ಎಲ್ಲೆ ಮೀರಿದ ಪ್ರೀತಿ-ಪ್ರೇಮ! ಶ್ರೀಲಂಕಾ ಯುವತಿ, ತೆಲಂಗಾಣ ಯುವಕ ನಡುವೆ ಕಂಕಣಭಾಗ್ಯ

ಕರೀಂನಗರ ನಿವಾಸಿ ಅರುಣ್ ಕುಮಾರ್ ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಅಲ್ಲಿ 2014ರಲ್ಲಿ ಎಂಬಿಎ ಓದುತ್ತಿದ್ದ ಶ್ರೀಲಂಕಾದ ಅಜ್ಜುರಾ ಎಂಬ ಹುಡುಗಿ ಅರುಣ್ ಗೆ ಪರಿಚಯವಾಗಿತ್ತು.

ಎಲ್ಲೆ ಮೀರಿದ ಪ್ರೀತಿ-ಪ್ರೇಮ! ಶ್ರೀಲಂಕಾ ಯುವತಿ, ತೆಲಂಗಾಣ ಯುವಕ ನಡುವೆ ಕಂಕಣಭಾಗ್ಯ
ಶ್ರೀಲಂಕಾ ಯುವತಿ, ತೆಲಂಗಾಣ ಯುವಕ ನಡುವೆ ಕಂಕಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 22, 2023 | 11:24 AM

ಅಲಗುನೂರು, ಡಿಸೆಂಬರ್ 22: ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದ ತೆಲಂಗಾಣ ಯುವಕ ಅಲ್ಲಿನ ಹುಡುಗಿಯ ಪ್ರೇಮ ಪಾಶದಲ್ಲಿ ಸಿಲುಕಿದ. ಬಳಿಕ ಎರಡೂ ಕುಟುಂಬದ ಹಿರಿಯರ ಮನವೊಲಿಸಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ. ವಿವರಕ್ಕೆ ಹೋಗುವುದಾರೆ… ತೆಲಂಗಾಣದ ಕರೀಂನಗರದ ನಗರ ಸಭೆ ವ್ಯಾಪ್ತಿಯ ಅಲಗುನೂರಿನ ನಿವಾಸಿ ಅರುಣ್ ಕುಮಾರ್ ಸ್ಥಳೀಯವಾಗಿ ಪದವಿವರೆಗೆ ಓದಿದ್ದರು. ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋದರು. ಅಲ್ಲಿ 2014ರಲ್ಲಿ ಎಂಬಿಎ ಓದುತ್ತಿದ್ದ ಶ್ರೀಲಂಕಾದ ಅಜ್ಜುರಾ ಎಂಬ ಹುಡುಗಿಯೊಂದಿಗೆ ಅರುಣ್ ಗೆ ಪರಿಚಯವಾಗಿತ್ತು. ಅವರ ಪರಿಚಯ ತ್ವರಿತವಾಗಿ ಪ್ರೀತಿಗೆ ತಿರುಗಿತು. ಇತ್ತೀಚೆಗಷ್ಟೇ ಮದುವೆಯಾಗಲು ನಿರ್ಧರಿಸಿದ ಜೋಡಿ, ಕುಟುಂಬದ ಹಿರಿಯರಲ್ಲಿ ತಮ್ಮ ಪ್ರೀತಿ ವ್ಯವಹಾರ ವ್ಯಕ್ತಪಡಿಸಿದ್ದರು. ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಗುರುವಾರ ಅಲಗುನೂರಿನ ಅರುಣ್ ಕುಮಾರ್ ಅವರ ಮನೆಯಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿತು. ತೆಲಂಗಾಣ ಹುಡುಗ ಶ್ರೀಲಂಕಾದ ಹುಡುಗಿಯನ್ನು ಮದುವೆಯಾಗುತ್ತಿದ್ದಾನೆ ಎಂದು ಅದ ನೋಡಲು ಸ್ಥಳೀಯರು ಭಾರೀ ಪ್ರಮಾಣದಲ್ಲಿ ಜಮಾಯಿಸಿದ್ದರು.

