ಪ್ರಜ್ವಲ್ ರೇವಣ್ಣ ವಿಷಯದಲ್ಲಿ ನಮ್ಮ ಪಕ್ಷ ಯಾವತ್ತೋ ನಿಲುವು ಪ್ರಕಟಿಸಿ ಅಮಾನತು ಮಾಡಿದೆ: ಜಿಟಿ ದೇವೇಗೌಡ

|

Updated on: May 31, 2024 | 4:06 PM

ಈಗ ಪ್ರಜ್ವಲ್ ವಾಪಸ್ಸು ಬಂದಿದ್ದಾರೆ ಮತ್ತು ಅವರ ಬಂಧನವಾಗಿದೆ, ತಮ್ಮ ಕೆಲಸ ಅಲ್ಲಿಗೆ ಮುಗಿಯಿತು ಅಂತ ಅಂತ ದೇವೇಗೌಡರು ಯಾಕೆ ಹೇಳಿದರೋ? ಪಕ್ಷದ ಕಳವಳ ಇರೋದು ಸಂತ್ರಸ್ತೆಯರ ಬಗ್ಗೆ, ಸರ್ಕಾರ ಅವರ ಭವಿಷ್ಯದ ಬಗ್ಗೆ ಇದುವರೆಗೆ ತನ್ನ ನಿಲುವು ಪ್ರಕಟಿಸಿಲ್ಲ ಎಂದು ದೇವೇಗೌಡ ಹೇಳಿದರು.

ಹಾಸನ: ನಗರದಲ್ಲಿಂದು ಮಾಧ್ಯಮ ಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಜೆಡಿಎಸ್ ಮುಖಂಡ ಜಿಟಿ ದೇವೇಗೌಡ (GT Devegowda) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು ಎಲ್ಲ 28 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಹೇಳಿದರು. ಹಾಸನ (Hassan) ಮತ್ತು ಮಂಡ್ಯ (Mandya) ಕ್ಷೇತ್ರಗಳಲ್ಲಿ ಕಾರ್ಯಕರ್ತರ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದಿದ್ದು ನಿಜ ಆದರೆ ಮತದಾನ ದಿನ ಹತ್ತಿರ ಬರುತ್ತಿದ್ದಂತೆಯೇ ಅವರು ಎಲ್ಲವನ್ನು ಮರೆತು ಒಗ್ಗಟ್ಟಾಗಿ ಕೆಲಸ ಮಾಡಿದರು ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದ ದೇವೇಗೌಡ, ಸಂಸದನ ವಿಷಯದಲ್ಲಿ ಮೊದಲ ದಿನವೇ ತಮ್ಮ ಪಕ್ಷ ಎಲ್ಲವನ್ನು ಸ್ಪಷ್ಟಪಡಿಸಿದೆ, ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಮತ್ತು ಪ್ರಕರಣ ಮತ್ತು ಪಕ್ಷದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದರು. ಈಗ ಪ್ರಜ್ವಲ್ ವಾಪಸ್ಸು ಬಂದಿದ್ದಾರೆ ಮತ್ತು ಅವರ ಬಂಧನವಾಗಿದೆ, ತಮ್ಮ ಕೆಲಸ ಅಲ್ಲಿಗೆ ಮುಗಿಯಿತು ಅಂತ ಅಂತ ದೇವೇಗೌಡರು ಯಾಕೆ ಹೇಳಿದರೋ? ಪಕ್ಷದ ಕಳವಳ ಇರೋದು ಸಂತ್ರಸ್ತೆಯರ ಬಗ್ಗೆ, ಸರ್ಕಾರ ಅವರ ಭವಿಷ್ಯದ ಬಗ್ಗೆ ಇದುವರೆಗೆ ತನ್ನ ನಿಲುವು ಪ್ರಕಟಿಸಿಲ್ಲ ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಜೆಪಿಯಲ್ಲಿರುವ ಒಗ್ಗಟ್ಟು, ಶಿಸ್ತು ಜೆಡಿಎಸ್ ಪಕ್ಷದಲ್ಲಿಲ್ಲ: ಜಿಟಿ ದೇವೇಗೌಡ, ಜೆಡಿಎಸ್ ಶಾಸಕ

Follow us on