ಬೆಂಗಳೂರು: ಪಾಕಿಸ್ತಾನಕ್ಕೆ ಭಾರತದ ಫೋಟೋ ನೀಡಿದ ಆರೋಪ; ಜೀತೆಂದರ್ ಸಿಂಗ್ ಜಾಮೀನು ಅರ್ಜಿ ವಜಾ

| Updated By: ಸಾಧು ಶ್ರೀನಾಥ್​

Updated on: Jul 18, 2022 | 6:06 PM

ಆರೋಪಿ ಜೀತೆಂದರ್ ಸಿಂಗ್ ನನ್ನು ಭಯೋತ್ಪಾದನೆ ನಿಗ್ರಹ ದಳ ಬಂಧಿಸಿತ್ತು. ಈತ ಸೇನೆಯ ಸಮವಸ್ತ್ರ ಧರಿಸಿ ಮಾಹಿತಿ ಕಲೆಹಾಕಿದ್ದ. ಸೇನೆಯ ರಹಸ್ಯ ಮಾಹಿತಿಯ ಫೋಟೋ ಹಂಚಿಕೊಂಡಿದ್ದ. ಆದರೆ ತಾನು ಕೇವಲ ಪಾಕಿಸ್ತಾನಿ ಯುವತಿಯೊಂದಿಗೆ ಚಾಟ್ ಮಾಡಿದ್ದೇನೆ ಎಂದು ವಾದ ಮಂಡಿಸಿದ್ದ.

ಬೆಂಗಳೂರು: ಪಾಕಿಸ್ತಾನಕ್ಕೆ ಭಾರತದ ಫೋಟೋ ನೀಡಿದ ಆರೋಪ; ಜೀತೆಂದರ್ ಸಿಂಗ್ ಜಾಮೀನು ಅರ್ಜಿ ವಜಾ
ಪಾಕ್​ಗೆ ಭಾರತದ ಫೋಟೋ ನೀಡಿದ ಆರೋಪ; ಜೀತೆಂದರ್ ಸಿಂಗ್ ಜಾಮೀನು ಅರ್ಜಿ ವಜಾ
Follow us on

ಬೆಂಗಳೂರು: ಪಾಕಿಸ್ತಾನಕ್ಕೆ ಭಾರತದ ನೌಕಾದಳ, ಸೇನೆಯ ಫೋಟೋ ನೀಡಿದ ಆರೋಪ ಹೊತ್ತಿರುವ ಜೀತೆಂದರ್ ಸಿಂಗ್ (Jitendra Singh) ಎಂಬಾತನ ಜಾಮೀನು ಅರ್ಜಿಯನ್ನು ಹೈಕೋರ್ಟ್ (karnataka high court) ವಜಾಗೊಳಿಸಿದೆ. ಪಾಕಿಸ್ತಾನಿ ವ್ಯಕ್ತಿಗಳೊಂದಿಗೆ ಸೇರಿ ಒಳಸಂಚು, ಪಾಕಿಸ್ತಾನಿ ಐಎಸ್ಐ ನೊಂದಿಗೆ (Pakistan Inter Service Intelligence ISI) ಮಾಹಿತಿ ಹಂಚಿಕೊಂಡ ಆರೋಪ ಜೀತೆಂದರ್ ಮೇಲಿದೆ.

ಆರೋಪಿ ಜೀತೆಂದರ್ ಸಿಂಗ್ ನನ್ನು ಭಯೋತ್ಪಾದನೆ ನಿಗ್ರಹ ದಳ ಬಂಧಿಸಿತ್ತು. ಈತ ಸೇನೆಯ ಸಮವಸ್ತ್ರ ಧರಿಸಿ ಮಾಹಿತಿ ಕಲೆಹಾಕಿದ್ದ. ಸೇನೆಯ ರಹಸ್ಯ ಮಾಹಿತಿಯ ಫೋಟೋ ಹಂಚಿಕೊಂಡಿದ್ದ. ಆದರೆ ತಾನು ಕೇವಲ ಪಾಕಿಸ್ತಾನಿ ಯುವತಿಯೊಂದಿಗೆ ಚಾಟ್ ಮಾಡಿದ್ದೇನೆ ಎಂದು ವಾದ ಮಂಡಿಸಿದ್ದ. ಜೀತೆಂದರ್ ಸಿಂಗ್ ವಾದವನ್ನು ಹೈಕೋರ್ಟ್ ಏಕಸದಸ್ಯ ಪೀಠವು ಒಪ್ಪಲಿಲ್ಲ. ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದರಿಂದ ಭದ್ರತೆಗೆ ಧಕ್ಕೆಯಾಗಲಿದೆ. ಪಾಕಿಸ್ತಾನ ಈ ಸ್ಥಳಗಳನ್ನು ಗುರಿಯಾಗಿಸಿಕೊಳ್ಳಬಹುದು ಎಂದು ನ್ಯಾ. ಕೆ. ನಟರಾಜನ್ ರವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿತು.