AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಪಿಸಿ CDR ಕಳ್ಳತನ ಕೇಸ್​​: ಪೊಲೀಸರೇ ಈ ರೀತಿ ಮಾಡಿದ್ದು ತಪ್ಪು: ಸಚಿವ ಜಿ ಪರಮೇಶ್ವರ್​

ಕಲಬುರಗಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಹಿಳಾ ಪಿಸಿ ಸಿಡಿಆರ್​​ ಕಳ್ಳತನ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇವೆ. ಪೊಲೀಸರೇ ಈ ರೀತಿ ಮಾಡಿದ್ದು ತಪ್ಪು. ಈ ಕುರಿತು ಸಮಗ್ರ ತನಿಖೆ ನಡೆಸಲು ಸೂಚಿಸಿದ್ದೇನೆ. ಈ ರೀತಿ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಹಿಳಾ ಪಿಸಿ CDR ಕಳ್ಳತನ ಕೇಸ್​​: ಪೊಲೀಸರೇ ಈ ರೀತಿ ಮಾಡಿದ್ದು ತಪ್ಪು: ಸಚಿವ ಜಿ ಪರಮೇಶ್ವರ್​
ಗೃಹ ಸಚಿವ ಡಾ.ಜಿ.ಪರಮೇಶ್ವರ್
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Dec 27, 2023 | 4:21 PM

Share

ಕಲಬುರಗಿ, ಡಿಸೆಂಬರ್​ 27: ಮಹಿಳಾ ಪಿಸಿ ಸಿಡಿಆರ್​​ ಕಳ್ಳತನ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇವೆ. ಪೊಲೀಸರೇ ಈ ರೀತಿ ಮಾಡಿದ್ದು ತಪ್ಪು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G. Parameshwara)​ ಹೇಳಿದ್ದಾರೆ. ನಗರದಲ್ಲಿ  ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಸಿಡಿಆರ್ ಕದ್ದ ಆರೋಪದ ಮೇಲೆ ಇಬ್ಬರು ಕಾನ್ಸ್​ಟೇಬಲ್ಸ್​ ಅಮಾನತು ಮಾಡಲಾಗಿದೆ. ಸಿಡಿಆರ್ ಖಾಸಗಿ ವ್ಯಕ್ತಿಗೆ ನೀಡಿರುವ ಪ್ರಕರಣದ ಬಗ್ಗೆ ಚರ್ಚಿಸಿದ್ದೇನೆ‌ ಎಂದು ಹೇಳಿದ್ದಾರೆ.

ಈ ಕುರಿತು ಸಮಗ್ರ ತನಿಖೆ ನಡೆಸಲು ಸೂಚಿಸಿದ್ದೇನೆ. ಈ ರೀತಿ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಪೇದೆಯ ಸಿಡಿಆರ್ ಕದ್ದು ಬೇರೆ ವ್ಯಕ್ತಿಗೆ ನೀಡಿದ್ದಕ್ಕೆ ಮದ್ವೆ ರದ್ದು: ಇದಕ್ಕೆ ಕಾರಣರಾದ ಇಬ್ಬರು ಕಾನ್ಸ್​ಟೇಬಲ್ ಸಸ್ಪೆಂಡ್

ಈಶಾನ್ಯ ವಲಯ ಐಜಿಪಿ ವಿಭಾಗದ ಪೊಲೀಸ್ ಸಭೆ ಮಾಡಿದ್ದೇನೆ. ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ಎಸ್ಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಈ ಭಾಗದಲ್ಲಿ ಕ್ರೈಂ ರೇಟ್ ಕಂಟ್ರೋಲ್, ಕಾನೂನು ಸುವ್ಯವಸ್ಥೆ, ಡ್ರಗ್ಸ್ ಕಂಟ್ರೋಲ್ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದರು.

ಇದನ್ನೆಲ್ಲಾ ಬಿಗಿ ಮಾಡುವುದೇ ನನ್ನ ಕೆಲಸ ಅಲ್ವಾ

ಕಲಬುರಗಿ ಸೆಂಟ್ರಲ್ ಜೈಲು ಕರ್ಮಕಾಂಡ ವಿಚಾರವಾಗಿ ಮಾತನಾಡಿದ ಅವರು, ಜೈಲಿನ ಅಕ್ರಮದ ಬಗ್ಗೆ ಆಗಿರುವ ತನಿಖಾ ವರದಿ ಪಡೆದುಕೊಳ್ಳುತ್ತೇನೆ. ಬಂಧಿಖಾನೆ ಅಧಿಕಾರಿಗಳೇ ಬೇರೆ ಇದ್ದಾರೆ, ಅವರು ಸಭೆಗೆ ಬಂದಿಲ್ಲ. ನಾವು ಕೇಂದ್ರ ಕಚೇರಿಯಿಂದಲೇ ಮಾನಿಟರ್ ಮಾಡುತ್ತಿದ್ದೇವೆ. ಇದನ್ನೆಲ್ಲಾ ಬಿಗಿ ಮಾಡುವುದೇ ನನ್ನ ಕೆಲಸ ಅಲ್ವಾ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಕಾನ್ಸ್​​​ಟೇಬಲ್ ಮೊಬೈಲ್ ಸಿಡಿಆರ್ ಕಳ್ಳನಿಗೆ ಮಾರಾಟ ಮಾಡಿ ಮದುವೆ ಮುರಿದ ಪೊಲೀಸರು: ಕಲಬುರಗಿ ಪೊಲೀಸ್ ಆಯುಕ್ತರಿಗೆ ದೂರು

ಜೈಲುಗಳ ಅಕ್ರಮಕ್ಕೆ ಕಡಿವಾಣ ಹಾಕಲು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಅತ್ಯಾಧುನಿಕ ಟೆಕ್ನಿಕಲ್​ ಉಪಕರಣ, ಸಿಸಿಟಿವಿ ಅಳವಡಿಸಬೇಕಿದೆ. ಅದನ್ನ ನಮ್ಮ ಇಲಾಖೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಅಕ್ರಮ ತಡೆಯೋದಕ್ಕೆ ಸೆಂಟ್ರಲ್ ಕಂಟ್ರೋಲ್ ಸಿಸ್ಟಮ್ ಮಾಡಬೇಕು ಅಂತ ಯೋಚನೆ ಮಾಡಿದ್ದೆವೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.