ಮೋದಿ ದೊಡ್ಡ ಮನಸ್ಸು ಮಾಡಿದ್ರೆ ಜುಲೈ 1ಕ್ಕೆ 10 ಕೆಜಿ ಅಕ್ಕಿ ಸಿಗುತ್ತೆ -ಸಚಿವ ಪ್ರಿಯಾಂಕ್ ಖರ್ಗೆ

25 ಜನ ಬಿಜೆಪಿ ಸಂಸದರಿದ್ದು, ಯಾಕೆ ಬಾಯಿಗೆ ಹೊಲಿಗೆ ಹಾಕಿ ಕೂತಿದ್ದೀರಿ. ಪ್ರತಾಪ್ ಸಿಂಹ ಎಷ್ಟು ಸ್ಥಾನ ಮೈಸೂರಲ್ಲಿ ಗೆಲ್ಲಿಸಿದ್ದಾರೆ. ಬರೀ ನಮ್ಮ ಪಕ್ಷದ ಬಗ್ಗೆ ಮಾತಾಡೋದು ಬಿಟ್ಟು ಕನ್ನಡಿಗರ ಬಗ್ಗೆ ಮಾತನಾಡಲಿ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಮೋದಿ ದೊಡ್ಡ ಮನಸ್ಸು ಮಾಡಿದ್ರೆ ಜುಲೈ 1ಕ್ಕೆ 10 ಕೆಜಿ ಅಕ್ಕಿ ಸಿಗುತ್ತೆ -ಸಚಿವ ಪ್ರಿಯಾಂಕ್ ಖರ್ಗೆ
ನರೇಂದ್ರ ಮೋದಿ, ಪ್ರಿಯಾಂಕ್ ಖರ್ಗೆ
Follow us
ಆಯೇಷಾ ಬಾನು
|

Updated on: Jun 20, 2023 | 11:39 AM

ಕಲಬುರಗಿ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ(Anna Bhagya) ವಿಚಾರದಲ್ಲಿ ಅಕ್ಕಿ ಪೂರೈಕೆ ಮಾಡಲು ಕೇಂದ್ರ ಬಿಜೆಪಿ ಸರ್ಕಾರ(Central BJP Government) ನಿರಾಕರಿಸಿದ್ದು ರಾಜ್ಯದ ಅನೇಕ ಕಡೆ ಕಾಂಗ್ರೆಸ್ ಪ್ರತಿಭಟನೆ(Congress Protest) ನಡೆಸುತ್ತಿದೆ. ಮತ್ತೊಂದೆಡೆ ಮೋದಿ(Narendra Modi) ದೊಡ್ಡ ಮನಸ್ಸು ಮಾಡಿದ್ರೆ ಜುಲೈ 1ಕ್ಕೆ 10 ಕೆಜಿ ಅಕ್ಕಿ ಸಿಗುತ್ತೆ. ಆದ್ರೆ ಇವರು ಮನಸ್ಸು ಮಾಡ್ತಿಲ್ಲ. ಹೀಗಾಗಿ ಕಾನೂನಾತ್ಮಕ ಹೋರಾಟ ಮಾಡುವ ಬಗ್ಗೆ ಕೂಡ ಚಿಂತಿಸಿದ್ದೇವೆ ಎಂದು ಕಲಬುರಗಿಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, 25 ಜನ ಬಿಜೆಪಿ ಸಂಸದರಿದ್ದು, ಯಾಕೆ ಬಾಯಿಗೆ ಹೊಲಿಗೆ ಹಾಕಿ ಕೂತಿದ್ದೀರಿ. ಪ್ರತಾಪ್ ಸಿಂಹ ಎಷ್ಟು ಸ್ಥಾನ ಮೈಸೂರಲ್ಲಿ ಗೆಲ್ಲಿಸಿದ್ದಾರೆ. ಬರೀ ನಮ್ಮ ಪಕ್ಷದ ಬಗ್ಗೆ ಮಾತಾಡೋದು ಬಿಟ್ಟು ಕನ್ನಡಿಗರ ಬಗ್ಗೆ ಮಾತನಾಡಲಿ. ಇರೋ ಸ್ಟಾಕ್ ಪ್ರಕಾರ ಜೋಳ ಮತ್ತು ರಾಗಿ ನೀಡಿದ್ರು ಕೇವಲ ಎರಡು ಕಿಲೋ ಮಾತ್ರ ಕೊಡಲು ಸಾಧ್ಯವಾಗುತ್ತೆ. ಜೋಳ ಮತ್ತು ರಾಗಿ ಕೊಡಲು ಕೂಡಾ ಸ್ಟಾಕ್ ಇಲ್ಲ. ಕೇಂದ್ರ ಸರ್ಕಾರದ ಪ್ರತ್ಯೇಕ ಹೊಲ ಗದ್ದೆಗಳಿವಿಯಾ? ರಾಜ್ಯ ಸರ್ಕಾರದಿಂದ ಖರೀದಿಸಿದ ಆಹಾರ ಧಾನ್ಯಗಳೇ ಕೇಂದ್ರದಲ್ಲಿರೋದು. ಮೋದಿ ಅವರು ದೊಡ್ಡ ಮನಸು ಮಾಡಿದ್ರೆ ಜುಲೈ 1ಕ್ಕೆ ಹತ್ತು ಕಿಲೋ ಅಕ್ಕಿ ಸಿಗುತ್ತೆ. ಕಾನೂನಾತ್ಮಕ ಹೋರಾಟ ಮಾಡೋ ಬಗ್ಗೆ ಕೂಡಾ ಚಿಂತನೆ ನಡೆಸಿದ್ದೇವೆ. ಅನ್ನಭಾಗ್ಯ ಅಕ್ಕಿ ಕಳ್ಳತನ ಮಾಡೋರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು: ಎಂಬಿ ಪಾಟೀಲ್​ ವಾಗ್ದಾಳಿ

