ಕಲಬುರಗಿ, ಫೆ.23: ಆಟೋ ಪಲ್ಟಿಯಾಗಿ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಸೊನ್ನ ಕ್ರಾಸ್ ಬಳಿ ನಡೆದಿದ್ದು, ಐವರಿಗೆ ಗಂಭೀರ ಗಾಯವಾಗಿದೆ. ಆಟೋದಲ್ಲಿದ್ದ ವೃದ್ಧೆ ಕಲ್ಲವ್ವ ಪಾಣೆಗಾರ್(60) ಮೃತ ರ್ದುದೈವಿ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕೂಲಿ ಕೆಲಸಕ್ಕೆಂದು ಅಫಜಲಪುರ ಪಟ್ಟಣದಿಂದ ಸಿಂದಗಿ ತಾಲೂಕಿನ ಕುಮಸಿ ಗ್ರಾಮಕ್ಕೆ ಒಂದೇ ಟಂ ಟಂ ವಾಹನದಲ್ಲಿ 15 ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಫಜಲಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಮನಗರ: ಜಿಲ್ಲೆಯ ಮೆಹಬೂಬ್ ನಗರದ ರೈಲ್ವೆ ಹಳಿ ಬಳಿ ಯುವಕನ ಶವ ಪತ್ತೆಯಾಗಿದೆ. ಚಾಮರಾಜನಗರದ ಮದಲವಾಡಿ ಗ್ರಾಮದ ನವೀನ್ ಮೃತ ವ್ಯಕ್ತಿ. ಸ್ಥಳಕ್ಕೆ ರೈಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಯೇ ಮಾಡಿಕೊಂಡಿದ್ದರೆ, ಅದಕ್ಕೆ ಕಾರಣವೇನು, ಆಥವಾ ಕೊಲೆ ಮಾಡಿ ಇಲ್ಲಿ ತಂದು ಹಾಕಿದರಾ?, ಹೀಗೆ ಹಲವು ಆಯಾಮಗಳಲ್ಲಿ ತನಿಖೆ ಶುರುವಾಗಿದೆ. ಇನ್ನು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಪ್ರತ್ಯೇಕ ಅಪಘಾತ; ತಂದೆಗೆ ಚಿಕಿತ್ಸೆ ಕೊಡಿಸಬೇಕಿದ್ದವ, ಹೆತ್ತ ಮಗು ನೋಡಲು ಹೋಗ್ತಿದವರು ಸೇರಿ ನಾಲ್ವರು ಸಾವು
ಉತ್ತರ ಕನ್ನಡ: ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ದೇಗುಲದಲ್ಲಿ ಪ್ರದಕ್ಷಿಣೆ ಹಾಕುವಾಗ ಹೃದಯಾಘಾತದಿಂದ ವಿದೇಶಿಗ ಸಾವನ್ನಪ್ಪಿದ್ದಾನೆ. ರಷ್ಯಾ ಮೂಲದ ಅಲೆಗ್ಸಾಂಡರ್ ತನೆಗಾ(71) ಮೃತ ರ್ದುದೈವಿ. ಮೂವರು ಸ್ನೇಹಿತರೊಂದಿಗೆ ಗೋವಾ, ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದ್ದು, ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