ಎಣ್ಣೆ ಪಾರ್ಟಿ ಮಾಡಿ ಮಲಗಿದ್ದ ಸ್ನೇಹಿತನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆ, ಆರೋಪಿಗಳು ವಶಕ್ಕೆ

ಕಳೆದ ರಾತ್ರಿ ನಿತೇಶ್‌ ಮತ್ತು ಪ್ರಶಾಂತ್‌ ಎಣ್ಣೆ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಪ್ರಶಾಂತ್‌ನನ್ನ ನಿತೇಶ್ ಕಾಲಿನಿಂದ ಒದ್ದಿದ್ದ.

ಎಣ್ಣೆ ಪಾರ್ಟಿ ಮಾಡಿ ಮಲಗಿದ್ದ ಸ್ನೇಹಿತನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆ, ಆರೋಪಿಗಳು ವಶಕ್ಕೆ
ಘಟನೆ ನಡೆದ ಸ್ಥಳ
Follow us
TV9 Web
| Updated By: ಆಯೇಷಾ ಬಾನು

Updated on:Aug 20, 2021 | 10:38 AM

ಬೆಂಗಳೂರು: ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಸ್ನೇಹಿತನ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀನಿವಾಸನಗರದ ನಿತೇಶ್‌ನನ್ನು ಪ್ರಶಾಂತ್ ಹತ್ಯೆಗೈದಿದ್ದಾನೆ. ಆರೋಪಿ ಪ್ರಶಾಂತ್‌, ಹಾಗೂ ಪಪ್ಪಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಶಾಂತ್, ಪಪ್ಪಲ್‌, ನಿತೇಶ್ ಬಾಲ್ಯ ಸ್ನೇಹಿತರಾಗಿದ್ದರು. ಕಳೆದ ರಾತ್ರಿ ಪ್ರಶಾಂತ್, ಪಪ್ಪಲ್‌, ನಿತೇಶ್ ಎಣ್ಣೆ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಪ್ರಶಾಂತ್‌ನನ್ನ ನಿತೇಶ್ ಕಾಲಿನಿಂದ ಒದ್ದಿದ್ದ. ಸ್ವಲ್ಪ ಹೊತ್ತಿನ ಬಳಿಕ ಇಬ್ಬರೂ ಸುಮ್ಮನಾಗಿ ಮಲಗಿದ್ದರು. ಮಲಗಿ ಸ್ವಲ್ಪ ಸಮಯ ಕಳೆಯುತ್ತಿದ್ದಂತೆ ಪ್ರಶಾಂತ್ ಕೋಪದಿಂದ್ದ ಮತ್ತೆ ಎಚ್ಚರಗೊಂಡಿದ್ದಾನೆ. ನಂತರ ನನಗೆ ಒದೆಯುತ್ತಿಯಾ ಎಂದು ನಿತೇಶ್ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯನ್ನು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಡಿ.ಜೆ.ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗುತಿದ್ದ ಪ್ರಶಾಂತ್, ಪಪ್ಪಲ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮೃತ ನಿತೇಶ್, ಸ್ನೇಹಿತರ ಜೊತೆ ಜಗಳವಾದಾಗಲೆಲ್ಲ ಚಾಕು ತೋರಿಸ್ತಿದ್ನಂತೆ. ಆಗಾಗ ಆವಾಜ್ ಹಾಕಿ ಜಗಳ ಮಾಡ್ತಿದ್ನಂತೆ. ಬಿಟ್ರೆ ನಮ್ಮನ್ನ ಒಂದಿನ ಸಾಯುಸಿದ್ರು ಸಾಯಿಸ್ತಾನೆ ಎಂದು ನಿತೇಶ್ ಮಲಗಿದ ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪ್ರಶಾಂತ್, ಪಪ್ಪಲ್ ಕೊಲೆ ಮಾಡಿದ್ದಾರೆ.

ಇನ್ನು ಮತ್ತೊಂದು ಕಡೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಅಂದ್ರಹಳ್ಳಿಯ ಪುನೀತ್(32) ಅರೆಸ್ಟ್ ಆದ ಆರೋಪಿ. ಬಂಧಿತನ ಬಳಿಯಿದ್ದ 500 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಹೊರ ರಾಜ್ಯದ ಕಾರ್ಮಿಕರನ್ನ ಟಾರ್ಗೆಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ. ಬಂಧಿತನಿಂದ 25ಸಾವಿರ ಬೆಲೆಬಾಳುವ 500ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ:  Organ Donation; ಸಾವಿನಲ್ಲೂ ಸಾರ್ಥಕತೆ, ಇಬ್ಬರು ಮಹಾ ದಾನಿಗಳ ಅಂಗಾಂಗ ದಾನದಿಂದ 14 ಮಂದಿಗೆ ಮರುಜೀವ

Published On - 9:28 am, Fri, 20 August 21