ಉತ್ತರ ಕನ್ನಡ ಪೊಲೀಸರಿಂದ ಅಕ್ರಮವಾಗಿ ಸಾಗಿಸುತ್ತಿದ್ದ 46 ಲಕ್ಷ ಮೌಲ್ಯದ ಮದ್ಯ ವಶ
ಅಕ್ರಮವಾಗಿ ಸಾಗಿಸುತ್ತಿದ್ದ 46 ಲಕ್ಷ ಮೌಲ್ಯದ ಮದ್ಯವನ್ನು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಬಳಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಉತ್ತರ ಕನ್ನಡ: ಅಕ್ರಮವಾಗಿ ಸಾಗಿಸುತ್ತಿದ್ದ 46 ಲಕ್ಷ ಮೌಲ್ಯದ ಮದ್ಯವನ್ನು (Alcohol), ಉತ್ತರ ಕನ್ನಡ (Uttar Kannada) ಜಿಲ್ಲೆಯ ಕಾರವಾರ (Karwar) ತಾಲೂಕಿನ ಬಿಣಗಾ ಬಳಿ ಪೊಲೀಸರು ಜಪ್ತಿ ಮಾಡಿದ್ದಾರೆ. ಗೋವಾದಿಂದ (Goa) ಹೈದರಾಬಾದ್ಗೆ (Hyderabad) ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರು. ಈ ವೇಳೆ ಜಿಲ್ಲಾ ಪೊಲೀಸ್ ಕಛೇರಿಯ ವಿಶೇಷ ವಿಭಾಗದ ಪಿಎಸ್‌ಐ ಪ್ರೇಮನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆ ಮಹಾರಾಷ್ಟ್ರ ಮೂಲದ ಚಾಲಕ ಸುಧಾಕರ ಅರ್ಜುನ ಗೋಲಾಂಡೆಯನ್ನು ವಶಕ್ಕೆ ಪಡೆದಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಹಂದಿ ಅಣ್ಣಿ ಸಹಚರ ಅನಿಲ್ ಅಲಿಯಾಸ್ ಅಂಬು ಹತ್ಯೆಗೆ ಸಂಚು ರೂಪಿಸಿರುವ ವಿಚಾರವಾಗಿ ಶಿವಮೊಗ್ಗ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾತನಾಡಿ ಹತ್ಯೆಗೆ ಸ್ಕೆಚ್ ಹಿನ್ನೆಲೆ ನಿನ್ನೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಘ್ನೇಶ್ ಅಲಿಯಾಸ್ ಜಿಂಕೆ, ಚಂದನ್, ಕಿರಣ್ ಅಲಿಯಾಸ್ ಕುಟ್ಟಿ ಮೇಲೆ ಪ್ರಕರಣ ದಾಖಲಾಗಿದೆ. ಹಂದಿ ಅಣ್ಣಿ ಕೊಲೆ ವಿಚಾರದಲ್ಲಿ ತನಿಖೆ ಮಾಡುವಾಗ ಹತ್ಯೆಗೆ ಸ್ಕೆಚ್ ಹಾಕಿರುವುದುಬಯಲಾಗಿದೆ ಎಂದು ತಿಳಿಸಿದರು.
ಬಂಕ್ ಬಾಲು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಂಬು ಅಲಿಯಾಸ್ ಅನಿಲ್, ಹತ್ಯೆಗೆ ಮಾರಕಾಸ್ತ್ರಗಳನ್ನು ಸಹ ತಯಾರಿ ಮಾಡಿಟ್ಟುಕೊಂಡಿದ್ದನು. ಮನೆಯ ಮೇಲೆ ದಾಳಿ ಮಾಡಿದ ವೇಳೆ ಮಾರಕಾಸ್ತ್ರಗಳು ಪತ್ತೆಯಾಗಿವೆ. ಇಬ್ಬರನ್ನು ಅರೆಸ್ಟ್ ಮಾಡಿದ್ದು, ಒಬ್ಬ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
Published On - 7:07 pm, Mon, 18 July 22