ಮೋಹರಂ ಮುಗಿದ್ರೂ ಗಲಾಟೆ ಮುಗಿದಿಲ್ಲ: ಅಂತಿಮವಾಗಿ ಮೌಲ್ವಿ ಕೊಲೆಯಲ್ಲಿ ಅಂತ್ಯ

ಮೊಹರಂ ಹಬ್ಬ ಇಂದಿಗೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಭಾವೈಕ್ಯತೆ ಸಾರುವ ಹಬ್ಬವನ್ನಾಗಿ ಆಚರಿಸುತ್ತಾರೆ. ಮೋಹರಂ ಹಬ್ಬದಲ್ಲಿ ಪೀರ್ ಹಿಡಿಯುವ ವಿಚಾರದಲ್ಲಿ ಶುರುವಾದ ಗಲಾಟೆ ಹಬ್ಬ ಮುಗಿದು ತಿಂಗಳುಗಳೆ ಕಳೆದ್ರು ಗಲಾಟೆ ಮಾತ್ರ ಮುಗಿದಿರಲಿಲ್ಲ.ಆದ್ರೆ ಈ ಬಾರಿ ಸ್ವಲ್ಪ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮೋಹರಂ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಮೋಹರಂ ಮುಗಿದ್ರೂ ಗಲಾಟೆ ಮುಗಿದಿಲ್ಲ: ಅಂತಿಮವಾಗಿ ಮೌಲ್ವಿ ಕೊಲೆಯಲ್ಲಿ ಅಂತ್ಯ
ಹನೀಫ್ ಸಾಬ್, ರಿಜ್ವಾನ್
Updated By: ರಮೇಶ್ ಬಿ. ಜವಳಗೇರಾ

Updated on: Dec 07, 2025 | 7:36 PM

ಕಲಬುರಗಿ, (ಡಿಸೆಂಬರ್ 07): ಮೊಹರಂ ಹಬ್ಬದಲ್ಲಿ (muharram) ಪೀರ್ (ದೇವರು) ಹಿಡಿಯುವ ಸಂಬಂಧ ಶುರುವಾದ ಗಲಾಟೆ ಮೌಲ್ವಿ ಕೊಲೆಯಲ್ಲಿ ಅಂತ್ಯವಾಗಿದೆ. ಕಲಬುರಗಿ (Kalaburagi) ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಹನಿಫ್‌ಸಾಬ್ ಕೊಲೆಯಾದ ವ್ಯಕ್ತಿ. ಪೀರ್ ಹಿಡಿಯುವ ಸಂಬಂಧ ಕೆಲ ವರ್ಷಗಳಿಂದ ಎರಡು ಕುಟುಂಬದವರ ನಡುವೆ ಗಲಾಟೆ ಶುರುವಾಗಿದ್ದು, ಇದೇ ದ್ವೇಷದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಕೊನೆಗೆ ರಿಜ್ವಾನ್ ಎನ್ನುವಾತ ಹನೀಫ್‌ಸಾಬ್ ಎನ್ನುವರನ್ನ ಚಾಕುವಿನಿಂದ ಹಿರಿದು ಹತ್ಯೆ ಮಾಡಿದ್ದಾನೆ. ಬಳಿಕ  ರಿಜ್ವಾನ್  ತಾನೇ ನೇರವಾಗಿ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.

