ಪ್ರಜ್ವಲ್ ರೇವಣ್ಣ 6 ದಿನ ಎಸ್ಐಟಿ ಕಸ್ಟಡಿಗೆ: ವಕೀಲರ ವಾದ-ಪ್ರತಿವಾದ ವಿವರ ಇಲ್ಲಿದೆ

Prajwal Revanna Video Case: ಹಾಸನ ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್​ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್ 6 ದಿನ ಎಸ್​ಐಟಿ ಕಸ್ಟಡಿಗೆ ನೀಡಿದೆ. ಸುಮಾರು ಹೊತ್ತು ವಾದ-ಪ್ರತಿವಾದ ನಡೆಯಿತು. ಹಾಗಾದ್ರೆ, ಪ್ರಜ್ವಲ್ ಹಾಗೂ ಎಸ್​​ಟಿ ಪರ ಯಾರು ವಾದ ಮಂಡಿಸಿದರು? ವಾದ-ಪ್ರತಿವಾದ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

ಪ್ರಜ್ವಲ್ ರೇವಣ್ಣ 6 ದಿನ ಎಸ್ಐಟಿ ಕಸ್ಟಡಿಗೆ: ವಕೀಲರ ವಾದ-ಪ್ರತಿವಾದ ವಿವರ ಇಲ್ಲಿದೆ
ಪ್ರಜ್ವಲ್ ರೇವಣ್ಣ
Follow us
|

Updated on:May 31, 2024 | 5:12 PM

ಬೆಂಗಳೂರು, (ಮೇ 31): ಲೈಂಗಿಕ ದೌರ್ಜನ್ಯ (sexual harassment Case) ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಜೂನ್ 6 ರವರೆಗೆ ಅಂದರೆ ಆರು ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ.  ಈ ವೇಳೆ ಮಾಧ್ಯಮಗಳ ಟ್ರಯಲ್​​ಗೆ ನಿರ್ಬಂಧ ವಿಧಿಸಲು ಪ್ರಜ್ವಲ್ ನ್ಯಾಯಾಧೀಶರ ಮುಂದೆ ಮನವಿ ಮಾಡಿದರು. ಆದ್ರೆ, ಇದಕ್ಕೆ ವಕೀಲರನ್ನು ಸಂಪರ್ಕಿಸಲು ಪ್ರಜ್ವಲ್ ಗೆ ಜಡ್ಜ್​ ಸೂಚನೆ ನೀಡಿದ್ದಾರೆ. ಇನ್ನು  ಬೆಳಗ್ಗೆ 9.30ರಿಂದ 10.30ರವರೆಗೆ ವಕೀಲರ ಭೇಟಿಗೆ ಅವಕಾಶ ಮಾಡಿಕೊಡಬೇಕು. ವೈದ್ಯಕೀಯ ಚಿಕಿತ್ಸೆ ಬೇಕಿದ್ದರೆ ಒದಗಿಸಲು ಅವಕಾಶ. ಹಾಗೇ ಕಸ್ಟಡಿ ಅವಧಿಯಲ್ಲಿ ಕಿರುಕುಳ ನೀಡದಂತೆ ಕೋರ್ಟ್​, ತನಿಖಾಧಿಕಾರಿಗಳಿ ಸೂಚನೆ ನೀಡಿದೆ.

ನಿನ್ನೆ ಮಧ್ಯರಾತ್ರಿ ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರನ್ನು ಎಸ್​ಐಟಿ ಬಂಧಿಸಿದ್ದು, ಇಂದು(ಮೇ 31) ಅವರನ್ನು ವೈದ್ಯಕೀಯ ತಪಾಸಣೆ ಮಾಡಿಸಿ ಬಳಿಕ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ಅಗತ್ಯವಿರುವುದರಿಂದ ತಮ್ಮ ಕಸ್ಟಡಿಗೆ ನೀಡುವಂತೆ  ಮನವಿ ಮಾಡಿದೆ.  ಎಸ್​ಐಟಿ ಮನವಿ ಪುರಸ್ಕರಿಸಿದ ಕೋರ್ಟ್​, ಪ್ರಜ್ವಲ್ ರೇವಣ್ಣನನ್ನು ಏಳು ದಿನ ಎಸ್​ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಎಸ್​ಐಟಿ ಪರವಾಗಿ ಎಸ್‌ಪಿಪಿ ಅಶೋಕ್ ನಾಯಕ್‌ ಅವರು ವಾದ ಮಂಡಿಸಿದರೆ, ಪ್ರಜ್ವಲ್​ ಪರ ಅರುಣ್​ ವಾದ ಮಂಡಿಸಿದರು.

