PSI ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಬೆಳಕಿಗೆ; 50 ಲಕ್ಷ ರೂಪಾಯಿ ಪಡೆದಿದ್ದ ರುದ್ರಗೌಡ ಪಾಟೀಲ್​ನ ಆಡಿಟರ್

| Updated By: sandhya thejappa

Updated on: May 03, 2022 | 12:14 PM

ಈಗಾಗಲೇ ಪ್ರಭು ಎನ್ನುವ ಅಭ್ಯರ್ಥಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಭು ಕಲಬುರಗಿ ನಗರದ ಎಂಎಸ್ಐ ಇರಾಣಿ ಡಿಗ್ರಿ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ.

PSI ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಬೆಳಕಿಗೆ; 50 ಲಕ್ಷ ರೂಪಾಯಿ ಪಡೆದಿದ್ದ ರುದ್ರಗೌಡ ಪಾಟೀಲ್​ನ ಆಡಿಟರ್
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ: ಈಗಾಗಲೇ ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮ ಬೆಳಕಿಗೆ ಬಂದಿದೆ. ಕಲಬುರಗಿ ಜ್ಞಾನಜೋತಿ ಇಂಗ್ಲಿಷ್ ಶಾಲೆ ಜೊತೆ ಬೇರೆ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವುದು ಸಿಐಡಿ (CID) ವಿಚಾರಣೆ ವೇಳೆ ತಿಳಿದುಬಂದಿದೆ. ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ (Electronic Bluetooth Device) ಬಳಸಿ ಅಕ್ರಮ ಎಸಗಿದ್ದಾರೆ. ರುದ್ರಗೌಡ ಪಾಟೀಲ್ ಗ್ಯಾಂಗ್ನಿಂದ ಈ ಕೃತ್ಯ ನಡೆದಿದೆ. ಕೇಳಿದ್ದಷ್ಟು ಹಣ ಕೊಟ್ಟವರಿಗೆ ರುದ್ರಗೌಡ ಪಾಟೀಲ್ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಸಹಾಯ ಮಾಡಿದ್ದಾನೆ. ಇನ್ನು ಬೇರೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರಾ? ಅಥವಾ ಅಭ್ಯರ್ಥಿಗಳು ಮಾತ್ರ ಅಕ್ರಮ ಮಾಡಿದ್ದಾರಾ? ಅನ್ನೋದರ ಬಗ್ಗೆ ತನಿಕೆ ನಡೆಯುತ್ತಿದೆ.

ಈಗಾಗಲೇ ಪ್ರಭು ಎನ್ನುವ ಅಭ್ಯರ್ಥಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಭು ಕಲಬುರಗಿ ನಗರದ ಎಂಎಸ್ಐ ಇರಾಣಿ ಡಿಗ್ರಿ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ. ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಎಂದು ಹೇಳಲಾಗುತ್ತಿದೆ. ರುದ್ರಗೌಡ ಪಾಟೀಲ್​ನ ಅಡಿಟರ್ ಚಂದ್ರಕಾಂತ್ ಕುಲಕರ್ಣಿ ಡೀಲ್ ಕುದರಿಸಿದ್ದ. ಐವತ್ತು ಲಕ್ಷಕ್ಕೆ ಪ್ರಭು ಜೊತೆ ಡೀಲ್ ಕುದುರಿಸಿದ್ದನಂತೆ.  ಪ್ರಭು ತಂದೆ ಶರಣಪ್ಪ ಚಂದ್ರಕಾಂತ ಕುಲಕರ್ಣಿಗೆ 50 ಲಕ್ಷ ರೂಪಾಯಿ ನೀಡಿದ್ದಾರೆ. ಶರಣಪ್ಪ ಕಲಬುರಗಿ ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ.  ಮಗ ಪ್ರಭುಗೆ PSI ಹುದ್ದೆ ಕೊಡಿಸಲು ಸಾಲಮಾಡಿ ಹಣ ನೀಡಿದ್ದರು. ಸದ್ಯ ಹಣ ಪಡೆದ ಚಂದ್ರಕಾಂತ್ ಕುಲಕರ್ಣಿಯನ್ನು ಕಳೆದ ರಾತ್ರಿ  ಸಿಐಡಿ ಬಂಧಿಸಿದೆ.

