ಸದ್ಯಕ್ಕೆ ಸೈಲೆಂಟ್ ಆದ ಜಾರಕಿಹೊಳಿ‌ ಬ್ರದರ್ಸ್; ಮುಂಬೈನಲ್ಲಿ ವಾಸ್ತವ್ಯ ಹೂಡಿದ ರಮೇಶ್ ಜಾರಕಿಹೊಳಿ‌

| Updated By: ಸಾಧು ಶ್ರೀನಾಥ್​

Updated on: Jul 07, 2021 | 2:59 PM

Ramesh jarkiholi : ಷಡ್ಯಂತ್ರ ಮಾಡಿದವರನ್ನ ಮನೆಗೆ ಕಳಿಸ್ತೇನಿ, 10 ದಿನದಲ್ಲಿ ಎಲ್ಲಾ ಬಹಿರಂಗ ಪಡಿಸ್ತೇನಿ.ಜಂಟಿ ಸುದ್ದಿಗೋಷ್ಠಿ ನಡಸಿ ಕೆಲವು ವಿಚಾರ ಹೊರ ಹಾಕ್ತೇನಿ ಅಂತಾ ಅಬ್ಬರಿಸಿದ್ದ ರಮೇಶ್ ಜಾರಕಿಹೊಳಿ‌ ಸೈಲೆಂಟ್ ಮೋಡ್​ಗೆ ಜಾರಿದ್ದಾರೆ. ಸೋದರ ರಮೇಶ್ರನ್ನು ಕರೆದುಕೊಂಡು ಜೂನ್ 4 ಅಥವಾ 5ಕ್ಕೆ ಸುದ್ದಿಗೋಷ್ಠಿ ನಡೆಸುತ್ತೇನೆ ಅಂದಿದ್ದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಫುಲ್​ ಸೈಲೆಂಟ್​ ಆಗಿಬಿಟ್ಟಿದ್ದಾರೆ.

ಸದ್ಯಕ್ಕೆ ಸೈಲೆಂಟ್ ಆದ ಜಾರಕಿಹೊಳಿ‌ ಬ್ರದರ್ಸ್; ಮುಂಬೈನಲ್ಲಿ ವಾಸ್ತವ್ಯ ಹೂಡಿದ ರಮೇಶ್ ಜಾರಕಿಹೊಳಿ‌
ಸದ್ಯಕ್ಕೆ ಸೈಲೆಂಟ್ ಆದ ಜಾರಕಿಹೊಳಿ‌ ಬ್ರದರ್ಸ್; ಮುಂಬೈನಲ್ಲಿ ವಾಸ್ತವ್ಯ ಹೂಡಿದ ರಮೇಶ್ ಜಾರಕಿಹೊಳಿ‌
Follow us on

