ಪೇರೂರು ಗ್ರಾಮ: ಮದುವೆ ಕಾರ್ಯಕ್ರಮದಿಂದ ವಾಪಸಾಗುತ್ತಿದ್ದಾಗ ತಡರಾತ್ರಿ ಕಾಡಾನೆ ತುಳಿತಕ್ಕೆ ವ್ಯಕ್ತಿ ಬಲಿ
ಪಿ.ಎಂ ಅಪ್ಪಣ್ಣ ಮದುವೆಗೆಂದು ತೆರಳಿದ್ದರು. ಮದುವೆ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ತಡರಾತ್ರಿಯಾಗಿತ್ತು. ಆ ವೇಳೆ, ಕಾಡಾನೆಯೊಂದು ದಾಳಿ ನಡೆಸಿದೆ. ಆನೆ ತುಳಿದ ರಭಸಕ್ಕೆ ಅಪ್ಪಣ್ಣ ಮರಣ ಹೊಂದಿದ್ದಾನೆ.
ಕೊಡಗು: ನಿನ್ನೆ ರಾತ್ರಿ (ಡಿ. 27) ಮನೆಗೆ ತೆರಳುತ್ತಿದ್ದಾಗ ಕಾಡಾನೆ ತುಳಿದು ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲೂಕಿನ ಪೇರೂರು ಗ್ರಾಮದ ಮಾಂಜಾಟ್ ಕಾಲೋನಿಯಲ್ಲಿ ನಡೆದಿದೆ. ಮೃತ 48 ವರ್ಷದ ಪಿ.ಎಂ. ಅಪ್ಪಣ್ಣ ಎಂದು ಗುರುತಿಸಲಾಗಿದೆ.
ಪಿ.ಎಂ. ಅಪ್ಪಣ್ಣ ಮದುವೆಗೆಂದು ತೆರಳಿದ್ದರು. ಮದುವೆ ಶುಭ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ತಡರಾತ್ರಿಯಾಗಿತ್ತು. ಆ ವೇಳೆ, ಕಾಡಾನೆಯೊಂದು ದಾಳಿ ನಡೆಸಿದೆ. ಆನೆ ತುಳಿದ ರಭಸಕ್ಕೆ ಅಪ್ಪಣ್ಣ ಮರಣ ಹೊಂದಿದ್ದಾರೆ.
ಸೋಮವಾರಪೇಟೆಯಲ್ಲೂ ಕಾಡಾನೆ ಉಪಟಳ:
ಸೋಮವಾರಪೇಟೆ ಕೂಗೂರು ಗ್ರಾಮದ ಮೋಹನ್ ಎಂಬುವವರ ಕಾಫಿ ತೋಟದಲ್ಲಿ ಕಾರ್ಮಿಕರು ಕಾಫಿ ಕೊಯ್ಲು ಮಾಡುತ್ತಿದ್ದರು. ಈ ವೇಳೆ, ಏಕಏಕಿ ಕಾಡಾನೆ ತೋಟಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಆನೆಯಿಂದ ತಪ್ಪಿಸಿಕೊಳ್ಳಲು ಹೋದ ಕಾರ್ಮಿಕರು ಹಳ್ಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳು ಅಸ್ಸಾಂನ ಸುಕೊರ್, ಒಮೇಜ್, ರುಕ್ಮಿಯಾ ಎಂದು ತಿಳಿದು ಬಂದಿದೆ. ಆನೆಗಳನ್ನು ಕಾಡಿಗಟ್ಟುವಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 8:39 am, Mon, 28 December 20