ಕಲಬುರಗಿ: ರಾವಣನನ್ನು ದಹನ ಮಾಡಿದ್ರೆ, ನಾವು ರಾಮನ ಮೂರ್ತಿ ದಹನ ಮಾಡ್ತೇವೆ; ಹಿಂದೂ ಸಂಘಟನೆಗೆ ದಲಿತಸೇನೆ ಎಚ್ಚರಿಕೆ

ವಿಜಯದಶಮಿ ನಿಮಿತ್ತ ಕಲಬುರಗಿ ನಗರದಲ್ಲಿ ನಡೆಯಬೇಕಿದ್ದ ರಾವಣ ದಹನ ಕಾರ್ಯಕ್ರಮಕ್ಕೆ ದಲಿತಸೇನೆ ವಿರೋಧ ವ್ಯಕ್ತಪಡಿಸುತ್ತಿದೆ.

ಕಲಬುರಗಿ: ರಾವಣನನ್ನು ದಹನ ಮಾಡಿದ್ರೆ, ನಾವು ರಾಮನ ಮೂರ್ತಿ ದಹನ ಮಾಡ್ತೇವೆ; ಹಿಂದೂ ಸಂಘಟನೆಗೆ ದಲಿತಸೇನೆ ಎಚ್ಚರಿಕೆ
ದಲಿತ ಸಂಘಟನೆಯಿಂದ ರಾವಣ ದಹನಕ್ಕೆ ವಿರೋಧ
Updated By: ವಿವೇಕ ಬಿರಾದಾರ

Updated on: Oct 05, 2022 | 3:36 PM

ಕಲಬುರಗಿ: ವಿಜಯದಶಮಿ (Vijayadashmi) ನಿಮಿತ್ತ ಕಲಬುರಗಿ ನಗರದಲ್ಲಿ ನಡೆಯಬೇಕಿದ್ದ ರಾವಣ ದಹನ (Ravandhan) ಕಾರ್ಯಕ್ರಮಕ್ಕೆ ದಲಿತಸೇನೆ ವಿರೋಧ ವ್ಯಕ್ತಪಡಿಸುತ್ತಿದೆ. ಕಲಬುರಗಿ ನಗರದ ಅಪ್ಪಾ ಜಾತ್ರಾ ಮೈದಾನದಲ್ಲಿ ಹಿಂದುಪರ ಸಂಘಟನೆಗಳ ವತಿಯಿಂದ ಐವತ್ತು ಅಡಿ ರಾವಣ ಮೂರ್ತಿ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ದಲಿತ ಸಂಘಟನೆಗಳಿಂದ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಅನುಮತಿ ಇಲ್ಲದೆ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾವಣ ಮೂರ್ತಿ ದಹನ ಮಾಡಿದರೆ, ರಾಮನ ಮೂರ್ತಿ ದಹನ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೋಧ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ರಾವಣ ದಹಣ ಕಾರ್ಯಕ್ರಮ ಕೈಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Wed, 5 October 22