ಜಗದೀಶ್ ತಮ್ಮ ಹೆಸರನ್ನೇ ನೋಂದಾಯಿಸಿಲ್ಲ ಎಂಬ ಬಾರ್​ ಕೌನ್ಸಿಲ್​ ಹೇಳಿಕೆಗೆ ವಕೀಲ ಜಗದೀಶ್ ಕೊಟ್ಟ ಉತ್ತರ ಹೀಗಿದೆ..

| Updated By: ಆಯೇಷಾ ಬಾನು

Updated on: Apr 02, 2021 | 6:34 AM

ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದ ಸಲ್ಲಿಸಿರುವ ವಕೀಲ ಕೆ.ಎನ್.ಜಗದೀಶ್, 2011 ರಲ್ಲಿ ವೀರಪ್ಪ ಮೊಯ್ಲಿ ಕೇಂದ್ರ ಕಾನೂನು ಸಚಿವರಾಗಿದ್ದಾಗ ತಿದ್ದುಪಡಿಗೊಳಿಸಲಾದ Advocates act ತಿದ್ದುಪಡಿ ತಂದಿರಿರುವುದರಿಂದ ವಕೀಲರು ಭಾರತದ ಯಾವುದೇ ರಾಜ್ಯ ಹಾಗೂ ನ್ಯಾಯಾಲಯಗಳಲ್ಲಿ ವಾದಿಸಬಹುದು ಎನ್ನುವ ವಿಚಾರವನ್ನು ಉಲ್ಲೇಖಿಸಿದ್ದಾರೆ.

ಜಗದೀಶ್ ತಮ್ಮ ಹೆಸರನ್ನೇ ನೋಂದಾಯಿಸಿಲ್ಲ ಎಂಬ ಬಾರ್​ ಕೌನ್ಸಿಲ್​ ಹೇಳಿಕೆಗೆ ವಕೀಲ ಜಗದೀಶ್ ಕೊಟ್ಟ ಉತ್ತರ ಹೀಗಿದೆ..
ವಕೀಲ ಕೆ.ಎನ್​.ಜಗದೀಶ್​ ಕುಮಾರ್​
Follow us on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಡಿಯಲ್ಲಿರುವ ಸಂತ್ರಸ್ತ ಯುವತಿ ಪರ ವಕಾಲತ್ತು ವಹಿಸಿರುವ ವಕೀಲ ಕೆ.ಎನ್​.ಜಗದೀಶ್ ಕರ್ನಾಟಕದಲ್ಲಿ ವಕೀಲಿ ವೃತ್ತಿ ನಡೆಸಲು ಹೆಸರನ್ನೇ ನೋಂದಾಯಿಸಿಲ್ಲ ಎಂಬ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಹೇಳಿಕೆಗೆ ಸ್ವತಃ ಕೆ.ಎನ್​.ಜಗದೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆಯಿಂದ ನನ್ನ ವಿರುದ್ಧ ಹಲವು ಆರೋಪ ಕೇಳಿ ಬರುತ್ತಿದೆ. ಕರ್ನಾಟಕ ರಾಜ್ಯ ಬಾರ್​ ಕೌನ್ಸಿಲ್​ನಲ್ಲಿ ನೋಂದಣಿ ಮಾಡಿಲ್ಲ ಅಂತಿದ್ದಾರೆ. ಆದರೆ, ನನಗೆ ಕರ್ನಾಟಕ ಕಾನೂನು ವಿವಿಯಲ್ಲಿ ಕಾನೂನು ಪದವಿ ಆಗಿದೆ. ಆಲ್‌ ಇಂಡಿಯಾ ಬಾರ್ ಕೌನ್ಸಿಲ್ ಎಕ್ಸಾಮ್ ಪಾಸ್ ಆಗಿದೆ. ದೆಹಲಿಯಲ್ಲಿ ನನ್ನ ಹೆಸರನ್ನು ನೋಂದಣಿ ಮಾಡಿದ್ದೇನೆ. ಹಾಗಾಗಿ ನಾನು ವಕೀಲ ವೃತ್ತಿ ನಡೆಸಲು ನೋಂದಣಿಯೇ ಮಾಡಿಸಿಲ್ಲ ಎಂಬುದು ಸರಿಯಲ್ಲ. ತಾಕತ್ತಿದ್ದರೆ ವೈಯಕ್ತಿಕವಾಗಿ ನನ್ನ ವಿರುದ್ಧ ಹೋರಾಡಲಿ. ಅದು ಬಿಟ್ಟು ಹೀಗೆ ಸುಳ್ಳುಕಂತೆಗಳನ್ನು ಪೋಣಿಸುವುದು ಬೇಡ ಎಂದು ಅವರು ಸವಾಲೆಸೆದಿದ್ದಾರೆ.

