ಮಹಿಳಾ ಕಾನ್ಸ್​​​ಟೇಬಲ್ ಮೊಬೈಲ್ ಸಿಡಿಆರ್ ಕಳ್ಳನಿಗೆ ಮಾರಾಟ ಮಾಡಿ ಮದುವೆ ಮುರಿದ ಪೊಲೀಸರು: ಕಲಬುರಗಿ ಪೊಲೀಸ್ ಆಯುಕ್ತರಿಗೆ ದೂರು

ಅಶೋಕ ನಗರ ಪೊಲೀಸ್ ಠಾಣೆಯ ಕಳ್ಳ ಮಹೇಶ್ ಎಂಬಾತನಿಗೆ ಪೊಲೀಸರೇ ಮಹಿಳಾ ಸಿಬ್ಬಂದಿಯ ಮೊಬೈಲ್ ಸಿಡಿಆರ್ ಮಾರಾಟ ಮಾಡಿದ್ದಾರೆ. ಕಳ್ಳ ಸಿಡಿಆರ್ ಮಾಹಿತಿ ಇಟ್ಟುಕೊಂಡು ಮಹಿಳಾ ಪೇದೆಗೆ ಮಾನಸಿಕ ಕಿರುಕುಳ ನೀಡಿದ್ದು ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಗುವಂತೆ ಮಾಡಿದ್ದಾನೆ. ಕಲಬುರಗಿ ಪೊಲೀಸ್ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಮಹಿಳಾ ಕಾನ್ಸ್​​​ಟೇಬಲ್ ಮೊಬೈಲ್ ಸಿಡಿಆರ್ ಕಳ್ಳನಿಗೆ ಮಾರಾಟ ಮಾಡಿ ಮದುವೆ ಮುರಿದ ಪೊಲೀಸರು: ಕಲಬುರಗಿ ಪೊಲೀಸ್ ಆಯುಕ್ತರಿಗೆ ದೂರು
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Dec 22, 2023 | 1:02 PM

ಕಲಬುರಗಿ, ಡಿ.22: ಕಲಬುರಗಿಯಲ್ಲಿ ಮತ್ತೆ ಪೊಲೀಸರ ಕಳ್ಳಾಟ ಬಯಲಾಗಿದೆ. ಪೊಲೀಸರೇ ಮಹಿಳಾ ಕಾನ್ಸ್‌ಟೇಬಲ್ (Lady Constable) ಜೀವನದ ಜೊತೆ ಆಟವಾಡಿದ್ದು ಮದುವೆ ಮುರಿದು ಬೀಳಲು ಕಾರಣರಾಗಿದ್ದಾರೆ. ಪೊಲೀಸರೇ ಮಹಿಳಾ ಕಾನ್ಸ್‌ಟೇಬಲ್ ಮೊಬೈಲ್ ಸಿಡಿಆರ್ (Call Detail Record) ಮಾರಾಟ‌ ಮಾಡಿದ್ದಾರೆ. ಮಹಿಳಾ ಕಾನ್ಸ್‌ಟೇಬಲ್ ಒನ್ ಸೈಡ್ ಲವ್ (One Side Love) ಮಾಡ್ತಿದ್ದ ಕಳ್ಳನಿಗೆ ಪೊಲೀಸರೇ ಸಿಡಿಆರ್ ಮಾರಾಟ ಮಾಡಿದ್ದು ಆ ಕಳ್ಳ ಮಹಿಳಾ ಪೇದೆಗೆ ಮಾನಸಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಗುವಂತೆ ಮಾಡಿದ್ದಾನೆ. ಕಲಬುರಗಿಯ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ನೊಂದ ಯುವತಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್​ಗೆ ದೂರು ನೀಡಿದ್ದಾರೆ.

