ಶಿಕ್ಷಣಪ್ರೇಮಿ, ಏಕೀಕರಣ ಹೋರಾಟಗಾರ, ಮಾಜಿ ಎಂಎಲ್​ಸಿ ಮಾರುತಿರಾವ್‌ ಮಾಲೆ ನಿಧನ

| Updated By: ರಮೇಶ್ ಬಿ. ಜವಳಗೇರಾ

Updated on: Dec 27, 2023 | 8:51 AM

marutirao D Male Passes Away : ಮಾಜಿ ವಿಧಾನಪರಿಷತ್ ಸದಸ್ಯ, ರಾಷ್ಟ್ರ ಏಕೀಕರಣ ಹೋರಾಟಗಾರ 83 ವರ್ಷದ ಮಾರುತಿರಾವ್ ಡಿ. ಮಾಲೆ ಅವರು ನಿಧನರಾಗಿದ್ದಾರೆ. ಮಾರುತಿರಾವ್ ಡಿ. ಮಾಲೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದರು.

ಶಿಕ್ಷಣಪ್ರೇಮಿ, ಏಕೀಕರಣ ಹೋರಾಟಗಾರ, ಮಾಜಿ ಎಂಎಲ್​ಸಿ ಮಾರುತಿರಾವ್‌ ಮಾಲೆ ನಿಧನ
ಮಾರುತಿರಾವ್ ಡಿ ಮಾಲೆ
Follow us on

ಕಲಬುರಗಿ, (ಡಿಸೆಂಬರ್ 27): ಶಿಕ್ಷಣಪ್ರೇಮಿ, ಮಾಜಿ ವಿಧಾನಪರಿಷತ್ ಸದಸ್ಯ, ರಾಷ್ಟ್ರ ಏಕೀಕರಣ ಹೋರಾಟಗಾರ ಮಾರುತಿರಾವ್ ಡಿ. ಮಾಲೆ (Marutirao D Male) ಅವರು ನಿಧನರಾಗಿದ್ದಾರೆ. ರಾಷ್ಟ್ರ ಏಕೀಕರಣ ಸಂದರ್ಭದಲ್ಲಿ ಏಕೀಕರಣಕ್ಕೆ ವಿರೋಧಿಸಿ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ‌ ವಿರುದ್ಧ ಧೀರತನದಿಂದ ಹೋರಾಟ ನಡೆಸಿದ್ದ ಮಾರುತಿರಾವ್ ಡಿ. ಮಾಲೆ ಕಳೆದ ಕೆಲ‌ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೂಲತಃ ಬೀದರ್ ಜಿಲ್ಲೆಯ ಘಾಟಬೊರಾಳ್ ಗ್ರಾಮದ ನಿವಾಸಿ, 83 ವರ್ಷದ ಮಾರುತಿರಾವ್ ಡಿ. ಮಾಲೆ ಅವರು ಶೀಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇನ್ನು ಇವರ ಅಂತ್ಯಕ್ರಿಯೆ ಇಂದು (ಡಿಸೆಂಬರ್ 27) ಕಲಬುರಗಿ (Kalaburagi) ಜಿಲ್ಲೆಯ ಹಾರುತಿ ಹಡಗಿಲ್ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಅಂತ್ಯಕ್ರಿಯೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಸೇರಿದಂತೆ ಇತರೆ ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ.

ಮಾರುತಿರಾವ್ ಡಿ. ಮಾಲೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದರು. ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯನ್ನು ಸ್ಥಾಪಿಸಿ ಅದರ ಫೌಂಡರ್ ಜೆನರಲ್ ಸೆಕ್ರೆಟರಿ ಆಗಿದ್ದ ಮಾರುತಿರಾವ್ ಮಾಲೆ ಹತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:51 am, Wed, 27 December 23