click on your DTH Provider to Add TV9 Kannada