AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್: ಮುಸ್ಲಿಮರು ಅಲಂಕಾರ ಮಾಡಿದ್ದಕ್ಕೆ ದೇಗುಲ ಶುದ್ಧೀಕರಣ ಮಾಡಿದ ಹಿಂದೂಗಳು

ಕಲಬುರಗಿಯ ರಾಮತೀರ್ಥ ಶಿವ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮುಸ್ಲಿಂ ಯುವಕರು ಪುಷ್ಪಾಲಂಕಾರ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ದೇವಸ್ಥಾನದ ಟ್ರಸ್ಟ್ ಕ್ರಮವನ್ನು ಖಂಡಿಸಿ, ಹಿಂದೂ ಕಾರ್ಯಕರ್ತರು ಗೋಮೂತ್ರದಿಂದ ಶಿವಲಿಂಗವನ್ನು ಶುದ್ಧೀಕರಿಸಿದ್ದಾರೆ. ಈ ಘಟನೆ ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್​​​​ಗೆ ಕಾರಣವಾಗಿದೆ.

ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್: ಮುಸ್ಲಿಮರು ಅಲಂಕಾರ ಮಾಡಿದ್ದಕ್ಕೆ ದೇಗುಲ ಶುದ್ಧೀಕರಣ ಮಾಡಿದ ಹಿಂದೂಗಳು
ಶಿವನ ಮಂದಿರ Image Credit source: tv9 kannada
ದತ್ತಾತ್ರೇಯ ಪಾಟೀಲ್​
| Edited By: |

Updated on: Feb 16, 2026 | 5:15 PM

Share

ಕಲಬುರಗಿ, ಫೆಬ್ರವರಿ 16: ಹಲಾಲ್ ಕಟ್, ಜಟ್ಕಾ ಕಟ್, ಹಿಜಾಬ್ ವಿವಾದಗಳ ಬಳಿಕ ಇದೀಗ ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದೆ. ಶಿವನ ದೇವಸ್ಥಾನಕ್ಕೆ (Shiva Temple) ಮುಸ್ಲಿಂ ಯುವಕರು (Muslim boys) ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಮುಸ್ಲಿಮರು ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಗೋಮೂತ್ರದಿಂದ ದೇವಸ್ಥಾನ ಶುದ್ಧೀಕರಣ ಮಾಡುವುದರ ಮ‌ೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಧರ್ಮ ದಂಗಲ್‌ ಶುರು

ಕಲಬುರಗಿಯಲ್ಲಿ ಧರ್ಮ ದಂಗಲ್ ಪ್ರಕರಣಗಳು ನಿಲ್ಲುವ ಹಾಗೆ ಕಾಣಿಸುತ್ತಿಲ್ಲ. ನಿನ್ನೆಯಷ್ಟೇ ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜಾವಿವಾದ, ಕಲಬುರಗಿಯ ಕೋಟೆ ಆವರಣದಲ್ಲಿ ಸ್ವಯಂ ಶಂಭೋ ದೇವಸ್ಥಾನದಲ್ಲಿ ಪೂಜೆಗೆ ಹೈಡ್ರಾಮಾ ನಡೆದಿತ್ತು. ಅದಾದ ಬಳಿಕ ಮತ್ತೊಂದು ಧರ್ಮದಂಗಲ್‌ ಶುರುವಾಗಿದೆ.

ಇದನ್ನೂ ಓದಿ: ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಬದಲಾವಣೆ: ಪೂಜೆ ಬಳಿಕ ಹಿಂದೂಗಳು ಸ್ಫೋಟಕ ಆರೋಪ

ಅಂದಹಾಗೆ ನಿನ್ನೆ ಮಹಾಶಿವರಾತ್ರಿ ಹಬ್ಬವನ್ನ ನಗರದ ಎಲ್ಲಾ ಶಿವನ ದೇವಸ್ಥಾನಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಅದರಂತೆ ನಗರದ ರಾಮತೀರ್ಥ ಶಿವನ ಮಂದಿರದಲ್ಲಿ ಶಿವರಾತ್ರಿ ನಿಮಿತ್ಯ ದೇವಸ್ಥಾನದ ಆವರಣ ಹಾಗೂ ಗರ್ಭ ಗುಡಿಯಲ್ಲಿನ ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು. ಆದರೆ ಆ ಪುಷ್ಪಾಲಂಕಾರ ಮಾಡಿದ್ದು ಹೂವಿನ ವ್ಯಾಪಾರ ಮಾಡುವ ಮುಸ್ಲಿಮರು.

