ಕಲಬುರಗಿ: ರಾತ್ರಿ ಒಂದು ಗಂಟೆಗೆ ಲಘು ಭೂಕಂಪದ ಅನುಭವ; ಆತಂಕದಲ್ಲಿ ಮನೆಯಿಂದ ಹೊರಬಂದ ಜನರು

| Updated By: preethi shettigar

Updated on: Oct 08, 2021 | 12:00 PM

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ, ತೇಗಲತಿಪ್ಪಿ ಗ್ರಾಮಗಳಲ್ಲಿ, ಕಳೆದ ರಾತ್ರಿ ಒಂದು ಗಂಟೆ ಸಮಯದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಇದರಿಂದ ಆತಂಕಗೊಂಡ ಜನರು ಮನೆಯಿಂದ ಹೊರ ಬಂದಿದ್ದಾರೆ.

ಕಲಬುರಗಿ: ರಾತ್ರಿ ಒಂದು ಗಂಟೆಗೆ ಲಘು ಭೂಕಂಪದ ಅನುಭವ; ಆತಂಕದಲ್ಲಿ ಮನೆಯಿಂದ ಹೊರಬಂದ ಜನರು
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ: ಜಿಲ್ಲೆಯ ಚಿಂಚೋಳಿ‌ ತಾಲೂಕಿನ ಕೆಲ ಗ್ರಾಮದಲ್ಲಿ ಲಘು ಭೂಕಂಪದ ಅನುಭವವಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ, ತೇಗಲತಿಪ್ಪಿ ಗ್ರಾಮಗಳಲ್ಲಿ, ಕಳೆದ ರಾತ್ರಿ ಒಂದು ಗಂಟೆ ಸಮಯದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಇದರಿಂದ ಆತಂಕಗೊಂಡ ಜನರು ಮನೆಯಿಂದ ಹೊರ ಬಂದಿದ್ದಾರೆ. ಗಡಿಕೇಶ್ವರ ಗ್ರಾಮದಲ್ಲಿ ಅನೇಕ ತಿಂಗಳಿಂದ ಭೂಮಿಯಿಂದ ಭಾರೀ ಸದ್ದು ಬರುತ್ತಿತ್ತು. ಈ ಮೊದಲೇ ಸದ್ದಿನಿಂದ ಕಂಗಾಲಾಗಿದ್ದ ಗ್ರಾಮದ ಜನರು, ಇದೀಗ ಲಘು ಭೂಕಂಪನದಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ವಿಜಯಪುರ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವ
ವಿಜಯಪುರ ಜಿಲ್ಲೆಯ ರೈಲ್ವೆ ಸ್ಟೇಷನ್ ಪ್ರದೇಶ, ಅಲ್ಲಾಪುರ ಓಣಿ, ಶಿವಗಿರಿ ಬಡಾವಣೆ, ಅಲ್ಲಾಪುರ ತಾಂಡಾ, ಗೋಳಗುಮ್ಮಟ ಸೇರಿ ಹಲವೆಡೆ ಭೂಕಂಪನವಾಗಿದೆ. ತಡರಾತ್ರಿ 12.20ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಪದೇ ಪದೇ ಭೂಕಂಪನವಾಗುತ್ತಿದ್ದು, ಇಲ್ಲಿನ ಜನರು ಆತಂಕಗೊಂಡಿದ್ದಾರೆ.

ಈಗಾಗಲೇ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಒಂದೇ ತಿಂಗಳಿನಲ್ಲಿ ಆರು ಬಾರಿ ಭೂಮಿ ಕಂಪಿಸಿದೆ. ಇಂದು ಮತ್ತೆ ಭೂಮಿ ನಡುಗಿದ್ದು, ಜನರು ಭಯಭೀತರಾಗಿದ್ದಾರೆ. ಸೆಪ್ಟೆಂಬರ್ 4 ರಂದು, 3.9ನಷ್ಟು ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಬಳಿಕ ಅಕ್ಟೋಬರ್ 1 ಹಾಗೂ 2 ರಂದು ಮತ್ತೆ ಭೂಕಂಪ ಸಂಭವಿಸಿತ್ತು. ಈ ವೇಳೆ 2.5 ನಷ್ಟು ಹಾಗೂ 2.0 ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲಾಗಿತ್ತು. ನಂತರ ಸೆಪ್ಟೆಂಬರ್ 5 ರಂದು 2.9 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಇಂದು ಮಧ್ಯರಾತ್ರಿ ಮತ್ತೆ ಭೂಕಂಪನವಾಗಿದೆ.

ಇದನ್ನೂ ಓದಿ:
ವಿಜಯಪುರ ಸಿಂದಗಿಯಲ್ಲಿ ಮತ್ತೆ ಭೂಕಂಪದ ಅನುಭವ! ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕ

ಸಿಂದಗಿ ಪಟ್ಟಣದಲ್ಲಿ ಭೂಕಂಪನವಾದದ್ದು ನಿಜ; ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲು

Published On - 7:36 am, Fri, 8 October 21