ಮೂವರು ಪ್ರಮುಖ ಕಿಂಗ್​ಪಿನ್​ಗಳಾದ ರುದ್ರಗೌಡ ಪಾಟೀಲ್, ಮಂಜುನಾಥ ಮೇಳಕುಂದಿ, ಹೆಡ್​ಮಾಸ್ಟರ್ ಕಾಶಿನಾಥ್ ಸಿಐಡಿ ವಶದಲ್ಲಿದ್ದಾರೆ. ಈ ಮೂವರೇ ಅನೇಕರಿಗೆ ಹಣದ ಆಮಿಷ ತೋರಿಸಿ ಅಕ್ರಮ ಮಾಡಿಸಿದ್ದು. ಈ ಮೂವರು ನೀಡುತ್ತಿರುವ ಮಾಹಿತಿ ಮೇರೆಗೆ ಅನೇಕರನ್ನು ಬಂಧಿಸಲಾಗುತ್ತಿದೆ.

ಕಾಶಿನಾಥ್ ಸರ್ಕಾರಿ ನೌಕರಿ ಬಿಟ್ಟು ‌ಜ್ಞಾನಜೋತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ. ಅನುಧಾನಿತ ಪ್ರೌಢ ಶಾಲೆಯಲ್ಲಿನ ನೌಕರಿಗೆ ರಾಜೀನಾಮೆ ನೀಡಿದ್ದ. ಇಲ್ಲೇ ಸುಲಭವಾಗಿ ಲಕ್ಷ ಲಕ್ಷ ಹಣ ಗಳಿಸಲು ಪ್ರಾರಂಭಿಸಿದ್ದ.  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಹಾಯ ಮಾಡುತ್ತಿದ್ದ.

ಅಭ್ಯರ್ಥಿಗಳ ಹೋರಾಟಕ್ಕೆ‌ ಕಾಂಗ್ರೆಸ್ ಸಾಥ್:
ಪಿಎಸ್ಐ ಪ್ರಕರಣವನ್ನ ಕಾಂಗ್ರೆಸ್ ಗಂಭೀರವಾಗಿ ಸ್ವೀಕರಿಸಿದೆ. ಪಿಎಸ್ಐ ಅಭ್ಯರ್ಥಿಗಳ ಹೋರಾಟಕ್ಕೆ‌ ಸಾಥ್ ನೀಡಲು‌ ನಿರ್ಧರಿಸಿದೆ. ಇದಕ್ಕಾಗಿ ಉಗ್ರಪ್ಪ ನೇತೃತ್ವದಲ್ಲಿ ಪ್ರತ್ಯೇಕ ನಿಯೋಗ ರಚಿಸಿದ್ದು ಮಾಹಿತಿ ಕಲೆ ಹಾಕಲು ಮುಂದಾಗಿದೆ. ಈಶ್ವರಪ್ಪ ವಿಚಾರದಲ್ಲಿ ಕಾಂಗ್ರೆಸ್ ದೊಡ್ಡ ಹೋರಾಟ ಮಾಡಿತ್ತು. ಈಗ ಅದೇ ಮಾದರಿಯಲ್ಲಿ ಹೋರಾಟ ನಡೆಸಲು ನಿರ್ಧಾರ ಮಾಡಿದೆ. ಬಿಜೆಪಿಯಲ್ಲೂ ಒಳರಾಜಕೀಯ ಜೋರಾಗಿದೆ.

ತಲೆಕೆಡಿಸಿಕೊಳ್ಳದ ಬಿಜೆಪಿ:
ಅಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ ಹೆಸರು ಕೇಳಿ ಬಂದಿದೆ. ಆದರೆ ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಚಿವ ಅಶ್ವಥ್ ನಾರಾಯಣ ವಿರುದ್ಧದ ಆರೋಪ ರಾಜಕೀಯ ಪ್ರೇರಿತ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ. ಆರೋಪ ರಾಮನಗರ ರಾಜಕೀಯದ ಒಂದು ಭಾಗ ಎಂದು ಬಿಜೆಪಿ ಹೇಳುತ್ತಿದೆ. ಚುನಾವಣಾ ವರ್ಷವಾಗಿರುವ ಕಾರಣ ಕಾಂಗ್ರೆಸ್ ಇಂತಹ ಆರೋಪಗಳನ್ನು ಮಾಡುತ್ತಲೇ ಹೋಗುತ್ತದೆ ಎಂದು ಪರಿಗಣನೆ ಮಾಡಿದೆ.

