ಮಹೆಂದ್ರಾ ಥಾರ್​ನಲ್ಲಿ 3 ದೇಶ, 8000 ಕಿ.ಮೀ ಸುತ್ತಾಟ: ಇದು ಕಲಬುರಗಿಯ ವೈದ್ಯನ ಸಾಹಸಮಯ ಟ್ರಿಪ್

ಅನೇಕರು ದೇಶ, ಪ್ರಪಂಚ ಪರ್ಯಟನೆ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಕೆಲವರು ಸಾಹಸಮಯ ಪ್ರವಾಸಗಳನ್ನು ಇತ್ತೀಚೆಗೆ ಯುವಕರು ಹೆಚ್ಚಾಗಿ ಕೈಗೊಳ್ಳುತ್ತಿದ್ದಾರೆ. ಆದ್ರೆ ಮನಸು ಇದ್ರೆ ವಯಸ್ಸು ಲೆಕ್ಕಕ್ಕಿಲ್ಲ ಅನ್ನೋದನ್ನು ಕಲಬುರಗಿ ನಗರದ ವೈದ್ಯರೊಬ್ಬರು ಸಾಧಿಸಿ ತೋರಿಸುತ್ತಿದ್ದಾರೆ. 57ನೇ ಇಳಿಯಸ್ಸಿನಲ್ಲೂ ಮೂರು ದೇಶಗಳಲ್ಲಿ ಬರೋಬ್ಬರಿ ಎಂಟು ಸಾವಿರ ಕಿಲೋ ಮೀಟರ್ ಸುತ್ತಾಡಿದ್ದಾರೆ. ಇನ್ನು ತಮ್ಮ ಸಾಹಸಮಯದ ಟ್ರಿಪ್​ ಬಗ್ಗೆ ಮೆಲುಕು ಹಾಕಿಕೊಂಡಿದ್ದಾರೆ. ಅದು ಈ ಕೆಳಗಿನಂತಿದೆ ನೋಡಿ.

ಮಹೆಂದ್ರಾ ಥಾರ್​ನಲ್ಲಿ 3 ದೇಶ, 8000 ಕಿ.ಮೀ ಸುತ್ತಾಟ: ಇದು ಕಲಬುರಗಿಯ ವೈದ್ಯನ ಸಾಹಸಮಯ ಟ್ರಿಪ್
ಡಾ.ಶರದ್ ತಂಗಾ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on:Sep 06, 2023 | 10:52 AM

ಕಲಬುರಗಿ, ಸೆಪ್ಟೆಂಬರ್ 06): ದೇಶ ಸುತ್ತು ಕೋಶ ಓದು ಎನ್ನುವುದು ಹಳೆಯ ಗಾದೆ. ಇತ್ತೀಚೆಗೆ ಕೋಶ ಓದುವದರ ಜೊತೆಗೆ ದೇಶವನ್ನು ಸುತ್ತು. ಬರಿ ಕೇಳುವದು, ಓದುವದು ಮಾತ್ರವಲ್ಲ, ನೋಡುವುದು ಕೂಡಾ ಅವಶ್ಯ ಎನ್ನುವ ಮಾತು ಹೆಚ್ಚು ಚಾಲ್ತಿಯಲ್ಲಿದೆ. ಹೀಗಾಗಿ ಅನೇಕರು ದೇಶ, ಪ್ರಪಂಚ ಪರ್ಯಟನೆ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಕೆಲವರು ಸಾಹಸಮಯ ಪ್ರವಾಸಗಳನ್ನು ಇತ್ತೀಚೆಗೆ ಯುವಕರು ಹೆಚ್ಚಾಗಿ ಕೈಗೊಳ್ಳುತ್ತಿದ್ದಾರೆ. ಆದ್ರೆ ಮನಸು ಇದ್ರೆ ವಯಸ್ಸು ಲೆಕ್ಕಕ್ಕಿಲ್ಲ ಎನ್ನುವುದನ್ನು ಕಲಬುರಗಿ ನಗರದ ವೈದ್ಯರೊಬ್ಬರು ಸಾಧಿಸಿ ತೋರಿಸುತ್ತಿದ್ದಾರೆ. ಹೌದು.. ಕಲಬುರಗಿಯ (Kalaburagi) ವೈದ್ಯರೊಬ್ಬರು (doctor) ತಮ್ಮ 57ನೇ ವಯಸ್ಸಿನಲ್ಲಿ ಮಹೆಂದ್ರಾ ಥಾರ್​ನಲ್ಲೇ ಮೂರು ದೇಶಗಳಲ್ಲಿ ಬರೋಬ್ಬರಿ ಎಂಟು ಸಾವಿರ ಕಿಲೋ ಮೀಟರ್​  ಓಡಾಡಿದ್ದಾರೆ.

