ಕಲಬುರಗಿ: ಹಿಜಾಬ್ ಧರಿಸಿ ಎಸ್ಎಸ್ಎಲ್ಸಿ (SSLC) ಪರೀಕ್ಷೆ ಬರೆಯಲು ಅವಕಾಶ ನೀಡಿದ ಹಿನ್ನಲೆ ಕೊಠಡಿ ಮೇಲ್ವಿಚಾರಕನನ್ನು ಅಮಾನತ್ತು ಮಾಡಿ ಕಲಬುರಗಿ ಡಿಡಿಪಿಐ (DDPI) ಆದೇಶ ಹೊರಡಿಸಿದ್ದಾರೆ. ಕಲಬುರಗಿ ಡಿಡಿಪಿಐ ಅಶೋಕ್ ಭಜಂತ್ರಿ ಅಮಾನತ್ತು (Suspend) ಮಾಡಿ ಆದೇಶ ಹೊರಡಿಸಿದ್ದಾರೆ. ಶಿಕ್ಷಕ ಹಯಾದ್ ಭಾಗವಾನ್ ಅನ್ನು ಅಮಾನತ್ತು ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ 28 ರಂದು ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿನಿ ಆಗಮಿಸಿದ್ದಳು. ಆದರೆ ಇದಕ್ಕೆ ಕೊಠಡಿ ಮೇಲ್ವಿಚಾರಕ ಹಯಾದ್ ಭಾಗವಾನ್ ಪ್ರಶ್ನೆ ಮಾಡದೆ ಅವಕಾಶ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ಜೇವರ್ಗಿ ಶ್ರೀರಾಮಸೇನೆ ಅಧ್ಯಕ್ಷ ನಿಂಗನಗೌಡ ಡಿಡಿಪಿಐಗೆ ದೂರು ನೀಡಿದ್ದರು. ಸದ್ಯ ಡಿಡಿಪಿಐ ಶಿಕ್ಷಕನನ್ನು ಅಮಾನತ್ತು ಮಾಡಿದ್ದಾರೆ.
ಗದಗ: ಹಿಜಾಬ್ ಅವಕಾಶ ನೀಡಿದ್ದಕ್ಕೆ ಪರೀಕ್ಷಾ ಮುಖ್ಯ ಅಧೀಕ್ಷಕರು ಸೇರಿ ಏಳು ಶಿಕ್ಷಕರ ಅಮಾನತು
ಜಿಲ್ಲೆಯಲ್ಲಿಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಜಾಬ್ ಹಾಕಿಕೊಂಡ ವಿದ್ಯಾರ್ಥಿಗಳಿಗೆ ಅನುಮತಿ ನೀಡಿದ ಹಿನ್ನೆಲೆ ಇಬ್ಬರು ಪರೀಕ್ಷಾ ಮುಖ್ಯ ಅಧೀಕ್ಷಕರು ಸೇರಿ ಏಳು ಶಿಕ್ಷಕರ ಅಮಾನತುಗೊಳಿಸಲಾಗಿದೆ. ಗದಗ ನಗರದ ಸಿಎಸ್ ಪಾಟೀಲ್ ಬಾಲಕರ ಹಾಗೂ ಬಾಲಕಿಯರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಿನ್ನೆ ಹಿಜಾಬ್ ಹಾಕಿಕೊಂಡು ಕೆಲ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಹಿಜಾಬ್ ಹಾಕಿಕೊಂಡ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೊಠಡಿಯಲ್ಲಿ ಅವಕಾಶ ನೀಡಿದಕ್ಕೆ ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಸಿಎಸ್ ಪಾಟೀಲ್ ಬಾಲಕರ ಪ್ರೌಢ ಶಾಲೆಯ ಮುಖ್ಯ ಅಧೀಕ್ಷಕ ಕೆಬಿ ಭಜಂತ್ರಿ ಅಮಾನತುಗೊಂಡಿದ್ದಾರೆ. ಸಿಎಸ್ ಪಾಟೀಲ್ ಬಾಲಕಿಯರ ಪ್ರೌಢಶಾಲಾ ಮುಖ್ಯ ಅಧೀಕ್ಷಕ ಬಿಎಸ್ ಹೊನಗುಂಡಿ ಅಮಾನತುಗೊಳಿಸಿ ಗದಗ ಡಿಡಿಪಿಐ ಬಸವಲಿಂಗಪ್ಪ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:
ಶಾಲಾ ಮುಖ್ಯೋಪಾಧ್ಯಾಯರನ್ನು ಅಮಾನತ್ತು ಮಾಡುವಂತೆ ಒತ್ತಾಯ; ಶಾಲಾ ಕೊಠಡಿಗೆ ಬೀಗ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
ಹಿಜಾಬ್ ಧರಿಸಿಕೊಂಡು ಬಂದ್ರೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಇಲ್ಲ ಎಂಟ್ರಿ; ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