ಅಶೋಕ ನಗರ ಪೊಲೀಸ್ ಠಾಣೆಯ ಕಳ್ಳ ಮಹೇಶ್ ಎಂಬಾತನಿಗೆ ಪೊಲೀಸರೇ ಮಹಿಳಾ ಸಿಬ್ಬಂದಿಯ ಮೊಬೈಲ್ ಸಿಡಿಆರ್ ಮಾರಾಟ ಮಾಡಿದ್ದಾರೆ. ಸಿಡಿಆರ್ ಕೈಗೆ ಸಿಗುತ್ತಿದ್ದಂತೆ ಕಳ್ಳ ಮಹೇಶ್ ಅದನ್ನು ಬಳಸಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ ಮಹಿಳಾ ಕಾನ್ಸ್‌ಟೇಬಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಸಿಡಿಆರ್ ಕಳುಹಿಸಿ ತಾನು ಲವ್ ಮಾಡುತ್ತಿರುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ನಿಶ್ಚಿತಾರ್ಥ ಮಾಡಿಕೊಂಡ ಯುವಕ ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾನೆ. ಇದರಿಂದ‌ ನೊಂದ ಮಹಿಳಾ ಸಿಬ್ಬಂದಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್​ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಎಲ್ಲೆ ಮೀರಿದ ಪ್ರೀತಿ-ಪ್ರೇಮ! ಶ್ರೀಲಂಕಾ ಯುವತಿ, ತೆಲಂಗಾಣ ಯುವಕ ನಡುವೆ ಕಂಕಣಭಾಗ್ಯ

ಮಹಿಳಾ ಪೇದೆ ಸಿಡಿಆರ್ ಮಾರಾಟಕ್ಕೆ ಪೊಲೀಸರ ಮಾಸ್ಟರ್ ಮೈಂಡ್

ಇನ್ನು ಪೊಲೀಸರು ಮಹಿಳಾ ಪೇದೆ ಸಿಡಿಆರ್ ಪಡೆಯಲು ಮಾಸ್ಟರ್ ಮೈಂಡ್ ಬಳಸಿದ್ದಾರೆ. ಮಹಿಳಾ ಕಾನ್ಸ್‌ಟೇಬಲ್​ಗೆ ಸಂಬಂಧವೇ ಇರದ ಪ್ರಕರಣದ ತನಿಖೆಗೆ ಸಿಡಿಆರ್ ಬೇಕೆಂದು ಪಡೆದುಕೊಂಡಿದ್ದಾರೆ. ಮಹಿಳಾ ಠಾಣೆಯಲ್ಲಿ ದಾಖಲಾದ ಕ್ರೈಂ ನಂಬರ್ 47 ರ‌ ತನಿಖೆ ಹೆಸರಲ್ಲಿ ಸಿಡಿಆರ್ ಪಡೆದು ಕಳ್ಳನಿಗೆ ಮಾರಾಟ ಮಾಡಿದ್ದಾರೆ. ಆಯುಕ್ತರ ಸೂಚನೆ ಮೇರೆಗೆ ತನಿಖೆ ನಡೆಸಿದ್ದಾಗ ಪೊಲೀಸರ ಸಿಡಿಆರ್ ಕಳ್ಳತನ ಬೆಳಕಿಗೆ ಬಂದಿದೆ. ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಮಹಿಳಾ ಕಾನ್ಸ್‌ಟೇಬಲ್ ಮೇಲೆ ಯಾವುದೇ ಕೇಸ್ ಇಲ್ಲದಿದ್ದರೂ ಸಿಡಿಆರ್ ಪಡೆದು ದುರುಪಯೋಗ ಮಾಡಲಾಗಿದೆ ಎಂಬುವುದು ತಿಳಿದು ಬಂದಿದ್ದು ಸದ್ಯ ನಗರ ಪೊಲೀಸ್ ಆಯುಕ್ತ ಆರ್ ಚೇತನ್ ಅವರು ಪ್ರಕರಣವನ್ನ ತನಿಖೆಗೆ ನೀಡಿದ್ದಾರೆ. ಡಿಸಿಪಿ ಕನ್ನಿಕಾ ಸಿಕ್ರಿವಾಲ್ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ಮಾಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