ಕಲಬುರಗಿ ನಗರದ ನಿವಾಸಿಯಾಗಿರುವ ಡಾ.ಶರದ್ ತಂಗಾ ಎನ್ನುವರು ಈ ಹಿಂದೆ ಕಲಬುರಗಿ ನಗರದ ಎಂ ಆರ್ ಎಂ ಬಿ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಕೂಡಾ ಕೆಲಸ ನಿರ್ವಹಿಸಿದ್ದು, ನಂತರ ಸ್ವಯಂ ನಿವೃತ್ತಿ ಪಡೆದು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೋಬ್ಬರಿ 29 ದಿನಗಳ ಕಾಲ ಮೂರು ದೇಶದಲ್ಲಿ ರಸ್ತೆ ಮಾರ್ಗವಾಗಿ ಸುತ್ತಾಡಿ ಎಲ್ಲರ ಗಮನಸೆಳೆದಿದ್ದಾರೆ.

ಈ ವಯಸ್ಸಿನಲ್ಲಿ ಕೂಡಾ ಚೀನದ ಅನೇಕ ಬೆಟ್ಟಗುಡ್ಡಗಳಲ್ಲಿ ಡ್ರೈವ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಾಹಸಮಯ ವ್ಯಕ್ತಿತ್ವವನ್ನು ಹೊಂದಿರುವ ಡಾ. ಶರದ್ ತಂಗಾ, ಕರ್ನಾಟಕದ ನಾಲ್ವರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹತ್ತು ಜನರ ತಂಡವನ್ನು ಕಟ್ಟಿಕೊಂಡು ಮೂರು ದೇಶಗಳ ರೋಡ್ ಟ್ರಿಪ್ ನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು, ಚೀನಾದ ವೀಸಾ ಪಡೆದು, ಅಲ್ಲಿನ ದುರ್ಗಮ ಪ್ರದೇಶದಲ್ಲಿ ಕೂಡಾ ಯಾವುದೇ ಅಂಜಿಕೆ ಅಳುಕಿಲ್ಲದೆ ಓಡಾಡಿ ಸೈ ಎನಿಸಿಕೊಂಡಿದ್ದಾರೆ.

ಹೇಗಿತ್ತು ಪ್ರಯಾಣ?

