ಕಲಬುರಗಿ: ಕತ್ತು ಹಿಸುಕಿ, ಮಾರಕಾಸ್ತ್ರದಿಂದ ಹೊಡೆದು ಯುವಕನ ಕೊಲೆ; ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು

ಪರಸ್ತ್ರೀ ಸಂಗ ಮಾನಭಂಗ ಅಂತಾರೆ. ಇಲ್ಲೊಬ್ಬ ಕೂಡ ಪರಸ್ತ್ರೀ ಸಂಗ ಮಾಡಿದ್ದ. ಇನ್ನೊಂದಡೆ ಮಹಿಳೆಗೆ ಮದುವೆಯಾಗಿ ಮಕ್ಕಳು ಇದ್ದರು ಕೂಡ, ಅನೇಕರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ತಾನು ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಜೊತೆ ಇನ್ನೊಬ್ಬ ಇದ್ದಿದ್ದನ್ನು ನೋಡಿದ ವ್ಯಕ್ತಿ, ಯುವಕನನ್ನು ಕೊಲೆ ಮಾಡಿದ್ದ. ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಪರಸ್ತ್ರಿ ಸಂಘಕ್ಕೆ ಬಿದ್ದು ಬಾರದ ಲೋಕಕ್ಕೆ ಹೋಗಿದ್ದ. ಯುವಕನ ಕೊಲೆ ಆರೋಪದ ಮೇಲೆ ಇದೀಗ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರಗಿ: ಕತ್ತು ಹಿಸುಕಿ, ಮಾರಕಾಸ್ತ್ರದಿಂದ ಹೊಡೆದು ಯುವಕನ ಕೊಲೆ; ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು
ತಿಪ್ಪಣ್ಣ,ನಿಂಗಮ್ಮ, ನೂರ್ ಜಹಾನ್ ಆರೋಪಿಗಳು(ಎಡದಿಂದ)
Follow us
ಕಿರಣ್ ಹನುಮಂತ್​ ಮಾದಾರ್
|

Updated on:Apr 16, 2023 | 9:48 AM

ಕಲಬುರಗಿ: ಇದೇ ಎಪ್ರಿಲ್ 8 ರಂದು ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು. ಶಾಲೆಗೆ ಇದೀಗ ರಜೆ ಇರೋದರಿಂದ, ಮಕ್ಕಳು ಇರಲಿಲ್ಲ. ಆದ್ರೆ, ಶಾಲೆಯ ಮೈದಾನದಲ್ಲಿ ಯುವಕನ ಶವ ನೋಡಿದ್ದ ಗ್ರಾಮಸ್ಥರು ಶಾಕ್ ಆಗಿದ್ದರು. ಇನ್ನು ಕೊಲೆಯಾದ ವ್ಯಕ್ತಿ ಯಾರು ಎಂದು ಪತ್ತೆ ಮಾಡಿದಾಗ ಗೊತ್ತಾಗಿದ್ದು, ಇದೇ ಸೊನ್ನ ಗ್ರಾಮದ ಸಂತೋಷ್ ಹೆಗಡೆ ಎನ್ನುವುದು. ಹೌದು ಇಪ್ಪತ್ತೈದು ವರ್ಷದ ಸಂತೋಷ್ ಬರ್ಬರವಾಗಿ ಕೊಲೆಯಾಗಿದ್ದ. ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ ದುಷ್ಕರ್ಮಿಗಳು, ನಂತರ ಶಾಲೆಯಲ್ಲಿ ಶವವನ್ನು ಬಿಸಾಕಿ ಹೋಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಪ್ರಿಲ್ 7 ರಂದು ಮುಂಜಾನೆ ಯಾರೋ ಪೋನ್ ಮಾಡಿದ್ರು ಹೋಗಿ ಬರ್ತೇನೆ ಎಂದು ಸಂತೋಷ್ ಹೊರಹೋಗಿದ್ದ. ನಂತರ ಮಧ್ಯಾಹ್ನ ಕರೆ ಮಾಡಿದಾಗ, ಪೋನ್ ರಿಸಿವ್ ಮಾಡಿದ್ದ ಸಂತೋಷ್, ಮನೆಗೆ ಬರ್ತೇನೆ ಎಂದು ಹೇಳಿದ್ದನಂತೆ. ಆದ್ರೆ, ಸಂಜೆ ಕಾಲ್ ಮಾಡಿದಾಗ, ಸಂತೋಷ್ ಪೋನ್​ ರಿಂಗ್ ಆದರೂ ಕೂಡ ತಗೆದಿರಲಿಲ್ಲ. ಹೀಗಾಗಿ ಕುಟುಂಬದವರು ಎಲ್ಲಾದ್ರು ಹೋಗಿರಬಹುದು, ಬರ್ತಾನೆ ಎಂದು ಸುಮ್ಮನಾಗಿದ್ದರು. ಆದ್ರೆ ರಾತ್ರಿ ಕಳೆದು ಬೆಳಗಾಗೋದರಲ್ಲಿ ಸಂತೋಷ್ ಶವವಾಗಿ ಪತ್ತೆಯಾಗಿದ್ದ.

ಇದನ್ನೂ ಓದಿ:Bengaluru: ಪ್ರೇಯಸಿ ಹುಟ್ಟಿದ ಹಬ್ಬ ಆಚರಣೆ ಬಳಿಕ ಕೊಲೆ ಪ್ರಕರಣ; ಪ್ರಿಯಕರ ಮಾಡಿದ್ದ ಪ್ಲಾನ್​ ಏನು ಗೊತ್ತಾ?

