ಮಳೆ ನಿಂತರು ನಿಲ್ಲದ ಕಡಲ ಅಬ್ಬರ: ಕಡಲಕೊರೆತಕ್ಕೆ ಕೊಚ್ಚಿಹೋದ ಹೊನ್ನಾವರದ ಇಕೋ ಬೀಚ್ ರಸ್ತೆ
ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಿದ್ದು, ನವಬೃಂದಾವನ ಗಡ್ಡೆ ಸಂಪೂರ್ಣ ಜಲಾವೃತವಾಗಿದೆ.
ಕಾರವಾರ: ಮಳೆ ನಿಂತರು ಕಡಲ ಅಲೆಗಳ ಅಬ್ಬರ ನಿಂತಿಲ್ಲ. ಗಜಗಾತ್ರದ ಅಲೆಗಳ ಅಬ್ಬರಕ್ಕೆ ಕಡಲ ತೀರ ಕೊಚ್ಚಿ ಹೋಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಏಕೋ ಬೀಚಿನಲ್ಲಿ ಭಾರೀ ಕಡಲ ಕೊರೆತ ಉಂಟಾಗಿದ್ದು, ಅಲೆ ಅಬ್ಬರಕ್ಕೆ ರಸ್ತೆ ಕೊಚ್ಚಿ ಹೋಗಿದೆ. ಹೊನ್ನಾವರದಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಮಾಡುತ್ತುದ್ದ ರಸ್ತೆ ಸಮುದ್ರ ಪಾಲಾಗಿದ್ದು, ಶೇಕಡಾ 80% ರಸ್ತೆ ಸಂಪೂರ್ಣ ಹಾಳಾಗಿದೆ. ಗಜ ಗಾತ್ರದ ಅಲೆಗಳ ಅಬ್ಬರಕ್ಕೆ ಕಡಲ ತೀರದ ಜನರದಲ್ಲಿ ಆತಂಕ ಹೆಚ್ಚಾಗಿದ್ದು, ಕಾರವಾರ, ಕುಮಟಾ, ಭಟ್ಕಳದಲ್ಲಿ, ಹೊನ್ನಾವರದಲ್ಲಿ ಭಾರೀ ಕಡಲ ಕೊರೆತ ಸಂಭವಿಸಿದೆ. ಕಡಲ ಕೊರೆತಕ್ಕೆ ಶಾಶ್ವತ ಪರಿಹಾರ ನೀಡುವಂತೆ ಜನರ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: Kodagu Rain: ಭಾರೀ ಶಬ್ಧದೊಂದಿಗೆ ಭೂಕುಸಿತ, ಮಡಿಕೇರಿಯಲ್ಲಿ ಕೊಚ್ಚಿಬಂತು ಐದು ಎಕರೆಯಷ್ಟು ಭೂಮಿ
ನವಬೃಂದಾವನ ಗಡ್ಡೆ ಸಂಪೂರ್ಣ ಜಲಾವೃತ
ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಿದ್ದು, ನವಬೃಂದಾವನ ಗಡ್ಡೆ ಸಂಪೂರ್ಣ ಜಲಾವೃತವಾಗಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ನವಬೃಂದಾವನ ಗಡ್ಡೆ. ನವಬೃಂದಾವನ ಗಡ್ಡೆಯ ದೃಶ್ಯ ದ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನವಬೃಂದಾವನ ಗಡ್ಡೆಯಲ್ಲಿ ರಘುವರ್ಯ ಮಹಿಮೋತ್ಸಮ ನಡೆಯಬೇಕಿತ್ತು. ನದಿಗೆ ಅಪಾರ ಪ್ರಮಾಣ ನೀರು ಬಿಟ್ಟಿದ್ದರಿಂದ ಎರಡು ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿದವು. ಇದೀಗ ಭಕ್ತರಿಲ್ಲದೆ ನವಬೃಂದಾವನ ಶಾಂತವಾಗಿದೆ.
ರೈತರ ಮುಖದಲ್ಲಿ ಸಂತಸ
ಕರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾ ಬಾಚಣಕಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯ ನೀರಿಲ್ಲದೆ ಸಂಪೂರ್ಣವಾಗಿ ಬರಿದಾಗಿತ್ತು. ಕಳೆದ 15 ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಜಲಾಶಯ ಭರ್ತಿಯಾಗಿದ್ದು ರೈತರ ಮುಖದಲ್ಲಿ ಸಂತಸ ಮೂಡಿದೆ. ಇನ್ನು ಜಲಾಶಕ್ಕೆ ಅಂಟಿಕೊಂಡ ಗದ್ದೆಗಳಿಗೆ ನೀರು ಹರಿಸಲು ಅನುಕೂಲವಾಯಿತು ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಗರಿಗೆದರಿದ ಕೆಸರುಗದ್ದೆ ಕ್ರೀಡಾ ಚಟುವಟಿಕೆ
ಕೊಡಗು: ಜಿಲ್ಲೆಯಲ್ಲಿ ಮಳೆ ಅಬ್ಬರ ಇಳಿಮುಖವಾಗುತ್ತಿದಂತೆಯೇ ಕೆಸರುಗದ್ದೆ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. ವಿರಾಜಪೇಟೆ ತಾಲೂಕಿನ ಕಡಂಗ ಗ್ರಾಮದಲ್ಲಿ ಕೆಸರುಗದ್ದೆ ಫುಟ್ಬಾಲ್ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ತಂಡಗಳು ಕೆಸರಲ್ಲಿ ಮುಳುಗೆದ್ದು ಸಂಭ್ರಮಿಸಿದರು. ಜಿಟಿಜಿಟಿ ಮಳೆಯ ಮಧ್ಯೆಯೇ ಯುವಕರು ಕಾಲ್ಚೆಂಡು ಒದ್ದು ಟ್ರೋಪಿ ಜಯಿಸಿ ಸಂಭ್ರಮಿಸಿದರು.
Published On - 8:12 am, Tue, 19 July 22