ಮ್ಯೂನಿಕ್​ನಿಂದ ಬೆಂಗಳೂರು ವರೆಗೆ ಪ್ರಜ್ವಲ್: ಈ ಅವಧಿಯಲ್ಲಿ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ

Prajwal Revanna Arrest: ಪ್ರಜ್ವಲ್ ಬರುವ ವಿಚಾರ ಗೊತ್ತಾಗಿ ಬೆಂಗಳೂರಿನಲ್ಲಿ ಮಾಡಿಕೊಂಡಂಥ ಸಿದ್ಧತೆಗಳು ಹೇಗಿದ್ದವು? ಪ್ರಜ್ವಲ್ ಜರ್ಮನಿಯಿಂದ ಬೆಂಗಳೂರಿಗೆ ಬರುವ ತನಕ, ಅಂದರೆ ನಿನ್ನೆ ಇಡೀ ದಿನ ಏನೆಲ್ಲ ಘಟನಾವಳಿಗಳು ನಡೆದವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮ್ಯೂನಿಕ್​ನಿಂದ ಬೆಂಗಳೂರು ವರೆಗೆ ಪ್ರಜ್ವಲ್: ಈ ಅವಧಿಯಲ್ಲಿ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ
ಪ್ರಜ್ವಲ್ ರೇವಣ್ಣ ಬಂಧನ
Follow us
Ganapathi Sharma
|

Updated on: May 31, 2024 | 6:50 AM

ಬೆಂಗಳೂರು, ಮೇ 31: ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಕೊನೆಗೂ ಬೆಂಗಳೂರಿಗೆ ಬಂದಿದ್ದು ಎಸ್​ಐಟಿ (SIT) ಅವರನ್ನು ವಶಕ್ಕೆ ಪಡೆದಿದೆ. ಹಾಗಿದ್ರೆ ಜರ್ಮನಿಯ ಮ್ಯೂನಿಕ್​ನಿಂದ ಪ್ರಜ್ವಲ್ ಪ್ರಯಾಣ ಹೇಗಿತ್ತು? ಪ್ರಜ್ವಲ್ ಬರುವ ವಿಚಾರ ಗೊತ್ತಾಗಿ ಇಲ್ಲಿ ಮಾಡಿಕೊಂಡಂಥ ಸಿದ್ಧತೆಗಳು ಹೇಗಿದ್ದವು? ಎಸ್​ಐಟಿ ಅಧಿಕಾರಿಗಳ (SIT Officials)ಮುಂದಿನ ತನಿಖೆ ದಿಕ್ಕು ಹೇಗೆ ಸಾಗಲಿದೆ ಎಂಬ ವಿವರ ಇಲ್ಲಿದೆ.

ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದಿಳಿದು, ಎಸ್​ಐಟಿ ಅಧಿಕಾರಿಗಳ ಕೈಗೆ ಸಿಗುವ ವರೆಗೂ, ಬಂಧನಕ್ಕೊಳಗಾಗುವ ವರೆಗೂ ಯಾವುದನ್ನೂ ಪಕ್ಕಾ ಅಂತಾ ಹೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದರೆ, ಈ ಬಾರಿ ಪ್ರಜ್ವಲ್​ಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ಪ್ರಜ್ವಲ್ ತಾವೇ ಹೇಳಿದಂತೆ ಬಂದು ಅರೆಸ್ಟ್ ಆಗಿದ್ದಾರೆ.