ಡಾ.ಶರದ್ ತಂಗಾ ಮತ್ತು ಅವರ ಹತ್ತು ಜನರ ತಂಡ ಮಹೆಂದ್ರಾ ಥಾರ್ ವಾಹನಗಳಲ್ಲಿ ಕಳೆದ ಆಗಸ್ಟ್ 2 ರಿಂದ ಮುಂಬೈನಿಂದ ಹೊರಟಿತ್ತು. ಐದು ದಿನದ ಪ್ರವಾಸದ ನಂತರ ತಂಡ ನೇಪಾಳಕ್ಕೆ ಮುಟ್ಟಿತ್ತು. ಒಂಬತ್ತನೇ ದಿನಕ್ಕೆ ಚೀನಾ ದೇಶವನ್ನು ತಲುಪ್ಪಿದ್ದರು. ಬಳಿಕ ಬರೋಬ್ಬರಿ ಇಪ್ಪತ್ತು ದಿನಗಳ ಕಾಲ ಚೀನಾದ ವಿವಿಧ ಬಾಗಗಳಲ್ಲಿ ಈ ತಂಡ ಪ್ರಯಾಣ ಮಾಡಿದೆ. ಚೀನಾದ 108 ಹೇರಪಿನ್ ರಸ್ತೆಯಲ್ಲಿನ ಸಂಚರಿಸಿದ್ದು ಮತ್ತು ಎವರೆಸ್ಟ್ ಬೇಸ್ ಕ್ಯಾಂಪ್ ಸೇರಿದಂತೆ ಅನೇಕ ಕಡೆ ಸಾಹಸಮಯವಾದ ಜೊತೆಗೆ ಎಷ್ಟೇ ಕಷ್ಟಕರವಾಗಿದ್ದರೂ ಯಶಸ್ವಿಯಾಗಿ ಪ್ರಯಾಣ ಮಾಡಿದ್ದಾರೆ.

ತಮ್ಮಸಾಹಸಮ ಪ್ರಯಾಣದ ಡಾ.ಶರದ್ ಮಾತು

Kalaburagi doctor completes 8,000-km expedition in 28 days

ಇನ್ನು ತಮ್ಮಸಾಹಸಮ ಪ್ರಯಾಣವನ್ನು ಹಂಚಿಕೊಂಡಿರುವ ಡಾ.ಶರದ್, ಪ್ರವಾಸದ ಅವಧಿಯಲ್ಲಿ ಐದು ಶಿಖರಗಳು, ಹದಿನೇಳು ಸಾವಿರ ಎತ್ತರದ ಶಿಖರಗಳನ್ನು ಹದಿನೈದು ಗಂಟೆ ಕಾಲ ಕಾರ್ ಡ್ರೈವ್ ಮಾಡಿದ್ದು, ನಲವತ್ತೈದು ಕಿಲೋ ಮೀಟರ್ ಸುರಂಗ ಮಾರ್ಗದಲ್ಲಿ ಸಂಚರಿಸುವದು ಕಷ್ಟಸಾಧ್ಯದ ಸ್ಥಿತಿಯಲ್ಲಿದ್ದವು. ಆದರು ಕೂಡಾ ನಮ್ಮ ತಂಡ ಯಶಸ್ವಿಯಾಗಿ ಪ್ರಯಾಣ ಮುಗಿಸಿದೆ ಅನ್ನೋ ಸಂತಸವನ್ನು ಹಂಚಿಕೊಂಡಿದ್ದಾರೆ. ಭಾರತೀಯ ವಾಹನಗಳು ಚೀನಾದಲ್ಲಿ ಓಡಾಡಲು ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಅನೇಕ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿತ್ತು. ಚೀನಾದಿಂದಲೇ ಅನೇಕ ಬಿಡಿಬಾಗಗಳನ್ನು ತರಿಸಿ, ಸಾಪ್ಟವೇರ್ ಗಳನ್ನು ಬಳಸಿಕೊಂಡು ಮರುಮಾರ್ಪಾಡು ಮಾಡಿಕೊಂಡು, ಚೀನಾ ಪ್ರವಾಸವನ್ನು ಯಶಸ್ವಿ ಮುಗಿಸಿದೆವು ಎಂದಿದ್ದಾರೆ.