ಪೀರ್ ಹಿಡಿಯುವ ವಿಚಾರಕ್ಕೆ ಗಲಾಟೆ

ಕಮಲಾಪುರ ಪಟ್ಟಣ ನಿವಾಸಿಯಾದ ಹನಿಫ್‌ಸಾಬ್, 35 ವರ್ಷಗಳ ಕಾಲ ಮೊಹರಂ ಸಂದರ್ಭದಲ್ಲಿ ಪೀರ್(ದೇವರು) ಹಿಡಿಯುವ ಧಾರ್ಮಿಕ ಕಾರ್ಯ ಮಾಡುತ್ತಿದ್ದರು. ಆದರೆ ಕಳೆದ ಕೆಲ ವರ್ಷಗಳ ಹಿಂದೆ ಇವರನ್ನ ಪೀರ್ ಹಿಡಿಯುವುದಕ್ಕೆ ಬೇಡ ಎಂದು ಬಿಡಿಸಿ ರುಸ್ತುಂ ಖುರೇಶಿ ಎಂಬುವರು ಪೀರ್ ಹಿಡಿಯುತ್ತಿದ್ದರು. ಇತ್ತ ಕಮಲಾಪುರ ಪಟ್ಟಣದಲ್ಲಿನ ದರ್ಗಾಕ್ಕೆ ಹನೀಫ್‌ಸಾಬ್ ಕುಟುಂಬಸ್ಥರು ಹೋಗಿ ದರ್ಶನ ಪಡೆಯುತ್ತಿದ್ದರು‌..ಅಲ್ಲದೆ ದರ್ಗಾಕ್ಕೆ ಬರುವವರಿಗೆ ಕೆಲವೊಂದಿಷ್ಟು ಸಮಸ್ಯೆಗಳಿರುವವರಿಗೆ ಪರಿಹಾರ ಕೂಡ ಸೂಚಿಸ್ತಿದ್ದರು. ಈ ಮಧ್ಯೆ ನಿವ್ಯಾಕೇ ಈ ದರ್ಗಾಕ್ಕೆ ದರ್ಶನ ಬರ್ತಿರಾ ಅಂತಾ ರುಸ್ತಂ ಖುರೇಶಿ ಕುಟುಂಬದವರು ಜಗಳ ತೆಗೆದಿದ್ದಾರೆ. ಈ ವಿಚಾರಕ್ಕೆ ಕಳೆದ ಅನೇಕ ವರ್ಷಗಳಿಂದ ರುಸ್ತುಂ ಖುರೇಶಿ ಮತ್ತು ಹನಿಫ್‌ಸಾಬ್ ಕುಟುಂಬಗಳ ಮಧ್ಯೆ ದೊಡ್ಡ ಗಲಾಟೆ ಆಗಿದೆ. ಅದರಂತೆ ನಿನ್ನೆ ಕೂಡ ಇದೇ ವಿಚಾರಕ್ಕೆ ಜಗಳ ನಡೆದಿದ್ದು, ಈ ಸಂಬಂಧ ದೂರು ಕೊಡಲೆಂದು ಪೊಲೀಸ್ ಠಾಣೆಗೆ ತೆರಳುತ್ತಿದ್ದ ಹನಿಫ್‌ಸಾಬ್‌ ಬೈಕ್​​​ಗೆ ರಿಜ್ವಾನ್ ಆಟೋದಿಂದ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಕೆಳಗೆ ಬಿದ್ದ ಹನಿಫ್‌ಸಾಬ್​​ಗೆ  ರುಸ್ತುಂ ಖುರೇಶಿ ಪುತ್ರ ರಿಜ್ವಾನ್ ಚಾಕುವಿನಿಂದ ಹಿರಿದು ಕೊಂದಿದ್ದಾನೆ.

ಇದನ್ನೂ ಓದಿ: ಬೇರೊಬ್ಬನ ಜತೆ ಲವ್ವಿಡವ್ವಿಗೆ ಗಂಡನ ಹತ್ಯೆ: ಸುಪಾರಿ ಹಣ ಕೊಡದೆ ಕಳ್ಳಾಟ, 9 ವರ್ಷದ ಬಳಿಕ ರಹಸ್ಯ ಬಯಲು

ಕೊಲೆಗೆ ಕಾರಣವೇನು?