ಇದನ್ನೂ ಓದಿ: ಮ್ಯೂನಿಕ್​ನಿಂದ ಬೆಂಗಳೂರು ವರೆಗೆ ಪ್ರಜ್ವಲ್: ಈ ಅವಧಿಯಲ್ಲಿ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ

ಎಸ್​ಐಟಿ ಹಾಗೂ ಪ್ರಜ್ವಲ್​ ಪರ ವಕೀಲರ ವಾದ ಪ್ರತಿವಾದ ಹೇಗಿತ್ತು?

ಎಸ್‌ಐಟಿ ಪರವಾಗಿ ಎಸ್‌ಪಿಪಿ ಅಶೋಕ್ ನಾಯಕ್‌ ವಾದ ಮಂಡನೆ ಮಾಡಿದ್ದು, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪವಿದೆ. ಲೋಕಸಭಾ ಚುನಾವಣೆಗೆ ಮುನ್ನ ಈತನ ಅಶ್ಲೀಲ ದೃಶ್ಯ ವೈರಲ್ ಆಗಿದೆ. ಪ್ರಕರಣದಲ್ಲಿ ನೂರಕ್ಕೂ ಹೆಚ್ಚು ಸಂತ್ರಸ್ತೆ ಇದ್ದಾರೆ. ಕೆಲ ತಿಂಗಳ ಹಿಂದೆ ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ತಡೆ ತಂದಿದ್ದರು. ಈತ ವಿಕೃತಕಾಮಿ, ತನ್ನದೇ ಅಶ್ಲೀಲ ದೃಶ್ಯವನ್ನು ವಿಡಿಯೋ ಮಾಡಿದ್ದಾನೆ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು.

ಜಡ್ಜ್​: ನೀವು ಸ್ಟೋರಿ ಹೇಳಬೇಡಿ, ಕಸ್ಟಡಿ ಬಂಧನದ ಕಾರಣ ತಿಳಿಸಿ ಎಂದು ಪ್ರಶ್ನಿಸಿದರು.

ಎಸ್‌ಪಿಪಿ ಅಶೋಕ್ ನಾಯಕ್‌:  ಜಡ್ಜ್​ ಪ್ರಶ್ನಿಗೆ ಉತ್ತರಿಸಿದ ಎಸ್‌ಪಿಪಿ ಅಶೋಕ್ ನಾಯಕ್‌, ಈತ ವಿಡಿಯೋ ವೈರಲ್ ಆದ ಮೇಲೆ ದೇಶ ಬಿಟ್ಟು ಹೋಗಿದ್ದ. ಈತನನ್ನು ಬಂಧಿಸಿ ತನಿಖೆಗೊಳಪಡಿಸಿದರೆ ಸತ್ಯ ತಿಳಿಯಲಿದೆ. ಪ್ರಕರಣದಲ್ಲಿ ಹಲವರು ಸಂತ್ರಸ್ತೆಯರು ಇದ್ದು, ಮುಂದೆ ಬರಬೇಕಿದೆ. ಹೊರ ದೇಶಕ್ಕೆ ಹೋಗಲು ಹಲವರ ಪಾತ್ರ ಇದೆ. ಅವರ ಬಗ್ಗೆಯೂ ತನಿಖೆ ಮಾಡಲು ಈತನ ಬಂಧನ ಅಗತ್ಯವಾಗಿದೆ. ವಿಡಿಯೋ ವೈರಲ್ ಆದ ನಂತರ ಹಲವು ಮಹಿಳೆಯರು ಸಂಕಷ್ಟದಲ್ಲಿದ್ದಾರೆ. ಮಹಿಳೆಯರ ಪತಿಯರು ಅವರನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ತಿಳಿಸಿದರು.

