ಬೆಂಗಳೂರಿನಲ್ಲಿ ಬಾಲಾಪರಾಧಿಯಿಂದ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ
ಸೋಂಕಿತ ಬಾಲಕನನ್ನು ಕೊವಿಡ್ ಆಸ್ಪತ್ರೆಗೆ ಕರೆದೊಯ್ಯಲು BBMP ಆರೋಗ್ಯ ಸಿಬ್ಬಂದಿ ಬಂದಿದ್ದರು. ಆರೋಗ್ಯ ಸಿಬ್ಬಂದಿಯ ಜೊತೆ ತೆರಳಲು ನಿರಾಕರಿಸಿದ ಬಾಲಕ ಗಲಾಟೆ ಶುರು ಮಾಡಿದ್ದು, ಈ ವೇಳೆ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಸಿದ್ದಾನೆ.
ಬೆಂಗಳೂರು: ಬಾಲಾಪರಾಧಿ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ಮಡಿವಾಳದ ಬಾಲಾಪರಾಧಿಗಳ ಪುನಶ್ಚೇತನ ಕೇಂದ್ರದಲ್ಲಿ ನಡೆದಿದೆ. ಕೇಂದ್ರದಲ್ಲಿದ್ದ ಓರ್ವ ಬಾಲಾಪರಾಧಿಗೆ ಕೊವಿಡ್ ಸೋಂಕು ದೃಢಪಟ್ಟಿತ್ತು. ಈ ಕಾರಣದಿಂದಾಗಿ ಸೋಂಕಿತ ಬಾಲಕನನ್ನು ಕೊವಿಡ್ ಆಸ್ಪತ್ರೆಗೆ ಕರೆದೊಯ್ಯಲು BBMP ಆರೋಗ್ಯ ಸಿಬ್ಬಂದಿ ಬಂದಿದ್ದರು. ಆರೋಗ್ಯ ಸಿಬ್ಬಂದಿಯ ಜೊತೆ ತೆರಳಲು ನಿರಾಕರಿಸಿದ ಬಾಲಕ ಗಲಾಟೆ ಶುರು ಮಾಡಿದ್ದು, ಈ ವೇಳೆ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಸಿದ್ದಾನೆ.
ಸಿಕ್ಕಸಿಕ್ಕ ವಸ್ತುಗಳನ್ನು ಆರೋಗ್ಯ ಸಿಬ್ಬಂದಿಯ ಮೇಲೆ ಎಸೆದ ಯುವಕ, ಅವಾಚ್ಯ ಶಬ್ದಗಳಿಂದ ಆರೋಗ್ಯ ಸಿಬ್ಬಂದಿಯನ್ನು ನಿಂದಿಸಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಸೋಂಕಿತ ಬಾಲಕನಿಗೆ 2ರಿಂದ 3 ಗಂಟೆಗಳ ಕಾಲ ಮನವೊಲಿಸಿದ್ದಾರೆ. ಭದ್ರತೆಯೊಂದಿಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ದ ಸಿಬ್ಬಂದಿಗಳು ಬೆಂಗಳೂರಿನ ಹಜ್ ಭವನದಲ್ಲಿ ಸೋಂಕಿತ ಬಾಲಕನಿಗೆ ಚಿಕಿತ್ಸೆ ನೀಡಿದ್ದಾರೆ.
ಚೀನಾದಲ್ಲಿ ಬಾಲಾಪರಾಧಿಗಳ ವಯೋಮಿತಿ 14 ರಿಂದ 12 ವರ್ಷಕ್ಕೆ ಇಳಿಕೆ ಚೀನಾ ದೇಶ ತನ್ನ ಅಪರಾಧ ಕಾನೂನಿನಲ್ಲಿ ಕೆಲ ಬದಲಾವಣೆಗಳನ್ನು ತರಲು ಮುಂದಾಗಿತ್ತು. ಅಪ್ರಾಪ್ತ ವಯಸ್ಸಿನ ಮಕ್ಕಳಿಂದ ನಡೆಯುತ್ತಿರುವ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಲಾಗಿತ್ತು. ಈ ಮೊದಲು 14 ವರ್ಷಗಳಿಗಿಂತ ದೊಡ್ಡವರು ಅಪರಾಧ ಮಾಡಿದರೆ ಅಂಥವರನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತಿತ್ತು. ನಂತರ ಅಪರಾಧದ ವಯಸ್ಸಿನ ಮಿತಿಯನ್ನು 12 ವರ್ಷಗಳಿಗೆ ಇಳಿಕೆ ಮಾಡಲಾಗಿದೆ.
ಚೀನಾದ ಕೆಲ ಅಪರಾಧಗಳಿಗೆ ಈ ನಿಯಮ ಅನ್ವಯವಾಗಲಿದೆ. ಉದ್ದೇಶಪೂರ್ವಕ ಹತ್ಯೆ, ಹಲ್ಲೆಯಿಂದ ಆದ ಸಾವು ಅಥವಾ ಅಂಗವೈಕಲ್ಯ, ಹಿಂಸಾಚಾರ ಕೃತ್ಯಗಳು ಅಪರಾಧವೆಂದು ಪರಿಗಣನೆಯಾಗಲಿದೆ. ಈ ಅಪರಾಧಗಳಿಗೆ ಹೊರತಾಗಿ ಇತರ ಕೃತ್ಯಗಳನ್ನು ಎಸಗಿದರೆ, ಅಂತಹ ಮಕ್ಕಳಿಗೆ ಶಿಕ್ಷೆ ನೀಡಲಾಗುವುದಿಲ್ಲ. ಬದಲಾಗಿ, ಅವರಿಗೆ ತಪ್ಪನ್ನು ತಿದ್ದಿಕೊಳ್ಳುವಂತೆ ಶಿಕ್ಷಣ ನೀಡಲಾಗುವುದು ಎಂದು ತಿಳಿಸಲಾಗಿತ್ತು.
ಈ ಮೊದಲು, ಚೀನಾದಲ್ಲಿ 14 ರಿಂದ 16 ವರ್ಷದವರೆಗಿನ ಮಕ್ಕಳಿಗೆ ಕ್ರಿಮಿನಲ್ ಅಪರಾಧದ ಶಿಕ್ಷೆ ಅನ್ವಯವಾಗುತ್ತಿತ್ತು. ಈಗ ಮಕ್ಕಳ ಅಪರಾಧದ ವಯಸ್ಸನ್ನು 12 ರಿಂದ 14 ವರ್ಷದೊಳಗೆ ತರಲಾಗಿದೆ. ಚೀನಾದಲ್ಲಿ ಇತ್ತೀಚೆಗೆ ಕೆಲವಾರು ಬಾಲಾಪರಾಧಗಳು ದಾಖಲಾದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ:
((juvenile delinquent attacked on health worker in Bangalore)