ಈ ವಿಚಾರಕ್ಕೆ ಕಳೆದ ಅನೇಕ ವರ್ಷಗಳಿಂದ ರುಸ್ತುಂ ಖುರೇಶಿ ಮತ್ತು ಹನಿಫ್‌ಸಾಬ್ ಕುಟುಂಬಗಳ ಮಧ್ಯೆ ದೊಡ್ಡ ಕಲಹವೇ ಏರ್ಪಟ್ಟಿದೆ‌. ಅದರಂತೆ ನಿನ್ನೆ (ಡಿಸೆಂಬರ್ 06) ಜಗಳ ನಡೆದಿದೆ. ಸಂಜೆ ಕಮಲಾಪುರ ಪಟ್ಟಣದ ಪಾನ್ ಶಾಪ್‌ವೊಂದರ ಬಳಿ ರುಸ್ತುಂ ಖುರೇಶಿ ಪುತ್ರ ರಿಜ್ವಾನ್ ಗುಟ್ಕಾ ಖರೀದಿ ಮಾಡುತ್ತಿರುವಾಗ ಅಲ್ಲೇ ಇದ್ದ ಹನೀಫ್ ಸಾಬ್ ಕಾಲಿಗೆ ಕಾಲು ಟಚ್ ಆಗಿದ್ದು, ಆ ವೇಳೆ ಕೋಪಗೊಂಡ ಹನೀಫ್ ಸಾಬ್, ರಿಜ್ವಾನ್​​ಗೆ ಎರಡು ಎರೆಡೆಟು ಬಾರಿಸಿ ಅಲ್ಲಿಂದ ತೇರಳಿದ್ದ. ಇತ್ತ ಹನೀಫ್ ವಿರುದ್ಧ ರಿಜ್ವಾನ್ ಖುರೇಶಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಬಳಿಕ ಪೊಲೀಸರು, ಹನೀಫ್​​ನನ್ನು ಠಾಣೆಗೆ ಬರುವಂತೆ ಹೇಳಿದ್ದು. ಅದರಂತೆ ಹನೀಫ್​​ ಬೈಕ್​ ಮೇಲೆ ಠಾಣೆಗೆ ಹೋಗುತ್ತಿರುವಾಗ ವೇಳೆ ರಿಜ್ವನ್​ ಆಟೋದಿಂದ ಗುದ್ದಿದ್ದಾನೆ. ಬಳಿಕ ಕೆಳಗೆ ಬಿದ್ದಿದ್ದ ಹನೀಫ್​ ಮೇಲೆ ರಿಜ್ವಾನ್ ಏಕಾಏಕಿ ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸರಿಗ ಶರಣಾಗಿದ್ದಾನೆ.

ಪೊಲೀಸರ ನಿರ್ಲಕ್ಷ್ಯವೇ ಕೊಲೆಗೆ ಕಾರಣ

ಇನ್ನು ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ರಿಜ್ವಾನ್ ಮತ್ತು ತಂದೆ ರುಸ್ತುಂಸಾಬ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಸದ್ಯ ಕೊಲೆ ಮಾಡಿದ ರಿಜ್ವಾನ್ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನು ರುಸ್ತುಂಸಾಬ್‌ನ ಮಗ ರಿಜ್ವಾನ್ ಪದೇ ಪದೇ ಜಗಳವಾಡಿ ಹಲ್ಲೆ ಮಾಡುತ್ತಿರುವ ವಿಷಯವನ್ನ ಈ ಹಿಂದಿನಿಂದಲೂ ಅನೇಕ ಬಾರಿ ಕಮಲಾಪುರ ಠಾಣೆ ಪೊಲೀಸರಿಗೆ ತಿಳಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಂತಿಮವಾಗಿ ಕೊಲೆಯಾಗಿದೆ ಎಂದು ಹನಿಫ್‌ಸಾಬ್ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಮೊಹರಂ ಹಬ್ಬವನ್ನ ಹಿಂದೂ ಮುಸ್ಲಿಂ ಧರ್ಮದವರು ಸಾಮರಸ್ಯರದಿಂದ ಆಚರಿಸಿಕೊಂಡು ಬರ್ತಾರೆ.. ಆದರೆ ಇಲ್ಲಿ ಮುಸ್ಲಿಂ ಮುಸ್ಲಿಮರೇ ಮೊಹರಂ ಪೀರ್ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಕೊಲೆ ಮಾಡಿರುವುದು ದುರಂತ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