ಚೀನಾದಲ್ಲಿ ಇಪ್ಪತ್ತು ದಿನಗಳ ಕಾಲ ಓಡಾಡವನ್ನು ಮೆಲಕು ಹಾಕಿದ ಡಾ. ಶರದ್ ತಂಗಾ, ಚೀನಾದಲ್ಲಿ ಬಹುತೇಕ ಕಡೆ ಉತ್ತಮ ರಸ್ತೆಗಳಿವೆ. ಹೆಚ್ಚಿನ ಶಿಸ್ತಿದೆ. ಸಮಯ ಪಾಲನೆಯನ್ನು ಚೆನ್ನಾಗಿ ಮಾಡುತ್ತಾರೆ. ಸೃಜನಶೀಲತೆ ಮತ್ತು ಕಲೆಗೆ ಹೆಚ್ಚಿನ ಮಹತ್ವವನ್ನು ಚೀನಾದಲ್ಲಿ ನೀಡಲಾಗಿದೆ. ಸ್ವಚ್ಚತೆಗೆ ಹೆಚ್ಚಿನ ಆದ್ಯತೆಯನ್ನು ಚೀನಿಯರು ನೀಡಿದ್ದಾರೆ. ಸಾರ್ವಜನಿಕ ಶೌಚಾಲಯ ವ್ಯವಸ್ಥೆ, ದಿವ್ಯಾಂಗರಿಗೆ ಕೂಡಾ ಅನೇಕ ರೀತಿಯ ಗುಣಮಟ್ಟದ ಸೌಲಭ್ಯಗಳನ್ನು ಅಲ್ಲಿ ಓದಗಿಸಿರುವುದು ತಮ್ಮ ಪ್ರವಾಸದ ವೇಳೆ ಅನುಭವಕ್ಕೆ ಬಂದಿದೆ. ಕೋವಿಡ್ ನಂತರ ಚೀನಾದಲ್ಲಿ ಓಡಾಡುವದು ತಮಗೆ ಹೆಚ್ಚಿನ ಕುತೂಹಲ ಮೂಡಿಸಿತ್ತು ಅಂತ ಡಾ. ತಂಗಾ ಹೇಳಿದ್ದಾರೆ.

ಯಾವ ಉದ್ದೇಶದಿಂದ ಈ ರೋಡ್ ಟ್ರಿಪ್?

Kalaburagi doctor completes 8,000-km expedition in 28 days

ಸಾಹಸಮಯ ವ್ಯಕ್ತಿತ್ವವನ್ನು ಹೊಂದಿರುವ ಡಾ. ಶರದ್ ತಂಗಾ ಮತ್ತು ಅವರ ತಂಡ, ರೋಡ್ ಟ್ರಿಪ್ ಮೂಲಕ ಚೀನಾವನ್ನು ಸುತ್ತುವ ಭಯಕೆಯನ್ನು ಹೊಂದಿತ್ತು. ಜೊತೆಗೆ ಚೀನಾದಲ್ಲಿನ ಕಲೆ, ಸಂಸ್ಕ್ರತಿ ಅಲ್ಲಿನ ಜನರ ಬದುಕು ಭವಣೆಯನ್ನು ತಿಳಿಯುವ ಕುತೂಹಲ ಹೊಂದಿತ್ತು. ಹೀಗಾಗಿ ವಿಮಾನದ ಮೂಲಕ ಪ್ರವಾಸಿ ಸ್ಥಳಗಳಿಗೆ ಹೋಗಿ ಬಂದರೆ ಹೆಚ್ಚು ಪ್ರಯೋಜನವಾಗಲ್ಲಾ. ರೋಡ್ ಮೂಲಕ ತಾವೇ ಡ್ರೈ ಮಾಡಿಕೊಂಡು ಹೋದರೆ ಉತ್ತಮ ಅನ್ನೋದನ್ನು ಅರಿತು, ರೋಡ್ ಟ್ರಿಪ್ ಕೈಗೊಂಡಿತ್ತು. ಬರೋಬ್ಬರಿ 29 ದಿನಗಳ ಕಾಲ ಮೂರು ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿ ಯಶಸ್ವಿ ಕೂಡಾ ಆಗಿದೆ.

ಇನ್ನಷ್ಟು ಕಲಬುರಗಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:26 am, Wed, 6 September 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