ಮುಸ್ಲಿಂ ಯುವಕರು ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡುವ ವಿಡಿಯೋ ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಯಿತೋ, ಹಿಂದೂ ಸಂಘಟನೆಗಳು ರಾಮತೀರ್ಥ ದೇಗುಲ ಟ್ರಸ್ಟ್ ವಿರುದ್ಧ ಕಿಡಿಕಾರಿವೆ. ಅದರಂತೆ ಇಂದು ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಗೋಮೂತ್ರ ಹಾಕಿ ಶಿವಲಿಂಗ ಶುದ್ಧೀಕರಣ ಮಾಡಿದ್ದಾರೆ. ಬಳಿಕ ಶಾಸ್ತ್ರೋಕ್ತವಾಗಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.

ಟ್ರಸ್ಟ್ ನಡೆ ಖಂಡಿಸಿದ ಹಿಂದೂ ಸಂಘಟನೆಗಳು

ಇನ್ನು ಕಲಬುರಗಿ ನಗರದ ಐತಿಹಾಸಿಕ ಹಾಗೂ ಪುರಾತನ ಕಾಲದ ರಾಮತೀರ್ಥ ದೇಗುಲಕ್ಕೆ ಖುದ್ದು ರಾಮನೇ ಭೇಟಿ ನೀಡಿ ಶಿವಲಿಂಗ ಸ್ಥಾಪನೆ ಮಾಡಿದ್ದು, ಇಂತಹ ಪವಿತ್ರ ಶಿವನ ದೇವಸ್ಥಾನವನ್ನ ಅಲಂಕಾರ ಮಾಡಲು ಮುಸ್ಲಿಂರಿಗೆ ಏಕೆ ಕೊಟ್ಟಿದ್ದಿರಿ ಅಂತಾ ರಾಮತೀರ್ಥ ಟ್ರಸ್ಟ್ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮುಸ್ಲಿಂ ವ್ಯಾಪಾರಸ್ಥರಿಂದ ಪುಷ್ಪಾಲಂಕಾರ ಮಾಡುವ ಮೂಲಕ ಲಕ್ಷಾಂತರ ಭಕ್ತರ ಭಕ್ತಿಗೆ ಟ್ರಸ್ಟ್ ಅಪಚಾರ ಎಸಗಿದ್ದು, ಟ್ರಸ್ಟ್ ನಡೆಯನ್ನ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಮುಸ್ಲಿಂ ವ್ಯಾಪಾರಸ್ಥರು ರಾಮತೀರ್ಥ ಶಿವನ ಮಂದಿರಕ್ಕೆ ಪುಷ್ಪಾಲಂಕಾರ ಮಾಡುವುದು ಇದೇ ಮೊದಲಲ್ಲ. ಕಳೆದ ಸುಮಾರು ವರ್ಷಗಳಿಂದಲೂ ಮುಸ್ಲಿಂ ವ್ಯಾಪಾರಸ್ಥರೇ ಪ್ರತಿವರ್ಷ ಮಹಾಶಿವರಾತ್ರಿಯಂದು ರಾಮತೀರ್ಥ ಶಿವನ ಮಂದಿರಕ್ಕೆ ಹೂವಿನ ಅಲಂಕಾರ ಮಾಡುತ್ತಾ ಬಂದಿದ್ದಾರೆ. ಆದರೆ ಈ ವಿಚಾರ ನಮಗೆ ಈ ವರ್ಷ ತಿಳಿದೆ ಅಂತಾರೆ ಹಿಂದೂ ಸಂಘಟನೆ ಕಾರ್ಯಕರ್ತರು.

ಇದನ್ನೂ ಓದಿ: ಆಳಂದದ ದರ್ಗಾದಲ್ಲಿ ನಡೆಯುತ್ತೆ ಶಿವರಾತ್ರಿ ಪೂಜೆ: ದರ್ಗಾ ಸಮಿತಿಗೆ ಸುಪ್ರೀಂನಲ್ಲೂ ಶಾಕ್

ಒಟ್ಟಿನಲ್ಲಿ ರಾಮತೀರ್ಥ ದೇವಸ್ಥಾನಕ್ಕೆ ಮುಸ್ಲಿಂ ಯುವಕರು ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಸಿಡಿದ್ದೆದ್ದಿದ್ದು, ಈ ಮೂಲಕ ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್ ನಡೆಯುತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ದತ್ತಾತ್ರೇಯ ಪಾಟೀಲ್​
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
ಇಂದು ಈ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ಲಾಭ
ಇಂದು ಈ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ಲಾಭ
ದಸರಾ 2026: ಅ.16 ರಿಂದ 27 ರವರೆಗೆ 3,000 ಹೆಚ್ಚುವರಿ KSRTC ಬಸ್ ಸೇವೆ
ದಸರಾ 2026: ಅ.16 ರಿಂದ 27 ರವರೆಗೆ 3,000 ಹೆಚ್ಚುವರಿ KSRTC ಬಸ್ ಸೇವೆ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