AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ಜೈಲ್ ಮುಖ್ಯ ಅಧೀಕ್ಷಕಿ ಕಾರು ಸ್ಫೋಟಿಸುವುದಾಗಿ ಬೆದರಿಕೆ: ಅಧಿಕಾರಿಗಳು ಭಾಗಿ ಶಂಕೆ

ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಒಂಬತ್ತು ಕೈದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಧೀಕ್ಷಕಿ ನಿಷೇಧಿತ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೈದಿಗಳು ಮೊದಲು ಲಂಚದ ಆರೋಪ ಹೊರಿಸಿ, ನಂತರ ಬೆದರಿಕೆ ಹಾಕಿದ್ದಾರೆ. ಅಧೀಕ್ಷಕಿ ಸೈಬರ್ ಠಾಣೆ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಲಬುರಗಿ ಜೈಲ್ ಮುಖ್ಯ ಅಧೀಕ್ಷಕಿ ಕಾರು ಸ್ಫೋಟಿಸುವುದಾಗಿ ಬೆದರಿಕೆ: ಅಧಿಕಾರಿಗಳು ಭಾಗಿ ಶಂಕೆ
ಕಲಬುರಗಿ ಕೇಂದ್ರ ಕಾರಾಗೃಹ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: ವಿವೇಕ ಬಿರಾದಾರ|

Updated on: Dec 01, 2024 | 1:30 PM

Share

ಕಲಬುರಗಿ, ಡಿಸೆಂಬರ್​ 01: ಕಲಬುರಗಿ ಕೇಂದ್ರ ಕಾರಾಗೃಹದ (Kalaburagi Central Jail) ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ ಒಟ್ಟು ಒಂಬತ್ತು ಕೈದಿಗಳ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಜೈಲು ಮುಖ್ಯ ಅಧೀಕ್ಷಕಿ ಅನಿತಾ ದೂರಿನ ಆಧಾರದ ಮೇಲೆ ಕೈದಿಗಳಾದ ಮುಸ್ತಫಾ, ನಸೀರ್, ಬಚ್ಚನ್, ಅಲ್ತಾಫ್, ದೇವರಾಜ್​, ನಾಗರಾಜ್, ಶ್ರೀಕಾಂತ್‌ ಸೇರಿದಂತೆ ಒಬ್ಬಂತು ಜನರ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಬೆದರಿಕೆ ಏಕೆ?

ಡಾ. ಅನೀತಾ ಅವರು ಮುಖ್ಯ ಅಧೀಕ್ಷಕಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜೈಲಿನಲ್ಲಿನ ಗುಟ್ಕಾ, ಸಿಗರೇಟ್, ತಂಬಾಕು ಸೇರಿದಂತೆ ನಿಷೇಧಿತ ವಸ್ತುಗಳನ್ನು ಕಟ್ಟುನಿಟ್ಟಾಗಿ ಬ್ಯಾನ್​ ಮಾಡಿದರು. ಇದನ್ನು ವಿರೋಧಿಸಿ 70ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ತಮಗೆ ಬೇಕಾದ ವಸ್ತುಗಳು ಸಿಗುತ್ತಿಲ್ಲ, ಸರಿಯಾದ ಊಟ ನೀಡುತ್ತಿಲ್ಲ, ಗುಟ್ಕಾ, ಸಿಗರೇಟ್ ಬೇಕು ಅಂತ ಪ್ರತಿಭಟನೆ ಮಾಡಿದ್ದರು.

ಇದಕ್ಕೂ ಮುನ್ನ ವಿಚರಾಣಧೀನ ಕೈದಿ ಮುಸ್ತಾಫಾ ಎಂಬುವನು ಅಧೀಕ್ಷಕಿ ಡಾ. ಅನಿತಾ ಅವರ ಖಾತೆಗೆ ಪೋನ್ ಪೇ ಮೂಲಕ ಹಣ ಹಾಕಿ, ಅಧೀಕ್ಷಕಿ ಲಂಚ ಕೇಳಿದ್ದರು ಅಂತ ಸುಪ್ರೀಂ ಕೋಟ್೯ ನ್ಯಾಯಧೀಶರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಈಮೇಲ್ ಮೂಲಕ ದೂರು ನೀಡಿದ್ದರು.

ಇದನ್ನೂ ಓದಿ: ಕಲಬುರಗಿ ನವಜಾತ ಶಿಶು ಅಪಹರಣ ಪ್ರಕರಣ: 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು

ಆದರೆ, ಈ ಪ್ಲಾನ್​ ಪ್ಲಾಪ್​ ಆಯಿತು. ನಂತರ, ಕೈದಿಗಳು ಪ್ರತಿಭಟನೆಗೆ ಇಳಿದರು. ಆದರೆ, ಇದಕ್ಕೆ ಮುಖ್ಯ ಅಧಿಕ್ಷಕಿ ಅನಿತಾ ಅವರು ಬಗ್ಗಲಿಲ್ಲ. ಅದಕ್ಕೆ, ಕೈದಿಗಳು ಕಾರು ಸ್ಫೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೇ, ಕೈದಿಗಳ ಜೊತೆ ಜೈಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡ ಕೈ ಜೋಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ಧ ಡಾ. ಅನಿತಾ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗೇ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದವನ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Dattatraya Patil
Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More