ಶಕ್ತಿ ಯೋಜನೆ ಬಳಿಕ ಮೊದಲ ಬಾರಿಗೆ ಗಾಣಾಗಾಪುರ ದತ್ತಾತ್ರೇಯ ಹುಂಡಿ ಎಣಿಕೆ, ದಾಖಲೆಯ ಮೊತ್ತ ಸಂಗ್ರಹ

ಶಕ್ತಿ ಯೋಜನೆ ಬಳಿಕ ಮೊದಲ ಬಾರಿಗೆ ಗಾಣಾಗಾಪುರ ದತ್ತಾತ್ರೇಯ ಹುಂಡಿ ಎಣಿಕೆ, ದಾಖಲೆಯ ಮೊತ್ತ ಸಂಗ್ರಹ

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on: Aug 21, 2023 | 10:56 AM

ಮಹಿಳೆಯರಿಗೆ ಉಚಿತ ಬಸ್​ ಕಲ್ಪಿಸಿಕೊಟ್ಟಿರುವ ಶಕ್ತಿ ಯೋಜನೆ ಜಾರಿಯಾದ ಬಳಿಕ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಾಗಾಪುರದ ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ. ಹಣದ ಜೊತೆ ಚಿನ್ನ, ಬೆಳ್ಳಿ ವಸ್ತುಗಳ ಕಾಣಿಕೆ ರೂಪದಲ್ಲಿ ಬಂದಿವೆ.

ಕಲಬುರಗಿ, (ಆಗಸ್ಟ್ 21) : ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಾಗಾಪುರದಲ್ಲಿರುವ ಶ್ರೀ ದತ್ತಾತ್ರೇಯ ಹುಂಡಿಗೆ ಲಕ್ಷಾಂತರ ರೂಪಾಯಿ ಹಣ ಹರಿದುಬಂದಿದೆ. ತಹಶಿಲ್ದಾರ್ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಸಮ್ಮುಖದಲ್ಲಿ ನಡೆದ ದತ್ತಾತ್ರೇಯ ದೇವರ ಹುಂಡಿಯ ಎಣಿಕೆ ಕಾರ್ಯ ಮುಗಿದಿದ್ದು, ಚಿನ್ನಾಭರಣ ಸೇರಿದಂತೆ 97,10,152 ರೂಪಾಯಿಗಳಷ್ಟು ಸಂಗ್ರಹವಾಗಿದೆ. 26ಗ್ರಾಂ ಚಿನ್ನ, 500ಗ್ರಾಂ ಬೆಳ್ಳಿ ಹುಂಡಿಯಲ್ಲಿ ಜಮೆಯಾಗಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಮೊದಲ ಬಾರಿ ಆಡಳಿತ ಮಂಡಳಿ ಹಣ ಎಣಿಕೆ ಮಾಡಿದ್ದು, ದಾಖಲೆಯ ಮೊತ್ತ ಸಂಗ್ರಹವಾಗಿದೆ.