ಹೆತ್ತಮ್ಮನನ್ನು ಹೊರದಬ್ಬಿದ ದುರುಳರು: ಬೀದಿಗೆ ಬಿದ್ದ ಅಜ್ಜಿಯನ್ನು ಕಚ್ಚಿ ತಿಂದ ನಾಯಿಗಳು
ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ.
ಕಲಬುರಗಿ: ಅಫಜಲಪುರ (Afjalpur) ತಾಲೂಕಿನ ಗಾಣಗಾಪುರದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಸನ್ನಿಧಿಯಲ್ಲಿ ಕಳೆದ ರಾತ್ರಿ ರಸ್ತೆ ಬದಿ ಮಲಗಿದ್ದ ವೃದ್ಧೆಯನ್ನು ನಾಯಿಗಳು ಕಚ್ಚಿ ತಿಂದಿವೆ. ವೃದ್ಧೆ ಮಾನಸಿಕ ಅಸ್ವಸ್ಥಳಾಗಿದ್ದು, ಸಂಬಂಧಿಕರು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದರು. ಕಳೆದ 4 ದಿನಗಳ ಹಿಂದೆ ವೃದ್ಧೆಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಇದರಿಂದ ವೃದ್ಧೆಯ ಕಾಲಿಗೆ ಗಾಯವಾಗಿದ್ದರಿಂದ ಗೂಡ್ಸ್ ವಾಹನ ಚಾಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಸಿದ್ದನು. ಚಾಲಕ ಚಿಕಿತ್ಸೆ ಕೊಡಸಿದ ನಂತರ ಕರೆತಂದು ರಸ್ತೆ ಬದಿ ಬಿಟ್ಟೋಗಿದ್ದನು.
ಗಾಯಾಳು ವೃದ್ಧೆ ಕಳೆದ ರಾತ್ರಿ ರಸ್ತೆ ಬದಿ ಮಲಗಿದಾಗ ನಾಯಿಗಳು ವೃದ್ದೆಯನ್ನು ತಿಂದಿವೆ. ಇಂದು (ಅ.16) ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಮತ್ತು ಪೊಲೀಸರು ವೃದ್ಧೆಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕ್ಷುಲ್ಲಕ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ: ಪತ್ನಿ ನೇಣಿಗೆ ಶರಣು
ನೆಲಮಂಗಲ: ಕ್ಷುಲ್ಲಕ ವಿಚಾರಕ್ಕೆ ಪತಿ-ಪತ್ನಿ ನಡುವೆ ಪ್ರತಿನಿತ್ಯ ಜಗಳ ಸಂಭವಿಸುತ್ತಿದ್ದು, ಇದರಿಂದ ಪತ್ನಿ ಇಂದು (ಅ. 16) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ರೈಲ್ವೆ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾವ್ಯ (26)ಮೃತ ಮಹಿಳೆ.
ಕಾವ್ಯ 8 ವರ್ಷಗಳ ಹಿಂದ ಪ್ರಕಾಶ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಪತ್ನಿ ಕಾವ್ಯಾಗೆ, ಪ್ರಕಾಶ ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮೃತ ಕಾವ್ಯ ತಾಯಿ ಆರೋಪ ಮಾಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಘನಾಶಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ
ಉತ್ತರ ಕನ್ನಡ: ಕುಮಟಾ ತಾಲೂಕಿನ ದಿವಗಿ ಗ್ರಾಮದ ಬಳಿಯ ಅಘನಾಶಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಅಂದಾಜು 35 ರಿಂದ 38 ವರ್ಷದ ವ್ಯಕ್ತಿಯ ಮೃತ ದೇಹ ಎಂದು ಊಹಿಸಲಾಗಿದೆ. ಕುಮಟಾ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುಬ್ಬಳ್ಳಿಯ ನೂಲ್ವಿ ಕ್ರಾಸ್ ಬಳಿ ಭೀಕರ ಅಪಘಾತ: 15ಕ್ಕೂ ಹೆಚ್ಚು ಜನರಿಗೆ ಗಾಯ
ಧಾರವಾಡ: ಟಾಟಾ ಏಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಕ್ರಾಸ್ ಬಳಿ ನಡೆದಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರಗೆ ದಾಖಲಿಸಲಾಗಿದೆ. 15 ಜನರು ಕಾರ್ಖಾನೆ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುವ ಅಪಘಾತ ಸಂಭವಿಸಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