ಎಸ್‌ಪಿಪಿ ಅಶೋಕ್ ನಾಯಕ್‌: ಈತ ತನ್ನದೇ ಲೈಂಗಿಕ ದೃಶ್ಯವನ್ನು ಚಿತ್ರೀಕರಿಸಿದ್ದಾನೆ. ಹೀಗಾಗಿ ಈತನ ತನಿಖೆ ಮಾಡಬೇಕಿದೆ. ಈತನ‌ ಮೊಬೈಲ್ ವಶಕ್ಕೆ ಪಡೆದು ಅದರಲ್ಲಿನ ವಿಡಿಯೋ ಪಡೆಯಬೇಕಿದೆ. ಡ್ರೈವರ್ ನಿಂದ ಮೊಬೈಲ್ ಮಾತ್ರ ರಿಕವರಿ ಮಾಡಲಾಗಿದೆ. ಇವನ ಮೊಬೈಲ್ ಲಾಕ್ ಸಿಸ್ಟಮ್ ಇದೆ. ಇವನು ಮತ್ತೊಬ್ಬನ ಫೇಸ್ ಲಾಕ್ ಇದೆ. ಇವೆಲ್ಲವನ್ನೂ ತನಿಖೆ ನಡೆಸಬೇಕದೆ. ವಿಡಿಯೋ ಮಾಡದ ದೌರ್ಜನ್ಯ ಪ್ರಕರಣಗಳೂ ಇವೆ. ಅವುಗಳ ಬಗ್ಗೆಯೂ ತನಿಖೆ .ಮಾಡಬೇಕಿದೆ ಅಶೋಕ್ ನಾಯಕ್ ತಮ್ಮ ವಾದ ಮಂಡಿಸಿದರು.

ಜಡ್ಜ್​: ಈ ವೇಳೆ ಜಡ್ಜ್​ ಮಧ್ಯ ಪ್ರವೇಶ ಮಾಡಿ, ದೇಶ ತೊರೆಯುವಾಗ ಎಫ್ಐಆರ್ ಆಗಿತ್ತಾ ಎಂದು ಪ್ರಶ್ನಿಸಿದರು.

ಎಸ್​ಐಟಿ ಪರ ವಕೀಲ:  ಇಲ್ಲ ಹೋದ ಮೇಲೆ ಎಸ್ಐಟಿ ರಚನೆಯಾಯ್ತು . ತಪ್ಪಿಸಿಕೊಂಡು ಹೋಗಲೆಂದೇ ದೇಶ ಬಿಟ್ಟು ಹೋಗಿದ್ದನು. ವಕೀಲರೂ ಪ್ರವಾಸದಲ್ಲಿದ್ದರೆಂದು ಹೇಳಿದ್ದರೇ ಹೊರತು ದೇಶ ತೊರೆದ ಬಗ್ಗೆ ಹೇಳಿರಲಿಲ್ಲ. ವಿಮಾನ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾನೆ. ವಿದೇಶದಲ್ಲೇ ಬಂಧನ ತಪ್ಪಿಸಲು ಈಗ ದೇಶಕ್ಕೆ ಮರಳಿದ್ದನೆ ಮರಳಿದ್ದಾನೆ. ಬಂಧಿಸಿ ಸಮಂಜಸವಾದ ತನಿಖೆ ನಡೆಸಲು ಅವಕಾಶವಿದೆ. ಬಟ್ಟೆ ಬಿಚ್ಚುವುದಿಲ್ಲ ಎಂದಾಗ ಬಲಪ್ರಯೋಗಿಸಲೂ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ 15 ದಿನ ಎಸ್​ಐಟಿ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿದರು.

