ರಾಯಚೂರು: ತಾಯಿ ಕಾರ್ಡ್ ಮಾಡಿಕೊಡಲು ಲಂಚ ನೀಡುವಂತೆ ಆವಾಜ್ ಹಾಕಿದ ಹಿನ್ನೆಲೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಸಾವಿತ್ರಿಯನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಡಿಹೆಚ್‌ಒ ರಾಮಕೃಷ್ಣ ಆದೇಶ ಹೊರಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲದಗುಡ್ಡ ಆರೋಗ್ಯ ಉಪ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸಾವಿತ್ರಿ, ತಾಯಿ ಕಾರ್ಡ್‌ಗೆ ಹಣ ನೀಡುವಂತೆ ಮಹಿಳೆಯೊಬ್ಬರ ಸಂಬಂಧಿಕರಿಗೆ ಆವಾಜ್ ಹಾಕಿದ್ದಾರೆ. ಜೋರು ಧ್ವನಿಯಲ್ಲಿ 200 ರೂ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ಅಲ್ಲದೆ ಆಸ್ಪತ್ರೆಗೆ ಬರುವವರಿಗೆ ಇದೇ ರೀತಿ ಹಣಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದರಂತೆ. ಇನ್ನು ಸಾವಿತ್ರಿ ಲಂಚಕ್ಕೆ ಆವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಡಿಹೆಚ್‌ಒ ರಾಮಕೃಷ್ಣ, ಸಾವಿತ್ರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬಾಲಿವುಡ್ ಡ್ರಗ್ಸ್ ದಂಧೆ ಪ್ರಕರಣ: ಇಬ್ಬರು ಎನ್ಸಿಬಿ ಅಧಿಕಾರಿಗಳು ಅಮಾನತು..
Published On - 8:10 am, Mon, 28 December 20