ಕಾಗಿಣಾ ನದಿಗೆ ಹಾರಿ ಯುವತಿ ಆತ್ಮಹತ್ಯೆ; ಮುಂದುವರೆದ ಶೋಧ ಕಾರ್ಯ

| Updated By: ವಿವೇಕ ಬಿರಾದಾರ

Updated on: Jul 20, 2022 | 6:07 PM

ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಶಂಕರವಾಡಿ ಬಳಿ ಇರುವ ಸೇತುವೆ ಮೇಲಿಂದ ಯುವತಿ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾಳೆ. 

ಕಾಗಿಣಾ ನದಿಗೆ ಹಾರಿ ಯುವತಿ ಆತ್ಮಹತ್ಯೆ; ಮುಂದುವರೆದ ಶೋಧ ಕಾರ್ಯ
ಸಾಂಕೇತಿಕ ಚಿತ್ರ
Follow us on

ಕಲಬುರಗಿ: ಕಲಬುರಗಿ (Kalaburagi) ಜಿಲ್ಲೆಯ ಶಹಬಾದ್ ತಾಲೂಕಿನ ಶಂಕರವಾಡಿ ಬಳಿ ಇರುವ ಸೇತುವೆ ಮೇಲಿಂದ ಯುವತಿ ಕಾಗಿಣಾ ನದಿಗೆ (Kaniga River) ಹಾರಿ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾಳೆ.  ಭಾಗ್ಯಶ್ರೀ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಭಾಗ್ಯಶ್ರೀ, ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ನಿವಾಸಿಯಾಗಿದ್ದು, ಕಲಬುರಗಿಯಲ್ಲಿ ಬಿಎಸ್ಸಿ ಓದುತ್ತಿದ್ದಳು. ಭಾಗ್ಯಶ್ರಿಗಾಗಿ ಕಾಗಿಣಾ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ. ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೇಗದಿಂದ ಬಂದ ಅಂಬುಲೆನ್ಸ್ ಟೋಲ್ ಕಂಬಕ್ಕೆ ಢಿಕ್ಕಿ

ಉಡುಪಿ:  ವೇಗದಿಂದ ಬಂದ ಅಂಬುಲೆನ್ಸ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್​ಗೆ ಡಿಕ್ಕಿ ಹೊಡೆದಿದೆ. ಅಂಬುಲೆನ್ಸ್ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿತ್ತು. ಈ ವೇಳೆ ಅಂಬುಲೆನ್ಸ್ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯಿಂದ ಟೋಲ್​​ಗೆ ಅಂಬುಲೆನ್ಸ್ ಢಿಕ್ಕಿ ಹೊಡೆದಿದೆ.
ಘಟನೆಯ ದ್ರಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ ಮೂವರು ಗಂಭೀರ ಗಾಯವಾಗಿದ್ದು, ಒರ್ವ ಚಿಂತಾಜನಕ ಸ್ಥಿತಿಯಲ್ಲಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ನೀಡಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ಕಳ್ಳತನ ಮಾಡಿ ನೋ ಪಾರ್ಕಿಂಗ್ ನಲ್ಲಿ ಬಿಟ್ಟಿದ್ದ ಕಳ್ಳ 

ಬೆಂಗಳೂರು: ಆಟೋ ಕಳ್ಳತನ ಮಾಡಿ ಕಳ್ಳ ರಾಜಕುಮಾರ್ ಸ್ಮಾರಕ ಬಳಿ ಇರುವ ನೋ ಪಾರ್ಕಿಂಗ್​​ನಲ್ಲಿ ಆಟೋ ನಿಲ್ಲಿಸಿದ್ದಾನೆ. ಈ ವೇಳೆ ಆಟೋ ಬಗ್ಗೆ ಗಮನಿಸಿದ್ದ ಗಸ್ತಿನಲ್ಲಿದ್ದ ಟ್ರಾಫಿಕ್ ಸಿಬ್ಬಂದಿ ಮಹೇಶ್ ರಾಥೋಡ್ ಕೆಲ ಹೊತ್ತು ನೋಡಿದರು ಚಾಲಕ ಬಂದಿರಲಿಲ್ಲವೆಂದು ಆಟೋ ಡೀಟೇಲ್ಸ್ ತೆಗೆದುಕೊಂಡು ಮಾಲೀಕರನ್ನು ಸಂಪರ್ಕ ಮಾಡಿದ್ದಾರೆ.

ಕೊನೆಗೆ ಟ್ರಾಫಿಕ್ ಸಿಬ್ಬಂದಿ ಆಟೋವನ್ನು ಮಾಲೀಕನಿಗೆ ತಲುಪಿಸಿದ್ದಾರೆ. ಆಟೋ ಮಾಲೀಕ ಒಂದು ವಾರದ ಹಿಂದೆ ಆಟೋ ಕಳ್ಳತನವಾಗಿರೋದಾಗಿ ಮಾಹಿತಿ‌ ನೀಡಿದ್ದನು. ವಿವಿಪುರಂ ಠಾಣಾ ವ್ಯಾಪ್ತಿಯಲ್ಲಿ ಆಟೋ ಕಳ್ಳತನವಾಗಿತ್ತು.  ಸದ್ಯ ಟ್ರಾಫಿಕ್ ಪೊಲೀಸರು ಮಾಲೀಕನಿಗೆ ಆಟೋ ಒಪ್ಪಿಸಿದ್ದಾರೆ.

Published On - 5:55 pm, Wed, 20 July 22