ಇನ್ನು ಇದೇ ವೇಳೆ, ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದ ಸಲ್ಲಿಸಿರುವ ವಕೀಲ ಕೆ.ಎನ್.ಜಗದೀಶ್, 2011 ರಲ್ಲಿ ವೀರಪ್ಪ ಮೊಯ್ಲಿ ಅವರು ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದಾಗ ಮಾಡಲಾದ Advocates act 1961ರ ಸೆಕ್ಷನ್​ 30ರ ತಿದ್ದುಪಡಿ ಅನ್ವಯ ವಕೀಲರು ಭಾರತದ ಯಾವುದೇ ರಾಜ್ಯ ಹಾಗೂ ನ್ಯಾಯಾಲಯಗಳಲ್ಲಿ ವಾದಿಸಬಹುದು ಎನ್ನುವ ವಿಚಾರವನ್ನು ಉಲ್ಲೇಖಿಸಿದ್ದಾರೆ.

ಜೊತೆಗೆ, ಆರೋಪ ಮಾಡುತ್ತಿರುವವರು ಆರೋಪ ಮಾಡುವುದಿದ್ದರೆ ನೇರವಾಗಿ ದೂರು ಕೊಡಲಿ. ಬೇಕಿದ್ದರೆ ವಿರೋಧಿಗಳು ಸಾವಿರ ಮಾತನಾಡಲಿ, ಇಲ್ಲಿ ತಮಾಷೆ ಮಾಡೋಕೆ ಬಂದಿಲ್ಲ. ಎಷ್ಟೋ ಜನ ಇದುವರೆಗೆ ಹೆಸರು ನೋಂದಾಯಿಸಿಕೊಂಡೇ ಇಲ್ಲ. ನನ್ನ ಮೇಲೆ ನಿಜವಾಗಲೂ ಆರೋಪ ಮಾಡುವುದಿದ್ದರೆ, ಪದೇ ಪದೇ ನಮ್ಮ ನಿಷ್ಠೆ ಬಗ್ಗೆ ಪ್ರಶ್ನೆ ಮಾಡುವ ಬದಲು ದೂರನ್ನೇ ಕೊಡಬಹುದು ಎಂದು ಹೇಳಿದ್ದಾರೆ.

ಜಗದೀಶ್​ ಕುಮಾರ್ ಮೇಲಿದ್ದ ಆರೋಪ ಏನು?
ಕರ್ನಾಟಕದಲ್ಲಿ ವಕೀಲಿ ವೃತ್ತಿ ನಡೆಸಲು ಕೆ.ಎನ್.ಜಗದೀಶ್ ಕುಮಾರ್ ಹೆಸರನ್ನು ನೋಂದಾಯಿಸಿಯೇ ಇಲ್ಲ ಎಂದು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸ್ಪಷ್ಟನೆ ನೀಡಿತ್ತು. ವಕೀಲ ಎಸ್.ಬಸವರಾಜ್ ಎಂಬುವವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್, ಕೆ.ಎನ್.ಜಗದೀಶ್ ಕುಮಾರ್ ಕರ್ನಾಟಕದಲ್ಲಿ ವಕೀಲಿ ವೃತ್ತಿಗೆ ನೋಂದಾಯಿಸಿಲ್ಲ ಎಂದು ತಿಳಿಸಿತ್ತು. KSBCಯಲ್ಲಿ ಹೆಸರು ನೋಂದಾಯಿಸಿಕೊಳ್ಳದೇ ಯಾವ ವಕೀಲರೂ ಯಾರ ಪರವೂ ವಕಾಲತ್ತು ಸಲ್ಲಿಸಿ ವಾದ ಮಾಡುವಂತಿಲ್ಲ ಎಂದು ತಿಳಿಸಲಾಗಿತ್ತು. ಈ ಆರೋಪಕ್ಕೆ ಇದೀಗ ಸ್ವತಃ ವಕೀಲ ಕೆ.ಎನ್​.ಜಗದೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:
ಕರ್ನಾಟಕದಲ್ಲಿ ವಕೀಲಿ ವೃತ್ತಿ ನಡೆಸಲು ಜಗದೀಶ್ ಕುಮಾರ್​ ಹೆಸರನ್ನೇ ನೋಂದಾಯಿಸಿಲ್ಲ: ಬಾರ್​ ಕೌನ್ಸಿಲ್​ ಸ್ಪಷ್ಟನೆ

ಪೋಷಕರ ಮಾತನಾಡಿಸಬೇಕೆಂದು ಹಟ, ಬಿಕ್ಕಿಬಿಕ್ಕಿ ಅತ್ತ ಸಿಡಿ ಸಂತ್ರಸ್ತೆ: ಅನುಮತಿ ನೀಡಲ್ಲ ಎಂದ ಎಸ್​ಐಟಿ

(K N Jagadish Kumar reply for allegations by Karnataka State Bar Council)

Published On - 6:19 pm, Thu, 1 April 21