ರೈತರಿಗೆ ಕೃಷಿ ಇಲಾಖೆಯಿಂದಲೇ ವಂಚನೆ! ಅವಧಿ ಮೀರಿದ ಕ್ರಿಮಿನಾಶಕ, ಗೊಬ್ಬರ ನೀಡುತ್ತಿರುವ ರೈತ ಸಂಪರ್ಕ ಕೇಂದ್ರಗಳು

ರಾಜ್ಯದಲ್ಲಿ ಉತ್ತಮ ಮಳೆ ಹಿನ್ನಲೆ ಬಿತ್ತನೆ ಕಾರ್ಯ ಜೋರಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಲಬುರಗಿ ಜಿಲ್ಲೆಯ ಕೆಲ ರಸಗೊಬ್ಬರ ಅಂಗಡಿ ಮಾಲೀಕರು ರೈತರಿಂದ ದುಪ್ಪಟ್ಟು ಹಣ ಪಡೆದು ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಮತ್ತೊಂದೆಡೆ, ರೈತ ಸಂಪರ್ಕ ಕೇಂದ್ರಗಳಲ್ಲೇ ಅವಧಿ ಮೀರಿದ ಕೀಟ ನಾಶಕ ಹಾಗೂ ಗೊಬ್ಬರ ಮಾರಾಟ ಮಾಡಿ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ರೈತರಿಗೆ ಕೃಷಿ ಇಲಾಖೆಯಿಂದಲೇ ವಂಚನೆ! ಅವಧಿ ಮೀರಿದ ಕ್ರಿಮಿನಾಶಕ, ಗೊಬ್ಬರ ನೀಡುತ್ತಿರುವ ರೈತ ಸಂಪರ್ಕ ಕೇಂದ್ರಗಳು
ಸಾಂದರ್ಭಿಕ ಚಿತ್ರ
Edited By:

Updated on: Sep 05, 2025 | 9:15 AM

ಕಲಬುರಗಿ, ಸೆಪ್ಟೆಂಬರ್ 5: ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ (Kalaburagi) ಜೇವರ್ಗಿ ಹಾಗು ಯಡ್ರಾಮಿ ತಾಲೂಕಿನ ಕೆಲ ರೈತ ಸಂಪರ್ಕ ಕೇಂದ್ರಗಳು ಎರಡು ವರ್ಷದ ಹಿಂದೆಯೇ ಅವಧಿ ಮೀರಿದ್ದ ಕ್ರಿಮಿನಾಶಗಳನ್ನು ರೈತರಿಗೆ ಮಾರಾಟ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರೈತರಿಗೆ ವಂಚಿಸುತ್ತಿರುವ ರೈತ ಸಂಪರ್ಕ ಕೇಂದ್ರಗಳ ವಿರುದ್ದ ಹಾಗೂ ಅಲ್ಲಿನ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಆಗಬೇಕು ಮತ್ತು ಅವಧಿ ಮೀರಿದ ಕ್ರಿಮಿನಾಶಕಗಳನ್ನು ವಶಕ್ಕೆ ಪಡೆಯಬೇಕು. ರೈತರಿಗೆ ವಂಚಿಸಿದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಸಿರು ಸೇನೆ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಅಲ್ಲದೇ, ಇಷ್ಟೆಲ್ಲಾ ನಡೆಯತ್ತಿದ್ದರೂ ಕೃಷಿ ಸಚಿವರು ಕಾಣೆಯಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ತ ರೈತ ಸಂಪರ್ಕ ಕೇಂದ್ರಗಳು ಅವಧಿ ಮೀರಿದ ಔಷಧಿ ನೀಡಿ ವಂಚಿಸಿದರೆ, ಇತ್ತ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ರೇವಣಸಿದ್ದೇಶ್ವರ ಅಗ್ರೋ ಏಜೆನ್ಸಿ ಫರ್ಟಿಲೈಸರ್ ಅಂಗಡಿ ಮಾಲೀಕ ಗೊಬ್ಬರ ಹಾಗೂ ಇತರೆ ವಸ್ತುಗಳನ್ನು ಎಂಆರ್​ಪಿ ದರಕ್ಕಿಂತ ಎರಡು ಪಟ್ಟು ಜಾಸ್ತಿ ದರ ಪಡೆದು ರೈತರಿಗೆ ಮಾರಾಟ ಮಾಡುತ್ತಿವೆ. ರೈತರು ಗೊಬ್ಬರದ ಬಿಲ್ ಕೇಳಿದರೆ ನಕಲಿ ಬಿಲ್ ನೀಡಲಾಗುತ್ತಿದೆ. ಸದ್ಯ ರೈತ ಹಾಗೂ ಅಂಗಡಿ ಮಾಲೀಕರ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: ಕಾಮಗಾರಿ ನಡೆಯೋ ಜಾಗದಲ್ಲಿ ತಾತ್ಕಾಲಿಕ ಮೇಲ್ಸೇತುವೆ! ಕೋಲ್ಕತ್ತಾ ಕಂಪನಿ ಜೊತೆ ಹೊಸ ಪ್ರಯೋಗಕ್ಕೆ ಮುಂದಾದ ಜಿಬಿಎ

ದುಪ್ಪಟ್ಟು ದರಕ್ಕೆ ವಸ್ತುಗಳ ಮಾರಾಟ ಮಾಡಿದ ಶ್ರೀ ರೇವಣಸಿದ್ದೇಶ್ಚರ ಫರ್ಟಿಲೈಸರ್ ಅಂಗಡಿ ಹಾಗೂ ಅವಧಿ ಮೀರಿದ ಔಷಧಿ ಮಾರಾಟ ಮಾಡುತ್ತಿರುವ ಆರ್​ಎಸ್​ಕೆ ಕೇಂದ್ರಗಳ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us