ಕಲಬುರಗಿ: ಬಡ್ಡಿ ಹಣಕ್ಕಾಗಿ ಆ್ಯಸಿಡ್ ದಾಳಿ, ಗಂಭೀರವಾಗಿ ಗಾಯಗೊಂಡ ಗಾಯಾಳು

| Updated By: ಆಯೇಷಾ ಬಾನು

Updated on: Mar 22, 2024 | 2:55 PM

ಪಡೆದ 35 ಲಕ್ಷ ರೂ. ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಹಚ್ಚಿ 90 ಲಕ್ಷ ಹಣ ಕೊಡುವಂತೆ ಪೀಡಿಸಿದ್ದು ಹಣ ನೀಡಲು ನಿರಾಕರಿಸಿದಕ್ಕೆ ಆ್ಯಸಿಡ್ ದಾಳಿ ನಡೆದಿದೆ. ಕಲಬುರಗಿ ಖರ್ಗೆ ಪೆಟ್ರೋಲ್ ಬಂಕ್ ಬಳಿ ಆ್ಯಸಿಡ್ ದಾಳಿ ನಡೆದಿದ್ದು ಗಾಯಾಳುವಿಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಲಬುರಗಿ: ಬಡ್ಡಿ ಹಣಕ್ಕಾಗಿ ಆ್ಯಸಿಡ್ ದಾಳಿ, ಗಂಭೀರವಾಗಿ ಗಾಯಗೊಂಡ ಗಾಯಾಳು
ಜಿಮ್ಸ್ ಆಸ್ಪತ್ರೆ
Follow us on

ಕಲಬುರಗಿ, ಮಾರ್ಚ್​.22: ಬಡ್ಡಿ ಹಣಕ್ಕಾಗಿ ವ್ಯಕ್ತಿ ಮೇಲೆ ಆ್ಯಸಿಡ್ (Acid Attack) ಎರಚಿರುವ ಅಮಾನವೀಯ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಜುಬೇರ್ ಅಹ್ಮದ್ ಎಂಬುವರ ಮೇಲೆ ಇಮ್ರಾನ್‌ ಖಾನ್ ಎಂಬ ವ್ಯಕ್ತಿ ಆ್ಯಸಿಡ್ ನಿಂದ ದಾಳಿ ನಡೆಸಿದ್ದಾನೆ. ಜುಬೇರ್ ಬಲಗೈ ಹಾಗೂ ಕಾಲಿನ ಮೇಲೆ ಆ್ಯಸಿಡ್ ಬಿದ್ದಿದ್ದು ಸಂಪೂರ್ಣ ಸುಟ್ಟ ಗಾಯಗಳಾಗಿವೆ. ಸದ್ಯ ಗಾಯಾಳುವಿಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೀನು ವ್ಯಾಪರಕ್ಕಾಗಿ ಅರ್ಷದ್, ಪರ್ವೇಜ್ ಬಳಿ ಜುಬೇರ್ 35 ಲಕ್ಷ ಹಣ ಪಡೆದುಕೊಂಡಿದ್ದ. ಅದಕ್ಕೆ ಬಡ್ಡಿ, ಚಕ್ರಬಡ್ಡಿ ಹಚ್ಚಿ 90 ಲಕ್ಷ ಹಣ ಕೊಡುವಂತೆ ಅರ್ಷದ್ ಗ್ಯಾಂಗ್ ಪೀಡಿಸುತ್ತಿತ್ತು. ಇತ್ತೀಚೆಗೆ ಜುಬೇರ್​ನನ್ನು ಕರೆಸಿ ರೂಂ ನಲ್ಲಿ ಕೂಡಿ ಹಾಕಿ ಹಣ ನೀಡುವಂತೆ ಈ ಗ್ಯಾಂಗ್ ಪೀಡಿಸಿತ್ತು. ಬಳಿಕ ಇಮ್ರಾನ್ ಖಾನ್ ಎಂಬ ವ್ಯಕ್ತಿಯಿಂದ ಆ್ಯಸಿಡ್ ದಾಳಿ ನಡೆದಿದೆ. ಕಲಬುರಗಿ ಖರ್ಗೆ ಪೆಟ್ರೋಲ್ ಬಂಕ್ ಬಳಿ ಆ್ಯಸಿಡ್ ದಾಳಿ ನಡೆದಿದೆ. ಈಗಾಗಲೇ ಇಮ್ರಾನ್‌ ಖಾನ್ ಮೇಲೆ ವಿವಿಧ ಠಾಣೆಗಳಲ್ಲಿ ಕೇಸ್​ಗಳು ದಾಖಲಾಗಿವೆ. ಬಡ್ಡಿ ಹಣ ನೀಡಲು ಒಪ್ಪದೇ ಇದ್ದಾಗ ಆ್ಯಸಿಡ್ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಕಲಬುರಗಿಯ ಎಂ.ಬಿ.ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗಾಯಾಳು ಕುಟುಂಬಸ್ಥರು ಆಸ್ಪತ್ರೆಯಲ್ಲಿ ಕಣ್ಣೀರು ಹಾಕುತ್ತಿದ್ದು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.

ಇದನ್ನೂ ಓದಿ: ಗದಗ; ಹಂಗನಕಟ್ಟಿಯ ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ತಲೆ ಕೆಡಿಸಿಕೊಳ್ಳದ ಆರೋಗ್ಯ ಇಲಾಖೆ

ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿ ಸಾವು

ಮಂಗಳೂರಿನ ತೋಟಬೇಂಗ್ರೆಯಲ್ಲಿ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನಡೆದಿದೆ. ಸಮುದ್ರದಲ್ಲಿ ಮೀನು ಹಿಡಿಯಲೆಂದು ಹೋಗಿ ಗಾಳಿ ಹಾಗೂ ನೀರಿನ ರಭಸಕ್ಕೆ ಸಿಲುಕಿ ಪ್ರಜೀತ್ ಎಂ ತಿಂಗಳಾಯ(15) ಎಂಬ ಬಾಲಕ ಮೃತಪಟ್ಟಿದ್ದಾನೆ. ಬೆಂಗ್ರೆಯ ನಿವಾಸಿ ಮಿಥುನ್ ಎಂಬುವವರ ಪುತ್ರ ಪ್ರಜೀತ್, ಮನೆಯ ಬಡತನ ಹಾಗೂ ವಿದ್ಯಾಭ್ಯಾಸದ ಖರ್ಚಿಗೆ ತಂದೆಯೊಂದಿಗೆ ಮೀನುಗಾರಿಕೆಗೆ ಹೋಗುತ್ತಿದ್ದ.

ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಗಾಳಿ ಮತ್ತು ನೀರಿನ ರಭಸಕ್ಕೆ ಸಿಲುಕಿ ಪ್ರಜೀತ್ ನೀರು ಪಾಲಾಗಿದ್ದಾನೆ. ಪ್ರಜೀತ್​ಗಾಗಿ ಹುಡುಕಾಟ ನಡೆಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