ಕಲಬುರಗಿ: ಚಿಂಚೋಳಿ (Chincholi) ತಾಲೂಕಿನ ಐನೊಳ್ಳಿ ಗ್ರಾಮ ಪಂಚಾಯಿತಿಯ (Gram Panchayat) ಬಿಜೆಪಿ (BJP) ಬೆಂಬಲಿತ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಕಾಂಗ್ರೆಸ್ (Congress) ಕಾರ್ಯಕರ್ತರು ಅಪಹರಿಸಿರುವ ಆರೋಪ ಕೇಳಿಬಂದಿದೆ. ಆ.7 ರಂದು ಐನೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇದೆ. ಮಹಿಳಾ ಮೀಸಲಾತಿ ಇರುವ ಅಧ್ಯಕ್ಷ ಸ್ಥಾನಕ್ಕೆ ಏರಲು 10 ಸದಸ್ಯರ ಬೆಂಬಲ ಅವಶ್ಯಕತೆ ಇದೆ.
ಈ ನಡುವೆ ಜು.13ರಂದು 18 ಸದಸ್ಯರಲ್ಲಿ 11 ಸದಸ್ಯರು ಮಹಾರಾಷ್ಟ್ರದ ಪುಣೆಗೆ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿ ಹೋಟೆಲ್ವೊಂದರಲ್ಲಿ ವಾಸ್ತವ್ಯವಿದ್ದರು. ಶುಕ್ರವಾರ ಸಿನಿಮಿಯ ರೀತಿಯಲ್ಲಿ ಹೋಟೆಲ್ಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ನಾಲ್ವರು ಸದಸ್ಯರನ್ನು ಕರೆದುಕೊಂಡು ಹೋಗಿರುವ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯಿತಿ ಸದಸ್ಯರನ್ನು ಅಪಹರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುಣೆಯ ಚಿಕ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿಂದು ಗೃಹಜ್ಯೋತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ, ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ
ಮಹಿಳಾ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ಏರಲು 10 ಸದಸ್ಯರ ಬೆಂಬಲ ಬೇಕು. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಪರಿಶಿಷ್ಟ ಜಾತಿಯ (ಬಂಜಾರಾ ಹಾಗೂ ಎಸ್ಸಿ ಬಲ) ಮಹಿಳೆಯರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