ಮತ್ತೊಂದು ಘಟನೆ… ಗೋದಾವರಿಗೆ ಹಾರಿದ ನವದಂಪತಿ! ಶವವಾಗಿ ತೇಲಿಬಂದ ನವವಿವಾಹಿತ ವಧು

ನವದಂಪತಿ ಗೋದಾವರಿಯಲ್ಲಿ ಧುಮುಕಿದ ಘಟನೆ ಪೋದೂರಿನ ಪೆನುಗೊಂಡ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ದಡದಲ್ಲಿ ಮೀನುಗಾರರಿಗೆ ಯುವತಿಯ ಮೃತದೇಹ ಪತ್ತೆಯಾಗಿದೆ. ರಾಮರಾವ್ ಅವರ ಮೊಮ್ಮಗಳು ಸತ್ಯವಾಣಿ (19) ಅವರನ್ನು ಐದು ದಿನಗಳ ಹಿಂದೆ ಶಿವರಾಮಕೃಷ್ಣ ಅವರನ್ನು ವಿವಾಹವಾಗಿದ್ದರು. ಡಿಸೆಂಬರ್ 15 ರಂದು ಹಿರಿಯರು ವಿವಾಹ ಏರ್ಪಡಿಸಿದ್ದರು. ಆದರೆ ಏನಾಯಿತೋ ಗೊತ್ತಿಲ್ಲ, ಮಂಗಳವಾರ ದಂಪತಿ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಶಿವರಾಮಕೃಷ್ಣ ಈಜಿ ದಡಕ್ಕೆ ಬಂದಿದ್ದಾರೆ. ಗುರುವಾರ ಶವ ಪತ್ತೆಯಾದ ನಂತರ, ಪತಿ ಶಿವರಾಮಕೃಷ್ಣನೇ ಸತ್ಯವಾಣಿಯನ್ನು ಸಾಯಿಸಿದ್ದಾನೆ ಎಂದು ಸಂಬಂಧಿಕರು ನ್ಯಾಯಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ವಾಹನಗಳು ನಿಂತಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರೆ ಸತ್ಯಾಂಶ ಗೊತ್ತಾಗಲಿದ್ದು, ಪತಿ ಶಿವರಾಮಕೃಷ್ಣ ತಮ್ಮ ವಶದಲ್ಲಿರುವುದರಿಂದ ಅವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವುದಾಗಿ ಎಸ್ ಐ ನಾಗೇಶ್ವರ ರಾವ್, ಎಸ್ ಐ ರಮೇಶ್ ಭರವಸೆ ನೀಡಿದ್ದಾರೆ. ಮೃತನ ತಂದೆ ಮೆಳ್ಳು ರಾಮರಾವ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಎಸ್ಸೈ ರಮೇಶ್ ತಿಳಿಸಿದ್ದಾರೆ.

Also Read: ವಿವಾಹಿತ ಮಹಿಳೆಯೊಂದಿಗೆ ಯುವಕನ ಸಲುಗೆಯ ಫೋಟೋ ವೈರಲ್; ಇಬ್ಬರೂ ಆತ್ಮಹತ್ಯೆಗೆ ಶರಣು

ಪೊಲೀಸರ ತನಿಖೆಯಲ್ಲಿ ಶಿವರಾಮ ಕೃಷ್ಣ ಹೇಳಿದಂತೆ ಯುವತಿಗೆ ಈ ಮದುವೆ ಇಷ್ಟವಿರಲಿಲ್ಲ, ಯುವತಿ ದಾಂಪತ್ಯಕ್ಕೆ ಸಹಕರಿಸಲಿಲ್ಲ ಎಂದು ತಿಳಿದುಬಂದಿದೆ. ಅದಕ್ಕಾಗಿಯೇ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದರಂತೆ. ಸೇತುವೆಯಿಂದ ನವ ಜೋಡಿ ಜಿಗಿದಿದ್ದರು. ಆದರೆ ಶಿವರಾಮಕೃಷ್ಣ ನದಿಯಲ್ಲಿ ಸುಮಾರು ಒಂದು ಕಿಲೋ ಮೀಟರ್‌ ಗೂ ಹೆಚ್ಚು ದೂರ ಈಜಾಡಿಕೊಂಡು ಬಂದು ದಡ ಸೇರಿದ್ದಾರೆ. ಅದು ಹೇಗೆ ಸಾಧ್ಯವಾಯಿತು? ವಧುವಿನ ಪಾದರಕ್ಷೆಗಳು ದಡದಲ್ಲಿ ಪತ್ತೆಯಾಗಿವೆ. ಆದರೆ ಮೃತದೇಹದ ಮೇಲಿದ್ದ ಚಿನ್ನಾಭರಣಗಳು ಏನಾದವು? ಹೀಗೆ ಹಲವಾರು ಪ್ರಶ್ನೆಗಳನ್ನು ಯುವತಿಯ ಪೋಷಕರು ಎತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:24 am, Fri, 22 December 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್