ಬೆಳಗಾವಿ: ಯಡಿಯೂರಪ್ಪ ಅವರ ನಾಯಕತ್ವದಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ.ಅವರಿಗೇ ನಮ್ಮ ನಿಷ್ಠೆ. ಆದರೆ ಸ್ವಪಕ್ಷೀಯರೇ ನಮಗೆ ದ್ರೋಹ ಬಗೆದಿದ್ದಾರೆ ಎಂದು ಹೇಳುತ್ತಾ ಮುಂದಿನ ಒಂದೆರಡು ದಿನದಲ್ಲಿ ಜಂಟಿ ಸುದ್ದಿಘೋಷ್ಠಿ ನಡೆಸಿ ಎಲ್ಲಾ ಹೇಳುತ್ತೇವೆ ಎಂದು ಗುಟುರು ಹಾಕಿದ್ದ ಜಾರಕಿಹೊಳಿ‌ ಬ್ರದರ್ಸ್ ಸದ್ಯಕ್ಕೆ ಸೈಲೆಂಟ್​ ಮೋಡ್​ಗೆ ಹೋಗಿದ್ದಾರೆ. ಈ ಮಧ್ಯೆ, ಬಿಜೆಪಿ ಶಾಸಕ‌ ರಮೇಶ್ ಜಾರಕಿಹೊಳಿ ಎರಡು ದಿನಗಳಿಂದ ಮತ್ರೆ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಜಾರಕಿಹೊಳಿ‌ ಸಹೋದರರು ಗೇಮ್ ಪ್ಲ್ಯಾನ್ ಬದಲಾಗಿದ್ಯಾಕೆ?
ಒಂದು ಕಡೆ ಮುಂಬೈ ಮಿತ್ರ ಮಂಡಳಿ ಸದಸ್ಯರು ಸೇರಿದಂತೆ ಆಪ್ತ ನಾಯಕರು ರಮೇಶ್ ಜಾರಕಿಹೊಳಿ‌ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಹಾಗಾಗಿ ಸದ್ಯದ ರಾಜಕೀಯ ಬೆಳವಣಿಗೆಗನ್ನು ನೋಡಿಕೊಂಡು ದಾಳ ಉರುಳಿಸಲು ಸದ್ಯಕ್ಕೆ ಜಾರಕಿಹೊಳಿ‌ ಬ್ರದರ್ಸ್ ಸೈಲೆಂಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ, ಮತ್ತೆ ಮುಂಬೈನಲ್ಲಿದ್ದುಕೊಂಡು ಗೇಮ್ ಪ್ಲ್ಯಾನ್ ಬದಲಿಸುವ ಚಿಂತನೆಯಲ್ಲಿದ್ದಾರೆ ರಮೇಶ್ ಜಾರಕಿಹೊಳಿ‌.

ಷಡ್ಯಂತ್ರ ಮಾಡಿದವರನ್ನ ಮನೆಗೆ ಕಳಿಸ್ತೇನಿ, 10 ದಿನದಲ್ಲಿ ಎಲ್ಲಾ ಬಹಿರಂಗ ಪಡಿಸ್ತೇನಿ.ಜಂಟಿ ಸುದ್ದಿಗೋಷ್ಠಿ ನಡಸಿ ಕೆಲವು ವಿಚಾರ ಹೊರ ಹಾಕ್ತೇನಿ ಅಂತಾ ಅಬ್ಬರಿಸಿದ್ದ ರಮೇಶ್ ಜಾರಕಿಹೊಳಿ‌ ಸೈಲೆಂಟ್ ಮೋಡ್​ಗೆ ಜಾರಿದ್ದಾರೆ. ಸೋದರ ರಮೇಶ್ರನ್ನು ಕರೆದುಕೊಂಡು ಜೂನ್ 4 ಅಥವಾ 5ಕ್ಕೆ ಸುದ್ದಿಗೋಷ್ಠಿ ನಡೆಸುತ್ತೇನೆ ಅಂದಿದ್ದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಫುಲ್​ ಸೈಲೆಂಟ್​ ಆಗಿಬಿಟ್ಟಿದ್ದಾರೆ. ತಮ್ಮ ಬೆನ್ನಿಗಿದ್ದವರು ಕೈಬಿಟ್ಟಿದ್ದಕ್ಕೆ‌ ಗೇಮ್ ಪ್ಲ್ಯಾನ್ ಚೇಂಜ್ ಮಾಡಿದ್ರಾ ಜಾರಕಿಹೊಳಿ‌ ಬ್ರದರ್ಸ್‌? ಸುದ್ದಿಗೋಷ್ಠಿ ಮಾಡ್ತೇವಿ ಅಂದಿದ್ದವರು ಕಾದುನೋಡುವ ತಂತ್ರಕ್ಕೆ ಮೊರೆಹೋದರಾ ಎಂಬ ಕುತೂಹಲ ಈಗ ಗರಿಗೆದರಿದೆ.

(jarkiholi brothers keep silent Ramesh jarkiholi stays in mumbai in the changed political scenario)