ಚುನಾವಣೆ ಸಮಯದಲ್ಲಿ ನಡ್ಡಾ ಹೇಳಿದ ಮಾತುಗಳೇ ಈಗ ಗ್ಯಾರಂಟಿಗಳಿಗೆ ಸಮಸ್ಯೆಯಾಗುತ್ತಿರುವುದು

ಬಿಜೆಪಿಯವರು ಕೇಂದ್ರ ಸರ್ಕಾರದ ಮೂಲಕ ದ್ವೇಷದ ರಾಜಕೀಯ ಮಾಡಲು ಆರಂಭಿಸಿದ್ದಾರೆ. ರಾಜ್ಯ ಬಿಜೆಪಿಯವರು ಮೋದಿ, ಅಮಿತ್ ಶಾ ಕಿವಿಯಲ್ಲಿ ಏನು ಹೇಳಿದ್ದಾರೋ ಗೊತ್ತಿಲ್ಲಾ. ದಿಡೀರನೆ ಅಕ್ಕಿ ಕೊಡಲ್ಲ ಅಂತ ಕೇಂದ್ರ ಸರ್ಕಾರ ಹೇಳುತ್ತಿದೆ. ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಿಕ್ಕೆ ತಯಾರಿದ್ದಾರೆ. ಆದ್ರೆ ರಾಜ್ಯ ಸರ್ಕಾರ ಕೇಳಿದ್ರು ಅಕ್ಕಿ ಕೊಡ್ತಿಲ್ಲ. ಚುನಾವಣೆ ಸಮಯದಲ್ಲಿ ನಡ್ಡಾ ಅವರು ಹೇಳಿದ್ರು, ಬಿಜೆಪಿಗೆ ಓಟ್ ಹಾಕಲಿಲ್ಲ ಅಂದ್ರೆ ಮೋದಿ ಅವರ ಆಶೀರ್ವಾದ ನಿಮಗೆ ಸಿಗಲ್ಲ ಅಂತ. ಐದು ಗ್ಯಾರಂಟಿ ಯೋಜನೆ ಜಾರಿ ತೊಂದರೆಗೆ ಈ ಮಾತುಗಳು ಕಾರಣವಾಗುತ್ತಿವೆ. ಬಿಜೆಪಿಯವರು ಕೇವಲ ವಾಟ್ಸಪ್ ಯೂನಿವರ್ಸಿಟಿಯಲ್ಲಿರುತ್ತಾರೆ. ನಾವು ಬೆಳೆದ ಆಹಾರ ಧಾನ್ಯಗಳು ನಮಗೆ ಸಿಗ್ತಾಯಿಲ್ಲ. ಆದ್ರೆ ವಿದೇಶಗಳಿಗೆ ರಪ್ತು ಮಾಡಲು ಮುಂದಾಗಿದ್ದಾರೆ. ಇದು ನಿಜವಾದ ದೇಶ ದ್ರೋಹದ ಕೆಲಸ. ಸೋಲಿನ ಹತಾಶೆಯಿಂದ ಬಿಜೆಪಿ ಈ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಅಂತ ಈ ರೀತಿ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರ ಅವಧಿ ಬಗ್ಗೆ ಬಿಜೆಪಿಗೆ ಕಾಳಜಿ ಇದೆ. ಆದ್ರೆ ಕನ್ನಡಿಗರ ಬಗ್ಗೆ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಇದೇ ವೇಳೆ ಪ್ರಿಯಾಂಕ್ ಖರ್ಗೆ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರಿಗೆ ಟಾಂಗ್ ಕೊಟ್ಟಿದ್ದಾರೆ. ಒಂದೇ ಒಂದು ಕಾಳು ಅಕ್ಕಿ ಕಡಿಮೆಯಾದ್ರು ಸಹಿಸಲ್ಲ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ, ಒಂದೇ ಒಂದು ಕಾಳು ಕಡಿಮೆ ಸಿಗಬಾರದು ಅಂದ್ರೆ ನಮ್ಮ ಜೊತೆ ಕೈ ಜೋಡಿಸಲಿ. ಯಡಿಯೂರಪ್ಪನವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು  ಓದಲು ಇದರ ಮೇಲೆ ಕ್ಲಿಕ್ ಮಾಡಿ