ಕಲಬುರಗಿ, (ಫೆಬ್ರವರಿ 26): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದ್ವಾರಕಾಕ್ಕೆ (dwarka) ತೆರಳಿ ನವಿಲು ಗರಿ ಸಮರ್ಪಿಸುವು ಮೂಲಕ ಶ್ರೀಕೃಷ್ಣನಿಗೆ ವಿಶೇಷ ಪಾರ್ಥನೆ ಸಲ್ಲಿದ್ದು, ಇದೀಗ ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿರುವ ಖರ್ಗೆ, ನವಿಲುಗರಿ ಅಲ್ಲಿ ಹಾಕಿದರೆ ಬೆಳೆಯುತ್ತೋ ಇಲ್ಲವೋ ಗೊತ್ತಿಲ್ಲ. ನಿಸರ್ಗದ ನಿಯಮದ ಪ್ರಕಾರ ನವಿಲುಗರಿ ಬೆಳೆಯುತ್ತಾ ಗೊತ್ತಿಲ್ಲ. ನಾನು ನಂಬಿರುವ ನಿಸರ್ಗದ ನಿಯಮದ ಪ್ರಕಾರ ನಡೆಯಬೇಕು. ನಿಸರ್ಗದ ವಿರುದ್ಧ ಹೋದವರಿಗೆ ಯಶಸ್ಸು ಸಿಗಲ್ಲ. ಇದು ಬುದ್ಧನ ತತ್ವ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಭೇಟಿಯ ಎರಡನೇ ದಿನದ ಈ ಸಮಯದಲ್ಲಿ, ಸ್ಕೂಬಾ ಡೈವಿಂಗ್ ಮುಖಾಂತರ ಆಳವಾದ ಸಮುದ್ರಕ್ಕಿಳಿದು ಮುಳುಗಡೆಯಾಗಿದ್ದ ಪ್ರಾಚೀನಾ ದ್ವಾರಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಈ ಕುರಿತು ಟ್ವೀಟ್ ಮಾಡಿರುವ ಮೋದಿ, ನೀರಿನಲ್ಲಿ ಮುಳುಗಿ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ನನಗೆ ಒಲಿದ ಅತ್ಯಂತ ದಿವ್ಯ ಹಾಗೂ ಸುಂದರ ಅನುಭವವಾಗಿತ್ತು ಎಂದಿದ್ದಾರೆ.
ಸಮುದ್ರೊಳಗೆ ಇಳಿದು ಪ್ರಾರ್ಥನೆ ಸಲ್ಲಿಸುವದರೊಂದಿಗೆ ಆದ್ಯಾತ್ಮಿಕ ಭವ್ಯತೆ , ಪ್ರಾಚಿನ ಯುಗಕ್ಕೆ ಸಂಪರ್ಕ ಸೇತುವೆ ಭಕ್ತಿಯ ಭಾವ ಮೂಡಿಸಿದೆ. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ದ್ವಾರಕ ಅತ್ಯಂತ ಪ್ರಮುಖ ಕ್ಷೇತ್ರವಾಗಿದೆ. ಇದೀಗ ಮೋದಿ ಅತ್ಯಂತ ಕಠಿಣ ಸಮುದ್ರೊಳಗೆ ಇಳಿದು ದ್ವಾರಕ ದರ್ಶನ ಮಾಡಿ ಪೂಜೆ ಸಲ್ಲಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮೋದಿ ಸಮುದ್ರದೊಳಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