  1. ಮಧ್ಯಾಹ್ನ 12 ಗಂಟೆಗೆ ಪ್ರಜ್ವಲ್ ಬರುವ ಮಾಹಿತಿ ಬೆಂಗಳೂರು ಕಮಿಷನರ್ ಜೊತೆ ಎಸ್​ಐಟಿ ಮುಖ್ಯಸ್ಥರು ಸಭೆ ನಡೆಸಿದರು.
  2. ಪ್ರಜ್ವಲ್ ರೇವಣ್ಣ ಮೊದಲೇ ಟಿಕೆಟ್ ಬುಕ್ ಮಾಡಿದ ಮಾಹಿತಿ ಅನ್ವಯ, ಫ್ಲೈಟ್ ನಿನ್ನೆ ಸಂಜೆ 4 ಗಂಟೆ ಬಳಿಕ ಟೇಕಾಫ್ ಆಗಲಿತ್ತು. ಹೀಗಾಗಿ ಮಧ್ಯಾಹ್ನವೇ ಅಲರ್ಟ್​ ಆಗಿದ್ದ ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, 12 ಗಂಟೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಸಭೆ ನಡೆಸಿದ್ರು. ಪ್ರಜ್ವಲ್ ಬರ್ತಿದ್ದಂತೆ ಭದ್ರತೆ, ಅವರನ್ನ ಕರೆತರುವ ವಿಧಾನದ ಕುರಿತು ಚರ್ಚೆ ನಡೆಸಿದರು.
  3. ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ಲಗೇಜ್ ಚೆಕ್​ಇನ್ ಮಾಡಲಾಗಿತ್ತು. ಸಂಜೆ 4 ಗಂಟೆ 5 ನಿಮಿಷಕ್ಕೆ ವಿಮಾನ ಟೇಕಾಫ್ ಆಯಿತು.
  4. ಪ್ರಜ್ವಲ್ ಫ್ಲೈಟ್ ಏರಿದ್ದಾರೆ ಅನ್ನೋದನ್ನ ಕನ್ಫರ್ಮ್ ಮಾಡಿಕೊಂಡಿದ್ದ ಎಸ್​ಐಟಿ ಅಧಿಕಾರಿಗಳ ಒಂದು ತಂಡ ನಿನ್ನೆ ಸಂಜೆ 4.30ಕ್ಕೆ ಕೆಂಪೇಗೌಡ ಏರ್​ಪೋರ್ಟ್​​ಗೆ ಆಗಮಿಸಿತ್ತು. ಅಲ್ದೆ ಪ್ರಜ್ವಲ್​ ಬಂಧಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ 10 ಜನರಿಗೆ ಪಾಸ್ ನೀಡುವಂತೆ ಏರ್​ಪೊರ್ಟ್ ಭದ್ರತಾ ವಿಭಾಗಕ್ಕೆ ಎಸ್​ಐಟಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು.
  5. ಪ್ರಜ್ವಲ್ ಹೊರಟಿದ್ದು ದೃಢಪಟ್ಟಿತ್ತು. ಎಸ್​ಐಟಿ ಬಂಧನಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿತ್ತು. ಇದೇ ವೇಳೆ ದೆಹಲಿಯಿಂದ ನಿನ್ನೆ ವಾಪಸ್ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್‌, ಇಂಟಲಿಜೆನ್ಸ್ ಎಡಿಜಿಪಿ ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್‌ ಸಭೆಯಲ್ಲಿ ಭಾಗಿಯಾಗಿದ್ದರು. ಅರ್ಧಗಂಟೆಗಳ ಕಾಲ ಸಭೆ ನಡೆಸಿ, ಪ್ರಜ್ವಲ್ ಪ್ರಕರಣದಲ್ಲಿ ಕಾನೂನು ಹೋರಾಟಗಳ ಬಗ್ಗೆ ಮಾಹಿತಿ ನೀಡಿ ತೆರಳಿದರು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಕೇಸ್​: ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಎಸ್ಐಟಿ

ಹೀಗೆ ಮಧ್ಯರಾತ್ರಿವರೆಗೂ ಕಾದು. ಪ್ರಜ್ವಲ್ ರೇವಣ್ಣ ಬರ್ತಿದ್ದಂತೆ ಅರೆಸ್ಟ್​ ಮಾಡಿ ಎಸ್​ಐಟಿ ಕಚೇರಿಗೆ ಕರೆದೊಯ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