ಪ್ರಜ್ವಲ್​ ಪರ ವಕೀಲ ಅರುಣ್ ವಾದ: ಎಸ್​ಐಟಿ ಪರ ವಾದ ಮುಗಿಯುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ವಾದ ಮಾಡಿದ್ದು, ಸಂತ್ರಸ್ತೆ ಅತ್ಯಾಚಾರ ಮಾಡಿದ್ದಾರೆಂದು ಮೊದಲು ದೂರು ನೀಡಿಲ್ಲ. ಪ್ರಕರಣದ ಸಂತ್ರಸ್ತೆಯ ಯಾವುದೇ ದೃಶ್ಯ ರೆಕಾರ್ಡ್ ಆಗಿಲ್ಲ. ನಾಲ್ಕು ವರ್ಷದ ಹಳೆಯ ಪ್ರಕರಣವೆಂದು ದೂರಿನಲ್ಲಿದೆ. ಏ.28ರಿಂದ ಮೇ 2ರವರೆಗೆ ಯಾವುದೇ ಅತ್ಯಾಚಾರದ ಉಲ್ಲೇಖವಿಲ್ಲ. ಸಿಆರ್‌ಪಿಸಿ 161 ಹೇಳಿಕೆ ನಂತರ ಅತ್ಯಾಚಾರ ಆರೋಪ ದಾಖಲಾಗಿದೆ. ಪದಗಳನ್ನು ಬಳಸಿ ತಮಗೆ ಬೇಕಾದಂತೆ ವಾದ ಮಂಡಿಸುತ್ತಿದ್ದಾರೆ. ಅಭಿಯೋಜಕರು ಈ ಕೇಸ್‌ನಲ್ಲಿ ನ್ಯಾಯಯುತವಾಗಿ ವರ್ತಿಸಿಲ್ಲ. ಜಾಮೀನು ನೀಡಬಹುದಾಗಿದ್ದ ಕೇಸ್‌ನ್ನು ಜಾಮೀನು ರಹಿತ ಮಾಡಿದ್ದಾರೆ ಎಂದು ವಾದ ಮಂಡಿಸಿದರು.

ಪ್ರಜ್ವಲ್​ ಪರ ವಕೀಲ ಅರುಣ್: ಲೈಂಗಿಕ ದೌರ್ಜನ್ಯ ಕೇಸನ್ನು ಅತ್ಯಾಚಾರದ ಕೇಸಾಗಿ ಪರಿವರ್ತಿಸಿದ್ದಯ. ಮಹಿಳಾ ತನಿಖಾಧಿಕಾರಿ ಹೇಳಿಕೆ ದಾಖಲಿಸಬೇಕು. ವಿಡಿಯೋ ರೆಕಾರ್ಡ್ ಮಾಡಬೇಕೆಂಬ ನಿಯಮವಿದೆ. ಆದರೆ ರೆಡಿಮೇಡ್ ದೂರನ್ನು ಸ್ವೀಕರಿಸಲಾಗಿದೆ. ದೂರುದಾರಳ ಹೇಳಿಕೆಯ ಯಾವುದೇ ವಿಡಿಯೋ ಮಾಡಿಲ್ಲ. ವಿಡಿಯೋದಲ್ಲಿರುವವರ ಮುಖ ಆಧರಿಸಿ ತನಿಖೆ ಮಾಡುತ್ತಿದ್ದಾರೆ. ಅದಕ್ಕೆ ಇಷ್ಟು ದಿನ ಕಸ್ಟಡಿ ಅವಶ್ಯಕತೆ ಇಲ್ಲ. ಬೇರೆ ಪ್ರಕರಣಗಳನ್ನು ಉಲ್ಲೇಖಿಸಿ ಈ ಕೇಸಿನಲ್ಲಿ ಕಸ್ಟಡಿ ಪಡೆಯುವಂತಿಲ್ಲ ಎಂದು ಹೇಳಿದ ವಕೀಲ ಅರುಣ್, ಪ್ರಜ್ವಲ್ ತನಿಖೆಗೆ ಸಹಕರಿಸಿಲ್ಲ ಎಂದು ವಾರೆಂಟ್ ಜಾರಿಗೊಳಿಸಿದೆ. 15 ದಿನ ಪೊಲೀಸ್ ಕಸ್ಟಡಿ ಏಕೆ ಬೇಕು ತಿಳಿಯುತ್ತಿಲ್ಲ. ತನಿಖೆಗೆ ಸಹಕರಿಸಲು ಪ್ರಜ್ವಲ್ ಸಿದ್ದವಿದ್ದಾರೆ.  ಎಸ್‌ಪಿಪಿ ಗ್ಯಾಲರಿಗಾಗಿ ವಾದ ಮಾಡುತ್ತಿದ್ದಾರೆ ಎಂದರು.