ಅಕ್ರಮ ಸಂಬಂಧದಿಂದ ಕೊಲೆಯಾದ ಯುವಕ

ಇನ್ನು ಸಂತೋಷ್​ಗೆ ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಕೂಡ ಆಗಿತ್ತಂತೆ. ಕೆಲವೇ ತಿಂಗಳಲ್ಲಿ ಮದುವೆ ಮಾಡಲು ಕುಟುಂಬದವರು ನಿರ್ಧಾರ ಮಾಡಿದ್ದರು. ಆದ್ರೆ ಮದುವೆ ಮಾಡಿಕೊಂಡು ವೈವಾಹಿಕ ಜೀವನ ನಡೆಸಬೇಕಿದ್ದ ಸಂತೋಷ್ ಕೊಲೆಯಾಗಿದ್ದು ಕುಟುಂಬಕ್ಕೆ ಶಾಕ್ ನೀಡಿತ್ತು. ಇನ್ನು ಸಂತೋಷ್​ನ ಕೊಲೆಗೆ ಕಾರಣವಾಗಿದ್ದು ಅಕ್ರಮ ಸಂಬಂಧ. ಹೌದು ಇದೇ ಸೊನ್ನ ಗ್ರಾಮದ ನಿಂಗಮ್ಮ ಎನ್ನುವ ಮಹಿಳೆ ಜೊತೆ ಸಂತೋಷ್ ಸಂಬಂಧ ಹೊಂದಿದ್ದ. ಇನ್ನು ನಿಂಗಮ್ಮಗೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಕೂಡ ಇವೆ. ಪತಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ. ಆದ್ರೆ ಪತಿ ಕೂಲಿ ಕೆಲಸಕ್ಕೆ ಹೋದ್ರೆ, ಇತ್ತ ನಿಂಗಮ್ಮ ಮನೆಯಲ್ಲಿಯೇ ಇರ್ತಿದ್ದಳಂತೆ. ಸಂತೋಷ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ನಿಂಗಮ್ಮ, ತಿಪ್ಪಣ್ಣ ಅನ್ನೋ ತನ್ನ ಮತ್ತೋರ್ವ ಸಂಬಂಧಿ ಜೊತೆ ಕೂಡ ಅಕ್ರಮ ಸಂಬಂಧ ಹೊಂದಿದ್ದಳಂತೆ.

ಎಪ್ರಿಲ್ 7 ರಂದು ನಿಂಗಮ್ಮ, ಸಂತೋಷ್​ನಿಗೆ ಪೋನ್ ಮಾಡಿ ಮನೆಗೆ ಕರಿಸಿಕೊಂಡಿದ್ದಳು. ಆದ್ರೆ ಸಂತೋಷ್ ಮತ್ತು ನಿಂಗಮ್ಮ ಮನೆಯಲ್ಲಿ ಇದ್ದಾಗಲೇ, ತಿಪ್ಪಣ್ಣ ಎಂಟ್ರಿ ಕೊಟ್ಟಿದ್ದ. ತಾನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ನಿಂಗಮ್ಮನ ಜೊತೆ ಸಂತೋಷ್ ಕೂಡ ಅಕ್ರಮ ಸಂಬಂಧ ಹೊಂದಿದ್ದು ತಿಪ್ಪಣ್ಣ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ತಿಪ್ಪಣ್ಣನ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ಸಂತೋಷನ್ ಗುಪ್ತಾಂಗಕ್ಕೆ ತಿಪ್ಪಣ್ಣ ಒದ್ದಿದ್ದು, ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ನಿಂಗಮ್ಮ, ತಿಪ್ಪಣ್ಣ ಮತ್ತು ಪಕ್ಕದ ಮನೆಯ ನಿವಾಸಿಯಾಗಿದ್ದ ನೂರ್ ಜಹಾನ್ ಅನ್ನೋ ಮಹಿಳೆ ಸೇರಿಕೊಂಡು ರಾತ್ರಿ ಸಮಯದಲ್ಲಿ ಸಂತೋಷ್ ಶವವನ್ನು ಗ್ರಾಮದ ಶಾಲೆಯಲ್ಲಿ ಹಾಕಿ ಬಂದಿದ್ದರಂತೆ. ಇದೀಗ ಮೂವರನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.

ಇದನ್ನೂಓದಿ:ಮಾಫಿಯಾ ಡಾನ್‌ ಅತಿಕ್ ಅಹ್ಮದ್‌, ಸಹೋದರ ಅಶ್ರಫ್‌ ಕೊಲೆ: 17 ಪೊಲೀಸ್ ಸಿಬ್ಬಂದಿ ಸಸ್ಪೆಂಡ್‌, 144 ಸೆಕ್ಷನ್​​ ಜಾರಿ

ಮದುವೆಯಾಗಿ ಸುಂದರ ಸಂಸಾರಿಕ ಜೀವನ ನಡೆಸಬೇಕಿದ್ದ ಯುವಕ, ಅಕ್ರಮ ಸಂಬಂಧ ಬೆಳಸಿ ಬರ್ಬರ ಕೊಲೆಯಾದ್ರೆ, ಇತ್ತ ಅಕ್ರಮ ಸಂಬಂಧ ಇಟ್ಟುಕೊಂಡಿದ್ದವರು, ಕೊಲೆಗೆ ಸಹಾಯ ಮಾಡಿದವರು ಕಂಬಿ ಹಿಂದೆ ಹೋಗಿದ್ದಾರೆ.

ವರದಿ: ಸಂಜಯ್,ಟಿವಿ9 ಕಲಬುರಗಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:46 am, Sun, 16 April 23

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್