ಕಲಬುರಗಿ: ಎಣ್ಣೆ ಪಾರ್ಟಿ ವೇಳೆ ಯುವಕನ ಮೇಲೆ ಗುಂಡಿನ ದಾಳಿ

| Updated By: ಆಯೇಷಾ ಬಾನು

Updated on: Sep 26, 2024 | 2:32 PM

ನಿನ್ನೆ ರಾತ್ರಿ ಆರೇಳು ಜನ ಸ್ನೇಹಿತರು ಒಟ್ಟಾಗಿ ಸೇರಿಕೊಂಡು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಸ್ನೇಹಿತರ ನಡುವೆ ಜಗಳವಾಗಿದ್ದು ಗುಂಡಿನ ದಾಳಿ ನಡೆದಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಗುಂಡು ಯುವಕನ ಎಡಗೈ ಗೆ ತಾಗಿದ್ದು ಗಾಯವಾಗಿದೆ.

ಕಲಬುರಗಿ: ಎಣ್ಣೆ ಪಾರ್ಟಿ ವೇಳೆ ಯುವಕನ ಮೇಲೆ ಗುಂಡಿನ ದಾಳಿ
ಎಣ್ಣೆ ಪಾರ್ಟಿ ವೇಳೆ ಯುವಕನ ಮೇಲೆ ಗುಂಡಿನ ದಾಳಿ
Follow us on

ಕಲಬುರಗಿ, ಸೆ.26: ಎಣ್ಣೆ ಪಾರ್ಟಿ (Party) ವೇಳೆ ಸ್ನೇಹಿತರ ನಡುವೆ ಜಗಳವಾಗಿದ್ದು ಯುವಕನ ಮೇಲೆ ಗುಂಡಿನ (Open Fire) ದಾಳಿ ನಡೆದಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ನಡೆದಿದೆ. ಶಾಂತಪ್ಪ ಪೂಜಾರಿ ಎಂಬ ಯುವಕನ ಎಡಗೈಗೆ ಗುಂಡುತಾಕಿ ಗಾಯವಾಗಿದೆ.

ಬುಧವಾರ ರಾತ್ರಿ ಕಡಗಂಚಿ ಗ್ರಾಮದ ಮನೆಯೊಂದರಲ್ಲಿ ಶ್ರೀಕಾಂತ್, ಮಾಳಪ್ಪ, ಕಾಂತಪ್ಪ, ಸೇರಿದಂತೆ ಆರೇಳು ಜನ ಸೇರಿಕೊಂಡು ಎಣ್ಣೆ ಪಾರ್ಟಿ ಮಾಡ್ತಿದ್ದರು. ಈ ವೇಳೆ ಜಗಳವಾಗಿದ್ದು ಶಾಂತಪ್ಪ ಪೂಜಾರಿ ಎಂಬುವರ ಮೇಲೆ ಗುಂಡಿನ ದಾಳಿಯಾಗಿದೆ. ಅದೃಷ್ಟವಶಾತ್ ಗುಂಡು ಎಡಗೈ ಗೆ ತಾಗಿದ್ದು ಶಾಂತಪ್ಪ ಪ್ರಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಗಾಯಾಳು ಶಾಂತಪ್ಪಗೆ ಕಲಬುರಗಿಯ ಟ್ರಾಮಾ ಕೇರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುಂಡಿನ ದಾಳಿ ಮಾಡಿದ ಗನ್ ಸಹಿತ ಆರೋಪಿಗಳಾದ ಕಾಂತಪ್ಪ, ಮಾಳಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾಲೋ ಬ್ಲಾಕ್​ ತುಂಬಿದ್ದ ಟೆಂಪೋ ಬೈಕ್​ ಮೇಲೆ ಪಲ್ಟಿ; ದಂಪತಿ ಸೇರಿ ಮೂವರು ಸ್ಥಳದಲ್ಲೇ ಸಾವು

ಪರಾರಿಯಾಗುವಾಗ ಆರೋಪಿಗೆ ಗುಂಡೇಟು

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ‌ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಮೇಲೆ ಹುಬ್ಬಳ್ಳಿ ಪೊಲೀಸರು ಫೈರಿಂಗ್ ಮಾಡಿದಾರೆ. ತನ್ನ ಪುತ್ರಿಗೆ ಮದುವೆಯಾಗಲು ಪೀಡಿಸುತ್ತಿದ್ದ ಮಹೇಶ್‌ಗೆ ನೀಲಾ ಹಂಪಣ್ಣವರ್‌ ಎಂಬುವರು ಬುದ್ಧಿವಾದ ಹೇಳಿದ್ದರು. ಆಗ ನೀಲಾ ಮೇಲೆ ಆರೋಪಿ ಮಹೇಶ್‌ ಚಾಕು ಇರಿದಿದ್ದ. ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗ್ತಿದೆ.

ಕರೆಂಟ್‌ ಶಾಕ್‌ಗೆ ಅಣ್ಣ-ತಮ್ಮ ದುರ್ಮರಣ

ದ್ರಾಕ್ಷಿ ತೋಟದಲ್ಲಿ ವಿದ್ಯುತ್ ಹರಿದು ಸೋದರರು ಸಾವನ್ನಪ್ಪಿರುವ ಘಟನೆ ವಿಜಯಪುರದ ತಿಕೋಟಾದ ಬಾಬಾನಗರ ಬಾಬಾನಗರ ಗ್ರಾಮದಲ್ಲಿ ನಡೆದಿದೆ. ತಮ್ಮ ಶ್ರೀಕಾಂತ ವಿಜಾಪುರ ಮತ್ತು ಅಣ್ಣ ರಾಜಕುಮಾರ ವಿಜಾಪುರ ಮೃತ ದುರ್ದೈವಿಗಳು. ತಮ್ಮ ತೋಟದಲ್ಲಿ ಕೆಲಸ ಮಾಡ್ತಿದ್ದ ವೇಳೆ ಕಬ್ಬಿಣದ ಆ್ಯಂಗಲ್‌ಗೆ ವಿದ್ಯುತ್ ತಂತಿ ತಗುಲಿ ದುರಂತ ಸಂಭವಿಸಿದೆ.

ಅಪಘಾತದಲ್ಲಿ ಐವರಿಗೆ ಗಾಯ

ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿಕ್ಕಿಯಾಗಿ ಐವರು ಗಾಯಗೊಂಡ ಘಟನೆ ಬೈಂದೂರಿನ ಕೊಲ್ಲೂರಿನ ಇಡೂರು ಸಮೀಪದ ಜನ್ನಾಲ್ ಬಳಿ ನಡೆದಿದೆ. ಅಪಘಾತದ ರಭಸಕ್ಕೆ ಖಾಸಗಿ ಬಸ್ ಪಲ್ಟಿಯಾಗಿದೆ. ರಾಘವೇಂದ್ರ, ವಾಸಿಂ, ಅಮೃತಾ, ಪ್ರತ್ಯಸ್ಥಿ ಮತ್ತು ಅಖಿತ್‌ ಎಂಬ ಗಾಯಾಳುಗಳನ್ನ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:27 pm, Thu, 26 September 24