ಅಯೋಧ್ಯೆ ಬಳಿ ಅಫಘಾತ: ಕಲಬುರಗಿ ಮೂಲದ ಮೂವರು ರಾಮ ಭಕ್ತರ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: May 25, 2024 | 4:00 PM

ಅಯೋಧ್ಯೆ ಬಳಿ ನಿನ್ನೆ ರಾತ್ರಿ ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಲಬುರಗಿ ಮೂಲದ ಮೂವರು ರಾಮ ಭಕ್ತರು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ 22 ಜನ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. 

ಅಯೋಧ್ಯೆ ಬಳಿ ಅಫಘಾತ: ಕಲಬುರಗಿ ಮೂಲದ ಮೂವರು ರಾಮ ಭಕ್ತರ ಸಾವು
ಅಯೋಧ್ಯೆ ಬಳಿ ಲಾರಿ-ಟಿಟಿ ನಡುವೆ ಮುಖಾಮುಖಿ ಡಿಕ್ಕಿ: ಕಲಬುರಗಿ ಮೂಲದ ಮೂವರು ಸಾವು
Follow us on

ಕಲಬುರಗಿ, ಮೇ 25: ನಿನ್ನೆ ರಾತ್ರಿ ಅಯೋಧ್ಯೆ (Ayodhya) ಬಳಿ ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ (Accident) ಹೊಡೆದ ಪರಿಣಾಮ ಕಲಬುರಗಿ ಮೂಲದ ಮೂವರು ರಾಮ ಭಕ್ತರು ಸಾವನ್ನಪ್ಪಿದ್ದಾರೆ. ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿವರಾಜ್, ಕಾಶಿನಾಥ್ ಹಾಗೂ ತಂಗೆಮ್ಮ ಮೃತ ದುರ್ದೈವಿಗಳು. ಗಾಯಾಳುಗಳಿಗೆ ಅಯೋಧ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ 22 ಜನ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆದಲ್ಲಿರುವ ರಾಮಲಲ್ಲಾ ನೋಡಲು ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.

ಸುಗ್ಲಾಬಾಯಿ, ಅನುರಪ್ಪ, ರಾಜಾರಾಂ, ತಾರಾವತಿ, ಪ್ರೀತಿ, ಶಿವಲೀಲಾ, ಚಂದ್ರಕಾಂತ, ಇಂದು, ಚಂದ್ರಮ್ಮ, ಮಹದೇವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಜಿಲ್ಲಾ ಆಸ್ಪತ್ರೆಯ ತುರ್ತು ವೈದ್ಯಾಧಿಕಾರಿ ಆಶಿಶ್ ಪಾಠಕ್ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿ ಗಂಭೀರವಾಗಿರುವುದರಿಂದ ದರ್ಶನ್ ನಗರದ ವೈದ್ಯಕೀಯ ಕಾಲೇಜಿಗೆ ರೋಗಿಯನ್ನು ರವಾನಿಸಲಾಗಿದೆ. ಉಳಿದ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ನೇಣುಬಿಗಿದುಕೊಂಡು ಅನುಮಾನಸ್ಪದವಾಗಿ ವ್ಯಕ್ತಿ ಆತ್ಮಹತ್ಯೆ: ಕೊಲೆ ಶಂಕೆ ಅರೋಪ

ನೆಲಮಂಗಲ: ಅನುಮಾನಸ್ಪದವಾಗಿ ವ್ಯಕ್ತಿ ಆಲದ ಮರಕ್ಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಸಮೀಪದ ಪಾಲನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಸಂಬಂಧಿಗಳಿಂದ ಕೊಲೆ ಶಂಕೆ ಅರೋಪ ಕೇಳಿಬಂದಿದೆ. ಚಿಕ್ಕನರಸಯ್ಯ(59) ಮೃತ ವ್ಯಕ್ತಿ.

ಇದನ್ನೂ ಓದಿ: ಬಾತ್​​ ರೂಮ್​ನ​ಲ್ಲಿ ಯುವತಿ ಶವ ಪತ್ತೆ ಕೇಸ್​: ಪ್ರಬುದ್ಧಳ ಕೈ ಕೋಯ್ದು ಕೊಲೆಗೈದ ಬಾಲಕ

ಕಳದ 6 ವರ್ಷಗಳಿಂದ ವೆಂಕಟರಮಣಪ್ಪ ಅವರ ತೋಟದಲ್ಲಿ ಮೃತ ಚಿಕ್ಕನರಸಯ್ಯ ಕೆಲಸ ಮಾಡುತ್ತಿದ್ದ. ತೋಟದ ಮಾಲಿಕರೆ ಕೊಲೆ ಮಾಡಿರುವ ಬಗ್ಗೆ ಶಂಕೆ ಸಂಬಂಧಿಗಳು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರಿಂದ ತೋಟದ ಮಾಲಕ ವೆಂಕಟರಮಣಪ್ಪ ವಿಚಾರಣೆ ಮಾಡಲಾಗಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಬಾರಿ ಬೈಕ್​ಗಳನ್ನ ಕಳುವು ಮಾಡ್ತಿದ್ದ ಮೂವರ ಅಪ್ರಾಪ್ತ ಬಾಲಕರ ಬಂಧನ

ದುಬಾರಿ ಬೈಕ್​ಗಳನ್ನ ಕಳುವು ಮಾಡ್ತಿದ್ದ ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಲಾಗಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬನ್ನೇರುಘಟ್ಟ ಠಾಣೆ ಪೊಲೀಸರಿಂದ ಮೂವರು ಅಪ್ರಾಪ್ತರನ್ನು ಅರೆಸ್ಟ್​ ಮಾಡಲಾಗಿದೆ.

ಇದನ್ನೂ ಓದಿ: ನ್ಯಾಯಾಧೀಶರು ಮತ್ತು ವೈದ್ಯ ತಂಡದ ಸಮಕ್ಷಮ ಆದಿಲ್ ದೇಹದ ಪಂಚನಾಮೆ ನಡೆಸಲಾಗುವುದು: ಉಮಾ ಪ್ರಶಾಂತ್, ಎಸ್ ಪಿ

ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನು ಕದಿಯುತ್ತಿದ್ದರು. ಡಿಯೋ ಬೈಕ್, ಪಲ್ಸರ್, ಆಕ್ಸಿಸ್ ಬೈಕ್ ಸೇರಿ ಹಲವು ಬೈಕ್ ಕಳ್ಳತನ ಮಾಡುತ್ತಿದ್ದರು. ಒಟ್ಟು 7 ಬೈಕ್​​ ಸೇರಿ ಮೂವರು ಅಪ್ರಾಪ್ತ ಬಾಲಕರು ಪೊಲೀಸರು ಬಂಧಿಸಿದ್ದಾರೆ. ಮೂವರನ್ನು ಮಡಿವಾಳದ ಬಾಲಮಂದಿರಕ್ಕೆ ಕಳಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:34 pm, Sat, 25 May 24