ಎರಡು ಪ್ರತ್ಯೇಕ ತಂಡದಿಂದ ವಿಚಾರಣೆ:
ಡಿವೈಎಸ್​ಪಿ ಪ್ರಕಾಶ್ ರಾಥೋಡ್​ರಿಂದ ಕಲಬುರಗಿ, ಡಿವೈಎಸ್​ಪಿ ಬಿ.ಕೆ.ಶೇಖರ್​ ನೇತೃತ್ವದಲ್ಲಿ ಬೆಂಗಳೂರು ಪ್ರಕರಣದ ತನಿಖೆ ನಡೆಯುತ್ತಿದೆ. ಬೆಂಗಳೂರಿನ ಕೇಸ್ ಸಂಬಂಧ ಈಗಾಗಲೇ 12 ಜನ ಸಿಐಡಿ ವಶದಲ್ಲಿದ್ದಾರೆ. ಕಾರ್ಬನ್ ಕಾಪಿ, ಮೂಲ ಒಎಂಆರ್​ನಲ್ಲಿ ಅಕ್ರಮ ಬಯಲಾಗಿತ್ತು. ಹೀಗಾಗಿ ಪರೀಕ್ಷಾ ಅಕ್ರಮಕ್ಕೆ ಸಹಾಯ ಮಾಡಿದ್ದು ಯಾರು? ಯಾರು ಯಾರಿಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಹಲವು ಕೇಂದ್ರಗಳಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನ ಬಂಧಿಸಲಾಗಿದೆ. ಅರೆಸ್ಟ್ ಆಗಿರುವ ಎಲ್ಲರೂ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿಲ್ಲ. ನೇಮಕಾತಿ ವಿಭಾಗದಲ್ಲಿ ಯಾರೋ ಸಹಾಯ ಮಾಡಿರುವ ಶಂಕೆ ಮೂಡಿದೆ. ಉತ್ತರ ಪತ್ರಿಕೆ ನೇಮಕಾತಿ ವಿಭಾಗ ಸೇರಿದ ನಂತರ ತಿದ್ದಿರುವ ಅನುಮಾನ ಇದೆ. ನೇಮಕಾತಿ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಶಾಮೀಲು ಆಗಿರಬಹುದು ಎಂದು ಅನುಮಾನ ಹೆಚ್ಚಾಗಿದೆ.

ಎಂಎಸ್ ಇರಾನಿ ಡಿಗ್ರಿ ಕಾಲೇಜ್​​​ನಲ್ಲಿ ಅಕ್ರಮ ನಡೆದ ವಿಚಾರಕ್ಕೆ ಸಂಬಂಧಿಸಿ ಈ ಕಾಲೇಜಿನಲ್ಲಿ ಪರೀಕ್ಷೆ ಬರೆದವರ ಪೈಕಿ 7 ಜನ ಆಯ್ಕೆಯಾಗಿದ್ದರು. ಪಿಎಸ್​ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 7 ಜನರ ಹೆಸರಿತ್ತು. ಏಳು ಜನರ ಪೈಕಿ ಅಭ್ಯರ್ಥಿ ಪ್ರಭುನನ್ನು ಬಂಧಿಸಲಾಗಿದೆ. ಉಳಿದ 6 ಅಭ್ಯರ್ಥಿಗಳ ಪರಿಶೀಲನೆಗೆ ಸಿಐಡಿ ಮುಂದಾಗಿದ್ದಾರೆ. ಉಳಿದ ಆರು ಜನ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದಾರಾ? ಅಥವಾ ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರಾ? ಈ ಎಲ್ಲದರ ಬಗ್ಗೆ ತನಿಖೆ ನಡೆಸಲಿದ್ದಾರೆ.

ಇದನ್ನೂ ಓದಿ

ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ: ಇಂದು ಬೆಂಗಳೂರಿನಲ್ಲಿ ಅಮಿತ್ ಶಾ ಮಹತ್ವದ ಸಭೆ

ಕನ್ನಡದ ‘ಟಾಕೀಸ್​’ ಲಾಂಚ್​ ಮಾಡಿದ ಶಿವಣ್ಣ; ಇದರಲ್ಲಿ ಇದ್ದಾರೆ ಸಾವಿರಕ್ಕೂ ಹೆಚ್ಚು ಕಲಾವಿದರು

Published On - 7:55 am, Tue, 3 May 22