ಎಸ್​ಐಟಿ ಪರ ಎಸ್ ಪಿಪಿ ಅಶೋಕ್ ನಾಯಕ್: ಇನ್ನು ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಅವರು ತಮ್ಮ ವಾದದಲ್ಲಿ ಎಸ್ ಪಿಪಿ ಗ್ಯಾಲರಿಗೆ ವಾದ ಮಾಡುತ್ತಿದ್ದಾರೆ ಎನ್ನುತ್ತಲೇ ಇತ್ತ ಅಶೋಕ್ ನಾಯಕ್ ಎದ್ದು ನಿಂತು, ನಾನು ಗ್ಯಾಲರಿಗೆ ವಾದ ಮಾಡುತ್ತಿಲ್ಲ. ನನಗೆ ಬೇರೆ ಕೆಲಸ ಇಲ್ಲದೇ ವಾದ ಮಾಡುತ್ತಿಲ್ಲ. ಈತ ಸಾಮಾನ್ಯನಲ್ಲ ಕಾನೂನು ಮಾಡುವವರು ಎಂದರು.

ಜಡ್ಜ್: ಕೇಸಿನಲ್ಲಿ ಹೇಗೆ ದೂರು ದಾಖಲಾಯಿತು?

ಪ್ರಜ್ವಲ್ ಪರ ವಕೀಲ: ರೆಡಿಮೇಡ್ ದೂರು ಸ್ವೀಕರಿಸಲಾಗಿದೆ

ಜಡ್ಜ್: ಲಿಖಿತ ದೂರು ನೀಡಿದಾಗ ದಾಖಲಿಸಿಕೊಂಡಿದ್ದಾರೆ. ಇದಕ್ಕೂ ಮಹಿಳಾ ಅಧಿಕಾರಿ ದೂರು ಮಾಡಿಕೊಳ್ಳಬೇಕೆಂಬ ನಿಯಮವಿದೆಯೇ ? ಮೌಖಿಕ ದೂರು ನೀಡಿದಾಗ ಮಾತ್ರ ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕು, ಆದರೆ ಈಕೆಯೇ ಲಿಖಿತ ದೂರು ಕೊಟ್ಟಿರುವುದರಿಂದ ಅದರ ಅಗತ್ಯವಿಲ್ಲ.

ಪ್ರಜ್ವಲ್ ಪರ ವಕೀಲ: ಮಹಿಳೆ ದೂರಿನೊಂದಿಗೆ ಪೊಲೀಸ್ ಠಾಣೆಗೆ ಬಂದಾಗ ಇದನ್ನು ಒಪ್ಪಬಹುದು. ಆದರೆ ಈ ಕೇಸಿನಲ್ಲಿ ಸೀಕ್ರೆಟ್ ಸ್ಥಳದಿಂದ ದೂರು ಕೊಡುತ್ತಾಳೆಂದು ಹೊಳೆನರಸೀಪುರ ಪೊಲೀಸರಿಗೆ ಮಾಹಿತಿ ಬರುತ್ತದೆ. ಆ ನಂತರ ಇವರೇ ಹೋಗಿ ದೂರು ಪಡೆದಿದ್ದಾರೆ

Published On - 4:42 pm, Fri, 31 May 24

ತಾಜಾ ಸುದ್ದಿ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!