ಸರ್ಕಾರಿ ಆಸ್ಪತ್ರೆಯ ಕ್ವಾಟರ್ಸ್​​ನಲ್ಲಿ ಮತಾಂತರಕ್ಕೆ ಯತ್ನ: ಪ್ರಶ್ನಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್​

| Updated By: ವಿವೇಕ ಬಿರಾದಾರ

Updated on: Feb 24, 2024 | 10:49 AM

ಕಾಳಗಿ ತಾಲೂಕಿನ ರಟಕಲ್‌ ಗ್ರಾಮದಲ್ಲಿರುವ ಸರ್ಕಾರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕ್ವಾಟರ್ಸ್‌ನಲ್ಲಿ ಹಣದ ಆಮಿಷ ತೋರಿಸಿ, ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಫೆಬ್ರವರಿ 22ರ ರಾತ್ರಿ ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ದಾಳಿ ಮಾಡಿ ಕ್ವಾಟರ್ಸ್‌ನಲ್ಲಿದ್ದ ನರ್ಸ್‌ಗಳಿಗೆ ಪ್ರಶ್ನೆ ಮಾಡಿದ್ದರು. ಹೀಗಾಗಿ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಸರ್ಕಾರಿ ಆಸ್ಪತ್ರೆಯ ಕ್ವಾಟರ್ಸ್​​ನಲ್ಲಿ ಮತಾಂತರಕ್ಕೆ ಯತ್ನ: ಪ್ರಶ್ನಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್​
ಮತಾಂತರಕ್ಕೆ ಯತ್ನ
Follow us on

ಕಲಬುರಗಿ, ಫೆಬ್ರವರಿ 24: ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ (Christianity) ಮತಾಂತರ (Conversion) ಮಾಡಲಾಗುತ್ತಿದೆ ಎಂದು ಸರ್ಕಾರಿ ಆಸ್ಪತ್ರೆಯ ಕ್ವಾಟರ್ಸ್​​​ನೊಳಗೆ (Government Hospital Quarters) ನುಗ್ಗಿದ್ದ ಒಂಬತ್ತು ಹಿಂದೂ ಕಾರ್ಯಕರ್ತರ ವಿರುದ್ಧ ರಟಕಲ್ ಪೊಲೀಸ್ (Police) ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ನರ್ಸ್ ಅಶ್ವಿನಿ ನೀಡಿದ ದೂರಿನನ್ವಯ ಅಟ್ರಾಸಿಟಿ ಆ್ಯಕ್ಟ್‌ ಅಡಿ ಹಿಂದೂ ಜಾಗೃತಿ ಸೇನೆ ಅಧ್ಯಕ್ಷ ಶಂಕರ್ ಚೋಕಾ, ಬಸವರಾಜ್ ಮತ್ತು ವಿಷ್ಣು ಸೇರಿದಂತೆ 9 ಆರೋಪಿಗಳ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

ಕಾಳಗಿ ತಾಲೂಕಿನ ರಟಕಲ್‌ ಗ್ರಾಮದಲ್ಲಿರುವ ಸರ್ಕಾರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕ್ವಾಟರ್ಸ್‌ನಲ್ಲಿ ಹಣದ ಆಮಿಷ ತೋರಿಸಿ, ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಫೆಬ್ರವರಿ 22ರ ರಾತ್ರಿ ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ದಾಳಿ ಮಾಡಿ ಕ್ವಾಟರ್ಸ್‌ನಲ್ಲಿದ್ದ ನರ್ಸ್‌ಗಳಿಗೆ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ: ಲಂಬಾಣಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನ: ಪ್ರಮೋದ್ ಮುತಾಲಿಕ್ ಆರೋಪ

ನರ್ಸ್​ಗಳಾದ ಅಶ್ವಿನಿ ಹಾಗೂ ರುಬಿಕಾ ಗುರುವಾರ (ಫೆ.22)ರ ರಾತ್ರಿ ಆಸ್ಪತ್ರೆಯ ಕ್ವಾಟರ್ಸ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಭೋಧಿಸುತ್ತಿದ್ದರು. ಹಾಗೆ ದುಡ್ಡಿನ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಪ್ರೇರೇಪಿಸುತ್ತಿದ್ದರು. ಹೀಗಾಗಿ ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಟಕಲ್ ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ಮತಾಂತರ ಮಾಡುತ್ತಿದ್ದವರ ವಿರುದ್ಧ ಹಿಂದೂ ಜಾಗೃತಿ ಸೇನೆ ರಟಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಇದೀಗ ನರ್ಸ್ ಅಶ್ವಿನಿ ನೀಡಿದ ದೂರಿನನ್ವಯ ಹಿಂದೂ ಕಾರ್ಯಕರ್ತರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